Gold Rate Today Bangalore: ಬುಧವಾರ ಚಿನ್ನದ ಬೆಲೆ ಭಾರೀ ಕುಸಿತ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2025 April 23rd: ಚಿನ್ನದ ಬೆಲೆ ಬುಧವಾರ 275 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. 22 ಕ್ಯಾರಟ್ ಆಭರಣ ಚಿನ್ನ ಬೆಂಗಳೂರಿನಲ್ಲಿ 9,015 ರು ಇದ್ದರೆ, ಅಪರಂಜಿ ಚಿನ್ನದ ಬೆಲೆ 9,835 ರೂ ಚಿನ್ನದ ಬೆಲೆಗೆ ಕುಸಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 101 ರೂ ಇದೆ. ಚೆನ್ನೈ ಮೊದಲಾದ ಕಡೆ 111 ರೂ ಬೆಲೆ ಹೊಂದಿದೆ.

Gold Rate Today Bangalore: ಬುಧವಾರ ಚಿನ್ನದ ಬೆಲೆ ಭಾರೀ ಕುಸಿತ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Apr 23, 2025 | 10:40 AM

ಬೆಂಗಳೂರು, ಏಪ್ರಿಲ್ 23: ಚಿನ್ನದ ಬೆಲೆ ನಿನ್ನೆ ಏರಿದಷ್ಟೇ ರೀತಿಯಲ್ಲಿ ಝರ್ರೆಂದು ಜಾರಿದೆ. ಬುಧವಾರ ಆಭರಣ ಚಿನ್ನದ ಬೆಲೆ (Gold Rates) ಗ್ರಾಮ್​​ಗೆ 275 ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನದ ಬೆಲೆ 300 ರೂ ತಗ್ಗಿದೆ. 9,290 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 9,015 ರೂಗೆ ಇಳಿದಿದೆ. ಅಪರಂಜಿ ಚಿನ್ನವೂ ಕೂಡ 10,000 ಗಡಿಯೊಳಗೆ ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆ ಅಲ್ಪ ಏರಿಕೆಯಷ್ಟೇ ಕಂಡಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 23ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,350 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,760 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,150 ರೂ
  • ಚೆನ್ನೈ: 90,150 ರೂ
  • ಮುಂಬೈ: 90,150 ರೂ
  • ದೆಹಲಿ: 90,300 ರೂ
  • ಕೋಲ್ಕತಾ: 90,150 ರೂ
  • ಕೇರಳ: 90,150 ರೂ
  • ಅಹ್ಮದಾಬಾದ್: 90,200 ರೂ
  • ಜೈಪುರ್: 90,300 ರೂ
  • ಲಕ್ನೋ: 90,300 ರೂ
  • ಭುವನೇಶ್ವರ್: 90,150 ರೂ

ಇದನ್ನೂ ಓದಿ: ಚಿನ್ನದ ಬೆಲೆ ಎಷ್ಟು ದಿನ ಹೀಗೆ ಏರುತ್ತೆ? ಬೆಲೆ ಕಡಿಮೆ ಆಗೋ ಸಾಧ್ಯತೆ ಎಷ್ಟು? ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,750 ರಿಂಗಿಟ್ (91,950 ರುಪಾಯಿ)
  • ದುಬೈ: 3,795 ಡಿರಾಮ್ (88,160 ರುಪಾಯಿ)
  • ಅಮೆರಿಕ: 1,035 ಡಾಲರ್ (88,320 ರುಪಾಯಿ)
  • ಸಿಂಗಾಪುರ: 1,411 ಸಿಂಗಾಪುರ್ ಡಾಲರ್ (91,720 ರುಪಾಯಿ)
  • ಕತಾರ್: 3,850 ಕತಾರಿ ರಿಯಾಲ್ (90,110 ರೂ)
  • ಸೌದಿ ಅರೇಬಿಯಾ: 3,900 ಸೌದಿ ರಿಯಾಲ್ (88,710 ರುಪಾಯಿ)
  • ಓಮನ್: 404.50 ಒಮಾನಿ ರಿಯಾಲ್ (89,640 ರುಪಾಯಿ)
  • ಕುವೇತ್: 310 ಕುವೇತಿ ದಿನಾರ್ (86,500 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,100 ರೂ
  • ಚೆನ್ನೈ: 11,100 ರೂ
  • ಮುಂಬೈ: 10,100 ರೂ
  • ದೆಹಲಿ: 10,100 ರೂ
  • ಕೋಲ್ಕತಾ: 10,100 ರೂ
  • ಕೇರಳ: 11,100 ರೂ
  • ಅಹ್ಮದಾಬಾದ್: 10,100 ರೂ
  • ಜೈಪುರ್: 10,100 ರೂ
  • ಲಕ್ನೋ: 10,100 ರೂ
  • ಭುವನೇಶ್ವರ್: 11,100 ರೂ
  • ಪುಣೆ: 10,100

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us