Gold Silver Price on 01 July: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಇಳಿಕೆ; ದುಬೈನಲ್ಲಿ ತುಸು ಇಳಿಕೆ, ಇಲ್ಲಿದೆ ಇವತ್ತಿನ ದರಗಳು

|

Updated on: Jul 01, 2023 | 5:00 AM

Bullion Market 2023, July 1st: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 53,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 58,850 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 71.40 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 01 July: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಇಳಿಕೆ; ದುಬೈನಲ್ಲಿ ತುಸು ಇಳಿಕೆ, ಇಲ್ಲಿದೆ ಇವತ್ತಿನ ದರಗಳು
ಚಿನ್ನ
Follow us on

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಈ ವಾರ ಏರಿಳಿತಗಳನ್ನು ಕಂಡಿದೆ. ಸತತ ಮೂರು ದಿನ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ ತುಸು ಇಳಿಕೆ ಕಂಡಿದೆ. ದೇಶದಲ್ಲೇ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಅತಿಕಡಿಮೆ ಇದೆ. ಚಿನ್ನದ ಬೆಲೆ ಭಾರತ ಹಾಗೂ ವಿವಿಧ ವಿದೇಶೀ ಮಾರುಕಟ್ಟೆಗಳಲ್ಲಿ ಅಲ್ಪ ಏರಿಕೆ ಕಂಡಿದೆ. ಆದರೂ ಆಭರಣ ಪ್ರಿಯರಿಗೆ ನಿರಾಸೆಯಾಗುವಷ್ಟು ಏರಿಕೆಯಾಗಿಲ್ಲ. ಹೂಡಿಕೆಯಾಗಿ ಚಿನ್ನ ಖರೀದಿಸುವವರಿಗೂ ಇದು ಸಕಾಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 53,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 58,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,140 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 53,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,125 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 1ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,850 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 714 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,850 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 712.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 53,950 ರೂ
  • ಚೆನ್ನೈ: 54,300 ರೂ
  • ಮುಂಬೈ: 53,950 ರೂ
  • ದೆಹಲಿ: 54,100 ರೂ
  • ಕೋಲ್ಕತಾ: 53,950 ರೂ
  • ಕೇರಳ: 53,950 ರೂ
  • ಅಹ್ಮದಾಬಾದ್: 53,950 ರೂ
  • ಜೈಪುರ್: 54,100 ರೂ
  • ಲಕ್ನೋ: 54,100 ರೂ
  • ಭುವನೇಶ್ವರ್: 53,950 ರೂ

ಇದನ್ನೂ ಓದಿArecanut Price 30 June: ಇಂದಿನ ಅಡಿಕೆ ಧಾರಣೆ, ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ದರ ಹೀಗಿದೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,870 ರಿಂಗಿಟ್ (50,735 ರುಪಾಯಿ)
  • ದುಬೈ: 2135 ಡಿರಾಮ್ (47,693 ರುಪಾಯಿ)
  • ಅಮೆರಿಕ: 590 ಡಾಲರ್ (48,410 ರುಪಾಯಿ)
  • ಸಿಂಗಾಪುರ: 805 ಸಿಂಗಾಪುರ್ ಡಾಲರ್ (48,785 ರುಪಾಯಿ)
  • ಕತಾರ್: 2,210 ಕತಾರಿ ರಿಯಾಲ್ (49,799 ರೂ)
  • ಓಮನ್: 233.50 ಒಮಾನಿ ರಿಯಾಲ್ (49,757 ರುಪಾಯಿ)
  • ಕುವೇತ್: 184 ಕುವೇತಿ ದಿನಾರ್ (49,103 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,125 ರೂ
  • ಚೆನ್ನೈ: 7,480 ರೂ
  • ಮುಂಬೈ: 7,140 ರೂ
  • ದೆಹಲಿ: 7,140 ರೂ
  • ಕೋಲ್ಕತಾ: 7,140 ರೂ
  • ಕೇರಳ: 7,480 ರೂ
  • ಅಹ್ಮದಾಬಾದ್: 7,140 ರೂ
  • ಜೈಪುರ್: 7,140 ರೂ
  • ಲಕ್ನೋ: 7,140 ರೂ
  • ಭುವನೇಶ್ವರ್: 7,480 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ