AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುರಿದ ಅಗಸೆ ಬೀಜದಲ್ಲಿ ಉತ್ತಮ ಆರೋಗ್ಯ, ಅದರಲ್ಲಿದೆ 7 ಪ್ರಯೋಜನಗಳು

ನಿಮ್ಮ ಆಹಾರದಲ್ಲಿ ಒಂದು ಟೀ ಚಮಚದಷ್ಟು ಹುರಿದ ಅಗಸೆ ಬೀಜ ಸೇರಿಸಿಕೊಂಡರೆ, 37 ಕ್ಯಾಲೊರಿಗಳನ್ನು ಒದಗಿಸುತ್ತದೆ ಮತ್ತು ಫೈಬರ್, ಪ್ರೋಟೀನ್, ಸತುವುಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಅಗಸೆ ಬೀಜಗಳು ನಿಮ್ಮ ಆಹಾರಕ್ಕೆ ಆರೋಗ್ಯದಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ. ಹಾಗಾಗಿ ಹುರಿದ ಅಗಸೆ ಬೀಜವನ್ನು ನಿಮ್ಮ ಆಹಾರದಲ್ಲಿ ಸೇರಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಹುರಿದ ಅಗಸೆ ಬೀಜದಲ್ಲಿ ಉತ್ತಮ ಆರೋಗ್ಯ, ಅದರಲ್ಲಿದೆ 7 ಪ್ರಯೋಜನಗಳು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 08, 2025 | 3:19 PM

Share

ಅಗಸೆ ಬೀಜಗಳು ನಿಮ್ಮ ಆಹಾರಕ್ಕೆ ಆರೋಗ್ಯದಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ. ಇದು ಪೋಷಕಾಂಶವನ್ನು ಹೊಂದಿರುವ ಬೀಜವಾಗಿದೆ. ಇದನ್ನು ನಿಮ್ಮ ಆಹಾರದಲ್ಲಿ ಒಂದು ಟೀ ಚಮಚದಷ್ಟು ಸೇರಿಸಿಕೊಂಡರೆ 37 ಕ್ಯಾಲೊರಿಗಳನ್ನು ಒದಗಿಸುತ್ತದೆ ಮತ್ತು ಫೈಬರ್, ಪ್ರೋಟೀನ್, ಸತುವುಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಇದನ್ನು ಹುರಿದು ನಮ್ಮ ಆಹಾರಕ್ಕೆ ಸೇರಿಕೊಂಡರ. ಇನ್ನು ಅತ್ಯುತ್ತಮವಾಗಿರುತ್ತದೆ. ಅಗಸೆ ಬೀಜಗಳನ್ನು ಹುರಿದು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಉಂಟು ಮಾಡಬಹುದು.

ಹುರಿದ ಅಗಸೆ ಬೀಜಗಳನ್ನು ತಿನ್ನುವುದರಿಂದಾಗುವ 7 ಪ್ರಯೋಜನಗಳು

  1. ಕೂದಲು ಮತ್ತು ಚರ್ಮ ಉತ್ತಮವಾಗಿರುತ್ತದೆ: ಹುರಿದ ಅಗಸೆ ಬೀಜಗಳು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರ ಒಮೆಗಾ ಕೊಬ್ಬಿನಾಮ್ಲಗಳು ಸಾಕಷ್ಟು ಪೋಷಣೆಯನ್ನು ಒದಗಿಸುವ ಮೂಲಕ ಮತ್ತು ಸ್ವತಂತ್ರ ರಾಡಿಕಲ್‌ಗಳನ್ನು ನಿಯಂತ್ರಿಸುವ ಮೂಲಕ ಕೂದಲು ಕಿರುಚೀಲಗಳು ಮತ್ತು ಚರ್ಮದ ಕೋಶಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  2. ಶಕ್ತಿ ವರ್ಧಕ: ಅನೇಕ ಜನರು ಬೆಳಿಗ್ಗೆ ಎದ್ದೇಳುವಾಗ ಆಯಾಸ ಮತ್ತು ಶಕ್ತಿಯ ಕೊರತೆಯಿಂದಾಗಿ ದಣಿದ ಭಾವನೆ ಹೊಂದಿರುತ್ತಾರೆ; ಆದ್ದರಿಂದ, ಹುರಿದ ಅಗಸೆಬೀಜವನ್ನು ತಿನ್ನುವುದು ಪ್ರಯೋಜನಕಾರಿಯಾಗಿದೆ. ಹುರಿದ ಅಗಸೆಬೀಜದಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ, ಮತ್ತು ನೀವು ಅದನ್ನು ನೇರವಾಗಿ ತಿನ್ನಬಹುದು ಅಥವಾ ಪುಡಿ ಮಾಡಿ ಬ್ರೆಡ್ ಅಥವಾ ಸ್ಯಾಂಡ್‌ವಿಚ್‌ನಲ್ಲಿ ತಿನ್ನಬಹುದು.
  3. ಹುರಿದ ಅಗಸೆ ಬೀಜಗಳು ನಿದ್ರೆಯನ್ನು ಸುಧಾರಿಸುತ್ತವೆ: ಹುರಿದ ಅಗಸೆಬೀಜವನ್ನು ಸ್ವಲ್ಪ ಹಾಲಿನಲ್ಲಿ ಬೆರೆಸಿ ಅಥವಾ ಪುಡಿ ಮಾಡಿ ಹಾಲಿನ ಜತೆಗೆ ಕುಡಿದರೆ ಇನ್ನು ಉತ್ತಮ. ಪ್ರತಿದಿನ ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ. ಇದು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿದ್ರೆಯನ್ನು ನಿಯಂತ್ರಿಸಲು ಮತ್ತು ಹೆಚ್ಚಿಸಲು ಅಗತ್ಯವಾದ ಸಿರೊಟೋನಿನ್ ಹಾರ್ಮೋನ್ ಉತ್ಪಾದನೆ ಮಾಡುತ್ತದೆ.
  4. ಮೆದುಳಿನ ಶಕ್ತಿ ಹೆಚ್ಚಿಸುವುದು: ದಾಲ್ ರೈಸ್ ಅಥವಾ ತಿಂಡಿಗಳ ಜತೆಗೆ ಹುರಿದು ತಿಂದರೆ ಇನ್ನು ಉತ್ತಮವಾಗಿರುತ್ತದೆ. ಅಗಸೆ ಬೀಜಗಳನ್ನು ಹುರಿದು ತಿನ್ನುವುದರಿಂದ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಅಗಸೆ ಬೀಜಗಳು ಹೆಚ್ಚಿನ ಪ್ರಮಾಣದಲ್ಲಿ ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ , ಇದು ಮೆದುಳಿನ ಶಕ್ತಿಯನ್ನು ವೇಗವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಅವು ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮನಸ್ಸನ್ನು ಚುರುಕುಗೊಳಿಸುತ್ತದೆ.
  5. ಹುರಿದ ಅಗಸೆ ಬೀಜಗಳು ಮಲಬದ್ಧತೆಯನ್ನು ನಿವಾರಿಸುತ್ತದೆ: ಮಲಬದ್ಧತೆ ತೊಂದರೆ ಇರುವವರು, ಈ ಸಮಸ್ಯೆಯನ್ನು ತೊಡೆದುಹಾಕಲು, ನೀವು ಹೆಚ್ಚಿನ ಫೈಬರ್ ಹುರಿದ ಅಗಸೆ ಬೀಜಗಳನ್ನು ಸೇವಿಸಬಹುದು.
  6. ಕೊಲೆಸ್ಟ್ರಾಲ್‌ಗೆ ಹುರಿದ ಅಗಸೆ ಬೀಜಗಳು: ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಿದ್ದರೆ, ಅಗಸೆಬೀಜವನ್ನು ಹುರಿದು ಬೆಳಿಗ್ಗೆ ಒಂದು ಚಮಚ ಮತ್ತು ಸಂಜೆ ಒಂದು ಚಮಚ ತೆಗೆದುಕೊಳ್ಳಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  7. ತೂಕ ಇಳಿಸಿಕೊಳ್ಳಲು ಹುರಿದ ಅಗಸೆ ಬೀಜಗಳು: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿ ಊಟದ ನಂತರ ಅವುಗಳನ್ನು ಹುರಿದು ತಿನ್ನಿರಿ. ಈ ಬೀಜಗಳಲ್ಲಿರುವ ಪ್ರೋಟೀನ್ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ . ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ