AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Day Gift Ideas : ಚಾಕೊಲೇಟ್ ಡೇಗೆ ಸ್ಪೆಷಲ್ ವ್ಯಕ್ತಿಗೆ ಈ ಉಡುಗೊರೆ ನೀಡಿ ಖುಷಿ ಪಡಿಸಿ

Valentine's Week 2025 : ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳ ಸಂಭ್ರಮ ಸಡಗರ ಹೆಚ್ಚಾಗುತ್ತದೆ. ಈ ತಿಂಗಳ ಏಳರಿಂದ ಹದಿನಾಲ್ಕರವರೆಗೆ ಒಂದೊಂದು ಆಚರಣೆಗಳು ಇರುತ್ತದೆ. ಹೀಗಾಗಿ ಪ್ರತಿ ದಿನವು ಪ್ರೇಮಿಗಳಿಗೆ ವಿಶೇಷ ದಿನವಾಗಿದ್ದು, ಈ ದಿನಗಳಲ್ಲಿ ಮೂರನೇ ದಿನ ಚಾಕೋಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಪ್ರೇಮಿಗೆ ಅಥವಾ ಸಂಗಾತಿಗೆ ವಿಶೇಷ ಉಡುಗೊರೆ ನೀಡಬೇಕೆಂದು ಕೊಂಡಿದ್ದರೆ ಈ ಉಡುಗೊರೆಯನ್ನು ನೀಡಬಹುದು. ಇಲ್ಲಿದೆ ಕೆಲವು ಟಿಪ್ಸ್

Chocolate Day Gift Ideas : ಚಾಕೊಲೇಟ್ ಡೇಗೆ ಸ್ಪೆಷಲ್ ವ್ಯಕ್ತಿಗೆ ಈ ಉಡುಗೊರೆ ನೀಡಿ ಖುಷಿ ಪಡಿಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 08, 2025 | 1:12 PM

Share

ಪ್ರೇಮಿಗಳ ವಾರ ಶುರುವಾಗಿದ್ದು, ಈ ವಾರದಲ್ಲಿ ಬರುವ ಪ್ರತಿಯೊಂದು ದಿನವು ವಿಶೇಷತೆಯಿಂದ ಕೂಡಿದೆ. ರೋಸ್ ಡೇ, ಪ್ರಪೋಸ್ ಡೇ ಆದ ನಂತರ ಬರುವುದೇ ಚಾಕೋಲೇಟ್ ಡೇ. ಈ ಚಾಕೊಲೇಟ್ ದಿನವು ಪ್ರೇಮಿಗಳ ವಾರದ ಮೂರನೇ ದಿನವಾಗಿದೆ. ಈ ಬಾರಿ ಕೂಡ ಫೆ. 9ರಂದು ಚಾಕೋಲೇಟ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನಕ್ಕೆ ನಿಮ್ಮ ಸಂಗಾತಿ ಅಥವಾ ಪ್ರೇಮಿಗೆ ಉಡಗೊರೆ ನೀಡಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ ಈ ಕೆಲವು ಗಿಫ್ಟ್ ಐಡಿಯಾಗಳು ಇಲ್ಲಿದೆ.

  • ಚಾಕೊಲೇಟ್ ಬೊಕ್ಕೆ: ಚಾಕೊಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನವಾಗಿದೆ. ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ನಿಮ್ಮ ಪ್ರೇಮಿಯೂ ಇಷ್ಟದ ಚಾಕೊಲೇಟ್ ಗಳನ್ನು ಹೂವಿನ ಬೊಕ್ಕೆ ರೀತಿ ಜೋಡಿಸಿ ಅದರಲ್ಲಿ ನಿಮ್ಮಿಬ್ಬರ ಫೋಟೋಗಳನ್ನು ಜೋಡಿಸಬಹುದು. ಈ ರೀತಿ ಉಡುಗೊರೆ ನೀಡಿದರೆ ಅದು ಖಂಡಿತ ನಿಮ್ಮವರಿಗೆ ಇಷ್ಟವಾಗುತ್ತದೆ.
  • ಚಾಕೊಲೇಟ್ ಬಾಸ್ಕೆಟ್ : ಚಾಕೊಲೇಟ್ ಎಂದರೆ ಹುಡುಗಿಯರೆ ಬಹಳ ಅಚ್ಚುಮೆಚ್ಚು. ಒಂದು ವೇಳೆ ನೀವು ಈ ದಿನದಂದು ಏನು ಗಿಫ್ಟ್ ನೀಡುವುದೆಂದು ಯೋಚಿಸುತ್ತಿದ್ದರೆ ಚಾಕೊಲೇಟ್ ಬಾಸ್ಕೆಟ್ ನೀಡುವುದು ಉತ್ತಮ ಆಯ್ಕೆಯಲ್ಲಿ ಒಂದು. ಈ ಬಾಸ್ಕೆಟ್ ನಲ್ಲಿ ಒಂದೇ ರೀತಿ ಚಾಕೊಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ಆಕರ್ಷಕ ಬಾಸ್ಕೆಟ್ ಸಿದ್ಧ ಮಾಡಿ. ಇದನ್ನು ನಿಮ್ಮ ಪ್ರೇಮಿಗೆ ಉಡುಗೊರೆಯಾಗಿ ಕೊಡಿ.
  • ಹೊಸ ಗ್ಯಾಜೆಟ್ : ದುಬಾರಿ ಉಡುಗೊರೆ ನೀಡಲು ಬಯಸಿದರೆ ನಿಮ್ಮ ಸಂಗಾತಿಗಾಗಿ ನೀವು ಕೆಲವು ರೀತಿಯ ಗ್ಯಾಜೆಟ್‌ಗಳನ್ನು ಸಹ ಖರೀದಿಸಬಹುದು. ಗ್ಯಾಜೆಟ್‌ಗಳಲ್ಲಿ, ನೀವು ಫೋನ್, ಟ್ಯಾಬ್ಲೆಟ್, ಹೆಡ್‌ಫೋನ್‌ಗಳು ನೀಡಬಹುದು. ಈ ಉಡುಗೊರೆಗಳು ನಿಮ್ಮವರಿಗೆ ಇಷ್ಟವಾಗುತ್ತವೆ.
  • ಕೈಯಿಂದ ಕೇಕ್ ತಯಾರಿಸಿ ತಿನ್ನಿಸಿ : ನಿಮ್ಮ ಪ್ರೇಮಿಗೆ ಅಥವಾ ಸಂಗಾತಿಗೆ ನೀಡುವ ಉಡುಗೊರೆಗೆ ವೈಯುಕ್ತಿಕ ಸ್ಪರ್ಶ ನೀಡಲು ಬಯಸಿದರೆ ನಿಮ್ಮ ಕೈಯಾರೆ ಏನನ್ನಾದರೂ ತಯಾರಿಸಿ ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡುವುದು ಉತ್ತಮ. ಉದಾಹರಣೆಗೆ ಚಾಕೊಲೇಟ್, ಕೇಕ್, ಪೇಸ್ಟ್ರಿ, ಕುಕೀಸ್ ಇತ್ಯಾದಿಗಳನ್ನು ತಯಾರಿಸಿ ತಿನ್ನಿಸಬಹುದು.
  • ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತವಾಗಿದ್ದು, ಚಾಕೊಲೇಟ್ ದಿನದಂದು ಜೊತೆಗೆ ಕೆಂಬಣ್ಣದ ಗುಲಾಬಿ ಹೂವನ್ನು ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಈ ರೀತಿಯ ಉಡುಗೊರೆಯೂ ನಿಮ್ಮ ಪ್ರೇಮಿಯ ಮನಸ್ಸಿಗೆ ಹತ್ತಿರವಾಗುತ್ತದೆ.
  • ಚಾಕೊಲೇಟ್ ಜೊತೆ ಟೆಡ್ಡಿಯಿರಲಿ : ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಚಾಕೊಲೇಟ್ ಡೇಗೆ ನಿಮ್ಮ ಮನದರಸಿಯನ್ನು ಇಂಪ್ರೆಸ್ ಮಾಡಲು ಚಾಕೊಲೇಟ್ ನೀಡಿದರೆ ಸಾಕಾಗುವುದಿಲ್ಲ. ದೊಡ್ಡದಾದ ಟೆಡ್ಡಿಯೊಂದಿಗೆ ಚಾಕೋಲೇಟನ್ನು ಗಿಫ್ಟ್ ಆಗಿ ನೀಡಬಹುದು.
  • ಚಾಕೊಲೇಟ್ ಕೇಕ್: ಬಹುತೇಕರಿಗೆ ಚಾಕೊಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಈ ದಿನವನ್ನು ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಚಾಕೊಲೇಟ್ ಕೇಕ್ ಕತ್ತರಿಸಿ ಈ ದಿನವನ್ನು ವಿಭಿನ್ನವಾಗಿ ಆನಂದಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ