AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಕ್ಕೆ ತೆರಿಗೆ ಸುಗ್ಗಿ; ನೇರ ತೆರಿಗೆ ಸಂಗ್ರಹ ಶೇ. 16.2 ಏರಿಕೆ; ಎಸ್​ಟಿಟಿಯಲ್ಲೂ ಹೈಜಂಪ್

Direct tax collections in India: ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸಂಗ್ರಹವಾದ ನೇರ ತೆರಿಗೆಗಳ ಮೊತ್ತ 25 ಲಕ್ಷ ಕೋಟಿ ರೂ ದಾಟಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರ್ಕಾರಕ್ಕೆ ಶೇ. 16ರಷ್ಟು ಹೆಚ್ಚು ಡೈರೆಕ್ಟ್ ಟ್ಯಾಕ್ಸ್ ಸಿಕ್ಕಿದೆ. ಕಾರ್ಪೊರೇಟ್ ಟ್ಯಾಕ್ಸ್ ಮತ್ತು ನಾನ್ ಕಾರ್ಪೊರೇಟ್ ಟ್ಯಾಕ್ಸ್ ಸಂಗ್ರಹದಲ್ಲಿ ಈ ವರ್ಷ ಗಣನೀಯ ಹೆಚ್ಚಳ ಆಗಿದೆ.

ಸರ್ಕಾರಕ್ಕೆ ತೆರಿಗೆ ಸುಗ್ಗಿ; ನೇರ ತೆರಿಗೆ ಸಂಗ್ರಹ ಶೇ. 16.2 ಏರಿಕೆ; ಎಸ್​ಟಿಟಿಯಲ್ಲೂ ಹೈಜಂಪ್
ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 17, 2025 | 6:55 PM

ನವದೆಹಲಿ, ಮಾರ್ಚ್ 17: ಭಾರತದಲ್ಲಿ ಈ ಹಣಕಾಸು ವರ್ಷ ಸಖತ್ ಟ್ಯಾಕ್ಸ್ ಕಲೆಕ್ಷನ್ಸ್ ಆಗುತ್ತಿದೆ. ನಿನ್ನೆಯವರೆಗೂ, ಅಂದರೆ 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 16ರವರೆಗೂ 25.86 ಲಕ್ಷ ಕೋಟಿ ರೂನಷ್ಟು ನೇರ ತೆರಿಗೆಗಳು (Direct tax collection) ಸಂಗ್ರಹ ಆಗಿವೆ. ಸಿಬಿಡಿಟಿ ಇಂದು ಸೋಮವಾರ ದತ್ತಾಂಶ ಪ್ರಕಟಿಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್​​ನಲ್ಲಿ ಶೇ 16.15ರಷ್ಟು ಹೆಚ್ಚಳ ಆಗಿದೆ. ಆದಾಯಕ್ಕೆ ವಿಧಿಸುವ ವಿವಿಧ ತೆರಿಗೆಗಳು ಡೈರೆಕ್ಟ್ ಟ್ಯಾಕ್ಸ್ ಎನಿಸುತ್ತವೆ. ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್, ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ಟ್ಯಾಕ್ಸ್ ಇತ್ಯಾದಿ ಈ ಗುಂಪಿಗೆ ಸೇರುತ್ತವೆ. ಜಿಎಸ್​​ಟಿ ಇತ್ಯಾದಿ ಸರಕುಗಳಿಗೆ ವಿಧಿಸುವ ತೆರಿಗೆಯು ಇನ್​​ಡೈರೆಕ್ಟ್ ಅಥವಾ ಪರೋಕ್ಷ ತೆರಿಗೆ ಎನಿಸುತ್ತದೆ.

ಕಾರ್ಪೊರೇಟ್ ಟ್ಯಾಕ್ಸ್, ಎಸ್​​ಟಿಟಿ ಸಂಗ್ರಹದಲ್ಲಿ ಗಣನೀಯ ಹೆಚ್ಚಳ

ಕಾರ್ಪೊರೇಟ್ ತೆರಿಗೆಗಳು ಹಿಂದಿನ ಹಣಕಾಸು ವರ್ಷದಲ್ಲಿ 10.1 ಲಕ್ಷ ಕೋಟಿ ರೂನಷ್ಟು ಸಿಕ್ಕಿದ್ದವು. ಈ ವರ್ಷ ಇಲ್ಲಿಯವರೆಗೆ 12.40 ಲಕ್ಷ ಕೋಟಿ ರೂನಷ್ಟು ಕಾರ್ಪೊರೇಟ್ ಟ್ಯಾಕ್ಸ್ ಅನ್ನು ಸರ್ಕಾರ ಪಡೆದಿದೆ.

ಇದನ್ನೂ ಓದಿ: ಭಾರತದ ಟ್ರೇಡ್ ಡೆಫಿಸಿಟ್​​ನಲ್ಲಿ ಗಣನೀಯ ಇಳಿಕೆ; ನಾಲ್ಕು ವರ್ಷದ ಕನಿಷ್ಠ ಮಟ್ಟ

ಇದನ್ನೂ ಓದಿ
Image
ಸರಕು ವ್ಯಾಪಾರ ಕೊರತೆಯಲ್ಲಿ ಗಣನೀಯ ಇಳಿಕೆ
Image
ಫೆಬ್ರುವರಿಯಲ್ಲಿ ಹೋಲ್​ಸೇಲ್ ಹಣದುಬ್ಬರ ಶೇ. 2.38ಕ್ಕೆ ಏರಿಕೆ
Image
ಏಪ್ರಿಲ್ 1ರಿಂದ ಹೊಸ ಟಿಡಿಎಸ್ ನಿಯಮಗಳು ಜಾರಿಗೆ
Image
ಭಾರತದ ಫಾರೆಕ್ಸ್ ರಿಸರ್ವ್ಸ್ 653.96 ಡಾಲರ್​ಗೆ ಏರಿಕೆ

ನಾನ್-ಕಾರ್ಪೊರೇಟ್ ಟ್ಯಾಕ್ಸ್ ಸಂಗ್ರಹ 10.91 ಲಕ್ಷ ಕೋಟಿ ರೂನಿಂದ 12.90 ಲಕ್ಷ ಕೋಟಿ ರೂಗೆ ಏರಿಕೆ ಆಗಿದೆ. ಷೇರು ವಹಿವಾಟಿನಲ್ಲಿ ಸಂಗ್ರಹಿಸಲಾಗುವ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್​​ಟಿಟಿ) ಹೈಜಂಪ್ ಆಗಿದೆ. ಹಿಂದಿನ ವರ್ಷದಲ್ಲಿ 34,131 ಕೋಟಿ ರೂ ಇದ್ದ ಎಸ್​​ಟಿಟಿ ಈ ಬಾರಿ ಇಲ್ಲಿಯವರೆಗೆ 53,096 ಕೋಟಿ ರೂ ಆಗಿದೆ. ವೆಲ್ತ್ ಟ್ಯಾಕ್ಸ್​​ನಲ್ಲಿ ಈ ಬಾರಿ ತುಸು ಕಡಿಮೆ ಆಗಿದೆ. 3,656 ಕೋಟಿ ರೂ ಇದ್ದ ವೆಲ್ತ್ ಟ್ಯಾಕ್ಸ್ ಈಗ 3,399 ಕೋಟಿ ರೂ ಮೊತ್ತದಷ್ಟು ಮಾತ್ರವೇ ಸಂಗ್ರಹ ಆಗಿರುವುದು.

ನೇರ ತೆರಿಗೆಗಳೆಂದರೆ ಯಾವುವು?

ವ್ಯಕ್ತಿಗಳು ಮತ್ತು ಬಿಸಿನೆಸ್ ಸಂಸ್ಥೆಗಳು ಸರ್ಕಾರಕ್ಕೆ ನೇರವಾಗಿ ಪಾವತಿಸುವ ತೆರಿಗೆಯೇ ಡೈರೆಕ್ಟ್ ಟ್ಯಾಕ್ಸ್. ಇದರಲ್ಲಿ ಪರ್ಸನಲ್ ಇನ್ಕಮ್ ಟ್ಯಾಕ್ಸ್, ಕಾರ್ಪೊರೇಟ್ ಟ್ಯಾಕ್ಸ್, ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್, ವೆಲ್ತ್ ಟ್ಯಾಕ್ಸ್, ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್, ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ಟ್ಯಾಕ್ಸ್ ಮೊದಲಾದವರು ಒಳಗೊಳ್ಳುತ್ತವೆ.

ಇದನ್ನೂ ಓದಿ: ಫೆಬ್ರುವರಿಯಲ್ಲಿ ಹೋಲ್​ಸೇಲ್ ಹಣದುಬ್ಬರ ಶೇ. 2.38; ಜನವರಿಗೆ ಹೋಲಿಸಿದರೆ ಅಲ್ಪ ಹೆಚ್ಚಳ

ಭಾರತದಲ್ಲಿ ತೆರಿಗೆ ಸಂಗ್ರಹ ಹೆಚ್ಚಿರುವುದು ದೇಶದ ಹಣಕಾಸು ಆರೋಗ್ಯದ ಸಂಕೇತವಾಗಿದೆ. ಸರ್ಕಾರದ ಆದಾಯ ಪ್ರಮಾಣ ಹೆಚ್ಚಾಗುತ್ತದೆ. ಸಾಲದ ಹೊರೆ ತಗ್ಗಿಸಲು ಸಹಾಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Mon, 17 March 25

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?