Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ದಾಖಲೆ; ಇಲ್ಲಿದೆ ದರಪಟ್ಟಿ

Bullion Market 2025 March 18th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡು ಇಂದು ಭರ್ಜರಿ ಏರಿಕೆ ಕಂಡಿವೆ. ಎರಡೂ ಕೂಡ ಹೊಸ ದಾಖಲೆ ಸೃಷ್ಟಿಸಿವೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಒಂದು ಗ್ರಾಮ್​​ಗೆ 9,000 ರೂ ಆಗಿದೆ. 18 ಕ್ಯಾರಟ್ ಆಭರಣ ಚಿನ್ನದ ಬೆಲೆ 6,750 ರೂಗೆ ಏರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 104 ರೂಗೆ ಏರಿದರೆ, ಚಿನ್ನೈ ಮೊದಲಾದೆಡೆ 113 ರೂಗೆ ಹೆಚ್ಚಳ ಕಂಡಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ದಾಖಲೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Mar 18, 2025 | 10:30 AM

ಬೆಂಗಳೂರು, ಮಾರ್ಚ್ 18: ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ದಾಖಲೆ ಬರೆದಿದೆ. ಅಪರಂಜಿ ಚಿನ್ನದ ಬೆಲೆ 9,000 ರೂ ಗಡಿ ಮುಟ್ಟಿದೆ. ಆಭರಣ ಚಿನ್ನದ ಬೆಲೆ 8,250 ರೂಗೆ ಏರಿದೆ. ಭಾರತದಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ನಿನ್ನೆ ಸ್ವಲ್ಪ ಮಟ್ಟಿಗೆ ಇಳಿದಿದ್ದು ತಾತ್ಕಾಲಿಕ ವಿರಾಮ ಮಾತ್ರವೇ. ಈ ಹಳದಿ ಲೋಹದ ಬೆಲೆ ಮತ್ತೆ ಏರುಗತಿಗೆ ಬಂದಿದೆ. ಬೆಳ್ಳಿ ಬೆಲೆಯೂ ದಾಖಲೆ ಮೀರಿ ಹೋಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಮೊದಲ ಬಾರಿಗೆ 104 ರೂ ಗಡಿ ಮುಟ್ಟಿದೆ. ಚೆನ್ನೈ ಮೊದಲಾದ ಕಡೆ ಇದರ ಬೆಲೆ 113 ರೂ ಆಗಿಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 82,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 90,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 82,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,400 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 18ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,000 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,500 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,040 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,040 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 82,500 ರೂ
  • ಚೆನ್ನೈ: 82,500 ರೂ
  • ಮುಂಬೈ: 82,500 ರೂ
  • ದೆಹಲಿ: 82,650 ರೂ
  • ಕೋಲ್ಕತಾ: 82,500 ರೂ
  • ಕೇರಳ: 82,500 ರೂ
  • ಅಹ್ಮದಾಬಾದ್: 82,550 ರೂ
  • ಜೈಪುರ್: 82,650 ರೂ
  • ಲಕ್ನೋ: 82,650 ರೂ
  • ಭುವನೇಶ್ವರ್: 82,500 ರೂ

ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಸುಗ್ಗಿ; ನೇರ ತೆರಿಗೆ ಸಂಗ್ರಹ ಶೇ. 16.2 ಏರಿಕೆ; ಎಸ್​ಟಿಟಿಯಲ್ಲೂ ಹೈಜಂಪ್

ಇದನ್ನೂ ಓದಿ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ
ವಿಶ್ವದ ಶೇ. 11ರಷ್ಟು ಚಿನ್ನ ಭಾರತೀಯ ಹೆಂಗಸರ ಬಳಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,220 ರಿಂಗಿಟ್ (82,340 ರುಪಾಯಿ)
  • ದುಬೈ: 3,350 ಡಿರಾಮ್ (79,100 ರುಪಾಯಿ)
  • ಅಮೆರಿಕ: 910 ಡಾಲರ್ (78,920 ರುಪಾಯಿ)
  • ಸಿಂಗಾಪುರ: 1,243 ಸಿಂಗಾಪುರ್ ಡಾಲರ್ (80,910 ರುಪಾಯಿ)
  • ಕತಾರ್: 3,380 ಕತಾರಿ ರಿಯಾಲ್ (80,410 ರೂ)
  • ಸೌದಿ ಅರೇಬಿಯಾ: 3,420 ಸೌದಿ ರಿಯಾಲ್ (79,080 ರುಪಾಯಿ)
  • ಓಮನ್: 355 ಒಮಾನಿ ರಿಯಾಲ್ (79,970 ರುಪಾಯಿ)
  • ಕುವೇತ್: 274 ಕುವೇತಿ ದಿನಾರ್ (77,140 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,400 ರೂ
  • ಚೆನ್ನೈ: 11,300 ರೂ
  • ಮುಂಬೈ: 10,400 ರೂ
  • ದೆಹಲಿ: 10,400 ರೂ
  • ಕೋಲ್ಕತಾ: 10,400 ರೂ
  • ಕೇರಳ: 11,300 ರೂ
  • ಅಹ್ಮದಾಬಾದ್: 10,400 ರೂ
  • ಜೈಪುರ್: 10,400 ರೂ
  • ಲಕ್ನೋ: 10,400 ರೂ
  • ಭುವನೇಶ್ವರ್: 11,300 ರೂ
  • ಪುಣೆ: 10,400

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us