Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಶುಕ್ರವಾರ ಜಿಗಿತ; ಇಲ್ಲಿದೆ ದರಪಟ್ಟಿ

Bullion Market 2025 March 28th: ಸತತವಾಗಿ ಏರಿಕೆ ಆಗುತ್ತಿರುವ ಚಿನ್ನದ ಬೆಲೆ ಇಂದು ಶುಕ್ರವಾರ ಹೈಜಂಪ್ ಮಾಡಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,340 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 9,098 ರೂಗೆ ಏರಿದೆ. ಬೆಳ್ಳಿ ಬೆಲೆ ಒಮ್ಮೆಗೇ 3 ರೂನಷ್ಟು ಹೆಚ್ಚಳ ಆಗಿದೆ. ಬೆಂಗಳೂರಿನಲ್ಲಿ ಅದರ ಬೆಲೆ 102 ರೂನಿಂದ 105 ರೂಗೆ ಜಿಗಿದಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಶುಕ್ರವಾರ ಜಿಗಿತ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Mar 28, 2025 | 11:30 AM

ಬೆಂಗಳೂರು, ಮಾರ್ಚ್ 28: ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver rates) ಇವತ್ತು ಶುಕ್ರವಾರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಎರಡೂ ಕೂಡ ಹೊಸ ಎತ್ತರಕ್ಕೆ ಹೋಗಿದೆ. ಬೆಳ್ಳಿ ಬೆಲೆಯಂತೂ ಒಂದೇ ದಿನಕ್ಕೆ ಗ್ರಾಮ್​​ಗೆ 3 ರೂನಷ್ಟು ಜಂಪ್ ಕಂಡಿದೆ. ಇದು ಒಂದು ದಿನದಲ್ಲಿ ಬೆಳ್ಳಿ ಬೆಲೆ ಕಂಡ ಅತಿ ದೊಡ್ಡ ಹೆಚ್ಚಳಗಳಲ್ಲಿ ಒಂದು. ಚಿನ್ನದ ಬೆಲೆಯೂ ಗ್ರಾಮ್​​ಗೆ 100 ರೂಗೂ ಹೆಚ್ಚಿನ ಮೊತ್ತದಷ್ಟು ಏರಿಕೆ ಆಗಿದೆ. ಅಪರಂಜಿ ಚಿನ್ನದ ಬೆಲೆ 9,100 ರೂ ಗಡಿ ಸಮೀಪಕ್ಕೆ ಹೋಗಿದೆ. ಆಭರಣ ಚಿನ್ನದ ಬೆಲೆಯೂ 8,340 ರೂಗೆ ಏರಿದೆ. ಬೆಳ್ಳಿ ಬೆಲೆ ಗ್ರಾಮ್​​ಗೆ 105 ರೂಗೆ ಏರಿದೆ. ಇದು ಬೆಂಗಳೂರಿನಲ್ಲಿ ದಾಖಲೆಯ ಬೆಳ್ಳಿ ಬೆಲೆ. ಚೆನ್ನೈ ಮೊದಲಾದ ಕಡೆ ಬೆಳ್ಳಿ ಬೆಲೆ 114 ರೂಗೆ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 83,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 90,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 83,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 28ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 83,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,980 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,240 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 83,400 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,980 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 83,400 ರೂ
  • ಚೆನ್ನೈ: 83,400 ರೂ
  • ಮುಂಬೈ: 83,400 ರೂ
  • ದೆಹಲಿ: 83,550 ರೂ
  • ಕೋಲ್ಕತಾ: 83,400 ರೂ
  • ಕೇರಳ: 83,400 ರೂ
  • ಅಹ್ಮದಾಬಾದ್: 83,450 ರೂ
  • ಜೈಪುರ್: 83,550 ರೂ
  • ಲಕ್ನೋ: 83,550 ರೂ
  • ಭುವನೇಶ್ವರ್: 83,400 ರೂ

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಒಂದೇ ಕ್ಲೇಮ್​​ಗೆ ಬಳಸಬಹುದಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,260 ರಿಂಗಿಟ್ (82,280 ರುಪಾಯಿ)
  • ದುಬೈ: 3,395 ಡಿರಾಮ್ (79,140 ರುಪಾಯಿ)
  • ಅಮೆರಿಕ: 925 ಡಾಲರ್ (79,210 ರುಪಾಯಿ)
  • ಸಿಂಗಾಪುರ: 1,282 ಸಿಂಗಾಪುರ್ ಡಾಲರ್ (81,840 ರುಪಾಯಿ)
  • ಕತಾರ್: 3,440 ಕತಾರಿ ರಿಯಾಲ್ (80,800 ರೂ)
  • ಸೌದಿ ಅರೇಬಿಯಾ: 3,470 ಸೌದಿ ರಿಯಾಲ್ (79,210 ರುಪಾಯಿ)
  • ಓಮನ್: 362 ಒಮಾನಿ ರಿಯಾಲ್ (80,510 ರುಪಾಯಿ)
  • ಕುವೇತ್: 280.50 ಕುವೇತಿ ದಿನಾರ್ (77,890 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,800 ರೂ
  • ಚೆನ್ನೈ: 11,400 ರೂ
  • ಮುಂಬೈ: 10,500 ರೂ
  • ದೆಹಲಿ: 10,500 ರೂ
  • ಕೋಲ್ಕತಾ: 10,500 ರೂ
  • ಕೇರಳ: 11,400 ರೂ
  • ಅಹ್ಮದಾಬಾದ್: 10,500 ರೂ
  • ಜೈಪುರ್: 10,500 ರೂ
  • ಲಕ್ನೋ: 10,500 ರೂ
  • ಭುವನೇಶ್ವರ್: 11,400 ರೂ
  • ಪುಣೆ: 10,500

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us