Sign In

By signing in or creating an account, you agree with Associated Broadcasting Company's Terms & Conditions and Privacy Policy.

Forex Reserves: 654 ಬಿಲಿಯನ್ ಡಾಲರ್ ಮುಟ್ಟಿದ ಫಾರೆಕ್ಸ್ ರಿಸರ್ವ್ಸ್; ಎರಡು ವರ್ಷದಲ್ಲೇ ಅತಿಹೆಚ್ಚು ಏರಿಕೆ

Forex reserves of India: ಭಾರತದ ಫಾರೆಕ್ಸ್ ರಿಸರ್ವ್ಸ್ ಮಾರ್ಚ್ 7ಕ್ಕೆ 653.966 ಬಿಲಿಯನ್ ಡಾಲರ್ ಮಟ್ಟದಲ್ಲಿದೆ ಎಂದು ಆರ್​​ಬಿಐ ಡಾಟಾ ಹೇಳುತ್ತಿದೆ. ಒಂದು ವಾರದಲ್ಲಿ 15.267 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ ಆಗಿದೆ. ಕಳೆದ ಎರಡು ವರ್ಷದಲ್ಲಿ ಒಂದು ವಾರದಲ್ಲಿ ಕಂಡ ಗರಿಷ್ಟ ಏರಿಕೆ ಅದು. ಫಾರೆಕ್ಸ್ ನಿಧಿಯ ಏರಿಕೆಯಲ್ಲಿ ಫಾರೀನ್ ಕರೆನ್ಸಿ ಆಸ್ತಿ ಪಾಲು ಅತಿಹೆಚ್ಚು.

Forex Reserves: 654 ಬಿಲಿಯನ್ ಡಾಲರ್ ಮುಟ್ಟಿದ ಫಾರೆಕ್ಸ್ ರಿಸರ್ವ್ಸ್; ಎರಡು ವರ್ಷದಲ್ಲೇ ಅತಿಹೆಚ್ಚು ಏರಿಕೆ
ಫಾರೆಕ್ಸ್ ಮೀಸಲು ನಿಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 16, 2025 | 10:58 AM

ನವದೆಹಲಿ, ಮಾರ್ಚ್ 16: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಒಂದು ವಾರದಲ್ಲಿ 15.267 ಬಿಲಿಯನ್ ಡಾಲರ್​​ನಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವರ್ಷದಲ್ಲೇ ಒಂದು ವಾರದ ಫಾರೆಕ್ಸ್ ರಿಸರ್ವ್ಸ್ ಕಂಡ ಗರಿಷ್ಠ ಏರಿಕೆ ಆಗಿದೆ. ಆರ್​​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್ 7ರಂದು ಅಂತ್ಯಗೊಂಡ ವಾರದಲ್ಲಿ ಈ ಏರಿಕೆ ಆಗಿದೆ. ಇದರೊಂದಿಗೆ ಭಾರತದ ಫಾರೆಕ್ಸ್ ಮೀಸಲು ನಿಧಿ 653.966 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಹಿಂದಿನ ವಾರದಲ್ಲಿ ಅದು 638.698 ಬಿಲಿಯನ್ ಡಾಲರ್​​ನಷ್ಟಿತ್ತು.

ಮಾರ್ಚ್ 3ರಿಂದ 7ರವರೆಗೆ ಏರಿಕೆಯಾದ 15.267 ಬಿಲಿಯನ್ ಡಾಲರ್​ ಫಾರೆಕ್ಸ್ ಮೀಸಲು ನಿಧಿಯಲ್ಲಿ ವಿದೇಶೀ ಕರೆನ್ಸಿ ಆಸ್ತಿಯದ್ದೇ ಸಿಂಹಪಾಲು. ಇದು 13.993 ಬಿಲಿಯನ್ ಡಾಲರ್​​ನಷ್ಟು ಹಿಗ್ಗಿದೆ. ಚಿನ್ನವೂ ಕೂಡ 1.053 ಬಿಲಿಯನ್ ಡಾಲರ್​​ನಷ್ಟು ಹೆಚ್ಚಳ ಆಗಿದೆ. ಎಸ್​​​ಡಿಆರ್​​ಗಳು 212 ಮಿಲಿಯನ್ ಡಾಲರ್​ನಷ್ಟು ಹೆಚ್ಚಳಗೊಂಡಿವೆ. ಆದರೆ, ಐಎಂಎಫ್​ನೊಂದಿಗಿನ ಮೀಸಲು ಸ್ಥಾನವು 69 ಮಿಲಿಯನ್ ಡಾಲರ್​ನಷ್ಟು ಇಳಿಕೆ ಆಗಿದೆ.

ಇದನ್ನೂ ಓದಿ: ಆರ್​ಬಿಐ ಈ ವರ್ಷ ಇನ್ನೂ ಮೂರು ಬಾರಿ ಬಡ್ಡಿದರ ಕಡಿತಗೊಳಿಸಬಹುದು: ಎಸ್​​ಬಿಐ ವರದಿ

ಇದನ್ನೂ ಓದಿ
Image
ಏಪ್ರಿಲ್​ನಲ್ಲೂ ಬಡ್ಡಿದರ ಕಟ್; 2025ರಲ್ಲಿ 4 ಬಾರಿ ಬಡ್ಡಿಕಡಿತ?
Image
ಹತ್ತು ವರ್ಷದಲ್ಲಿ ಹತ್ತು ಲಕ್ಷಕ್ಕೇರಲಿದೆ ಸ್ಟಾರ್ಟಪ್ಸ್ ಸಂಖ್ಯೆ
Image
ಫೆಬ್ರುವರಿಯಲ್ಲಿ ಶೇ. 3.61ಕ್ಕೆ ಇಳಿದ ಹಣದುಬ್ಬರ
Image
ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತವಾ ಇದು?

ಹಣದ ಹರಿವು ಹೆಚ್ಚಿಸಲು ಆರ್​ಬಿಐ ಫೆಬ್ರುವರಿ 28ರಂದು ಸಾಕಷ್ಟು ವಿದೇಶೀ ಕರೆನ್ಸಿಗಳನ್ನು ಖರೀದಿಸಿದೆ. ಹೀಗಾಗಿ, ಫಾರೆಕ್ಸ್ ಮೀಸಲು ನಿಧಿ ಗಣನೀಯವಾಗಿ ಹೆಚ್ಚಿದೆ.

ಮಾರ್ಚ್ 7ರಂದು ಭಾರತದ ಫಾರೆಕ್ಸ್ ಮೀಸಲು ನಿಧಿ

ಒಟ್ಟು ಫಾರೆಕ್ಸ್ ಮೀಸಲು ನಿಧಿ: 653.966 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಆಸ್ತಿ: 557.282 ಬಿಲಿಯನ್ ಡಾಲರ್
  • ಚಿನ್ನದ ಆಸ್ತಿ: 74.325 ಬಿಲಿಯನ್ ಡಾಲರ್
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.21 ಬಿಲಿಯನ್ ಡಾಲರ್
  • ಐಎಂಎಫ್​​ನಲ್ಲಿರುವ ನಿಧಿ: 4.148 ಬಿಲಿಯನ್ ಡಾಲರ್

2024ರ ಸೆಪ್ಟೆಂಬರ್ ಕೊನೆಯಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 704.885 ಬಿಲಿಯನ್ ಡಾಲರ್ ತಲುಪಿತ್ತು. ಅದು ಭಾರತದ ಫಾರೆಕ್ಸ್ ಇತಿಹಾಸದಲ್ಲೇ ಗರಿಷ್ಠ ಮೀಸಲು ಸಂಪತ್ತಿನ ಮಟ್ಟವಾಗಿದೆ. ಅದಾದ ಬಳಿಕ ರುಪಾಯಿ ಕರೆನ್ಸಿಯ ಕುಸಿತ ತಡೆಯಲು ಆರ್​ಬಿಐ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಫಾರೆಕ್ಸ್ ಸಂಪತ್ತು ಸ್ವಲ್ಪಸ್ವಲ್ಪವೇ ಕರಗುತ್ತಾ ಬಂದಿದೆ.

ಇದನ್ನೂ ಓದಿ: ಫೆಬ್ರುವರಿಯಲ್ಲಿ ಹಣದುಬ್ಬರ ಶೇ 3.61ಕ್ಕೆ ಇಳಿಕೆ; ನಿರೀಕ್ಷೆಗಿಂತ ಕೆಳಗಿಳಿದ ಬೆಲೆ ಏರಿಕೆ ದರ

ಜಾಗತಿಕವಾಗಿ ಅತಿಹೆಚ್ಚು ಫಾರೆಕ್ಸ್ ಮೀಸಲು ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಚೀನಾ ಮೂರೂವರೆ ಟ್ರಿಲಿಯನ್ ಡಾಲರ್​ಗಿಂತಲೂ ಅಧಿಕ ಮೌಲ್ಯದ ಫಾರೆಕ್ಸ್ ಮೀಸಲು ಸಂಪತ್ತನ್ನು ಹೊಂದಿದೆ. ಜಪಾನ್ ದೇಶದ ಸಂಪತ್ತು ಒಂದು ಟ್ರಿಲಿಯನ್ ಡಾಲರ್​​ಗೂ ಹೆಚ್ಚಿದೆ. ಸ್ವಿಟ್ಜರ್​​ಲ್ಯಾಂಡ್​ನ ಫಾರೆಕ್ಸ್ ಮೀಸಲು ನಿಧಿ ಒಂದು ಟ್ರಿಲಿಯನ್ ಡಾಲರ್ ಗಡಿ ಸಮೀಪವೇ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Sun, 16 March 25