Gold Rate Today Bangalore: ದಾಖಲೆ ಚಿನ್ನದ ಬೆಲೆ; 24 ಕ್ಯಾರಟ್ ಸ್ವರ್ಣ 10,135 ರೂ

Bullion Market 2025 April 22nd: ಚಿನ್ನದ ಬೆಲೆ ಇಂದು ಮಂಗಳವಾರ ಗ್ರಾಮ್​​ಗೆ 275 ರೂನಷ್ಟು ಏರಿಕೆ ಆಗಿದೆ. 9,015 ರೂ ಇದ್ದ ಆಭರಣ ಚಿನ್ನದ ಬೆಲೆ 9,290 ರೂಗೆ ಏರಿದ. ದೆಹಲಿ ಮೊದಲಾದ ಕೆಲವೆಡೆ ಬೆಲೆ 9,305 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ 10,135 ರೂ ಮುಟ್ಟಿದೆ. ಒಂದೆಡೆ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರುತ್ತಿದ್ದರೂ ಬೆಳ್ಳಿ ಬೆಲೆ ತಟಸ್ಥವಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 101 ರೂನಲ್ಲಿ ಮುಂದುವರಿದಿದೆ.

Gold Rate Today Bangalore: ದಾಖಲೆ ಚಿನ್ನದ ಬೆಲೆ; 24 ಕ್ಯಾರಟ್ ಸ್ವರ್ಣ 10,135 ರೂ
ಚಿನ್ನ

Updated on: Apr 22, 2025 | 10:28 AM

ಬೆಂಗಳೂರು, ಏಪ್ರಿಲ್ 22: ಚಿನ್ನದ ಬೆಲೆ (Gold rates) ಸಿಕ್ಕಾಪಟ್ಟೆ ಏರುತ್ತಿದೆ. ನಿನ್ನೆ ಗ್ರಾಮ್​​ಗೆ 70 ರೂ ಹೆಚ್ಚಿದ್ದ ಅದರ ಬೆಲೆ ಇವತ್ತು ಬರೋಬ್ಬರಿ 275 ರೂನಷ್ಟು ಏರಿಕೆ ಕಂಡಿದೆ. ಅಪರಂಜಿ ಚಿನ್ನವಂತೂ ಗ್ರಾಮ್​​ಗೆ 300 ರೂನಷ್ಟು ಹೆಚ್ಚಳವಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 10,000 ರೂ ಗಡಿ ದಾಟಿದೆ. ಬೆಂಗಳೂರಿನಲ್ಲಿ ಈ ಶುದ್ಧ ಚಿನ್ನದ ಬೆಲೆ ಗ್ರಾಮ್​​ಗೆ 10,135 ರೂ ಬೆಲೆ ಪಡೆದಿದೆ. ಆಭರಣ ಚಿನ್ನದ ಬೆಲೆ ಭಾರತದಲ್ಲಿ ಮೊದಲ ಬಾರಿಗೆ 9,300 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ದಾಖಲೆ ಬರೆದಿದೆ. ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಲ್ಲೂ ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 22ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 76,010 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,900 ರೂ
  • ಚೆನ್ನೈ: 92,900 ರೂ
  • ಮುಂಬೈ: 92,900 ರೂ
  • ದೆಹಲಿ: 93,050 ರೂ
  • ಕೋಲ್ಕತಾ: 92,900 ರೂ
  • ಕೇರಳ: 92,900 ರೂ
  • ಅಹ್ಮದಾಬಾದ್: 92,950 ರೂ
  • ಜೈಪುರ್: 93,050 ರೂ
  • ಲಕ್ನೋ: 93,050 ರೂ
  • ಭುವನೇಶ್ವರ್: 92,900 ರೂ

ಇದನ್ನೂ ಓದಿ: ಆಸ್ತಿ ಮಾರಲ್ಲ, ಸಾಲ ಬಿಡಲ್ಲ… ಶ್ರೀಮಂತರ ಟ್ರಿಕ್ಸ್ ಹೀಗಿರುತ್ತೆ ನೋಡಿ

ಇದನ್ನೂ ಓದಿ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,750 ರಿಂಗಿಟ್ (92,410 ರುಪಾಯಿ)
  • ದುಬೈ: 3,815 ಡಿರಾಮ್ (88,460 ರುಪಾಯಿ)
  • ಅಮೆರಿಕ: 1,030 ಡಾಲರ್ (87,710 ರುಪಾಯಿ)
  • ಸಿಂಗಾಪುರ: 1,411 ಸಿಂಗಾಪುರ್ ಡಾಲರ್ (91,110 ರುಪಾಯಿ)
  • ಕತಾರ್: 3,825 ಕತಾರಿ ರಿಯಾಲ್ (89,350 ರೂ)
  • ಸೌದಿ ಅರೇಬಿಯಾ: 3,880 ಸೌದಿ ರಿಯಾಲ್ (88,060 ರುಪಾಯಿ)
  • ಓಮನ್: 405.50 ಒಮಾನಿ ರಿಯಾಲ್ (89,680 ರುಪಾಯಿ)
  • ಕುವೇತ್: 312.30 ಕುವೇತಿ ದಿನಾರ್ (86,890 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,100 ರೂ
  • ಚೆನ್ನೈ: 11,100 ರೂ
  • ಮುಂಬೈ: 10,100 ರೂ
  • ದೆಹಲಿ: 10,100 ರೂ
  • ಕೋಲ್ಕತಾ: 10,100 ರೂ
  • ಕೇರಳ: 11,100 ರೂ
  • ಅಹ್ಮದಾಬಾದ್: 10,100 ರೂ
  • ಜೈಪುರ್: 10,100 ರೂ
  • ಲಕ್ನೋ: 10,100 ರೂ
  • ಭುವನೇಶ್ವರ್: 11,100 ರೂ
  • ಪುಣೆ: 10,100

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us