Gold Rate Today Bangalore: ಚಿನ್ನದ ಬೆಲೆ ಮತ್ತೆ ಏರಿಕೆ; 8,000 ರೂ ಗಡಿ ದಾಟಿದ ಹಳದಿ ಲೋಹದ ಬೆಲೆ

Bullion Market 2025 March 4th: ನಿನ್ನೆ ಬದಲಾವಣೆ ಕಾಣದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮಂಗಳವಾರ ಏರಿಳಿತಗಳಾಗಿವೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಎಂಟು ಸಾವಿರ ರೂ ಗಡಿ ದಾಟಿದೆ. 18 ಕ್ಯಾರಟ್ ಚಿನ್ನದ ಬೆಲೆ 6,540 ರೂಗೆ ಏರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಒಂದು ರೂ ಏರಿಕೆ ಆಗಿದೆ. ಚೆನ್ನೈನಲ್ಲಿ ಎರಡು ರೂ ಹೆಚ್ಚಳವಾದರೆ, ಮುಂಬೈನಲ್ಲಿ ತುಸು ಇಳಿಕೆ ಆಗಿದೆ.

Gold Rate Today Bangalore: ಚಿನ್ನದ ಬೆಲೆ ಮತ್ತೆ ಏರಿಕೆ; 8,000 ರೂ ಗಡಿ ದಾಟಿದ ಹಳದಿ ಲೋಹದ ಬೆಲೆ
ಚಿನ್ನ

Updated on: Mar 04, 2025 | 10:34 AM

ಬೆಂಗಳೂರು, ಮಾರ್ಚ್ 04: ಚಿನ್ನದ ಬೆಲೆ ಒಮ್ಮೆಗೇ ಜಂಪ್ ಆಗಿದೆ. ಬೆಳ್ಳಿ ಬೆಲೆಯಲ್ಲಿ ಏರಿಳಿತಗಳಾಗಿವೆ. ಚಿನ್ನದ ಬೆಲೆ ಇಂದು ಮಂಗಳವಾರ ಗ್ರಾಮ್​ಗೆ 70 ರೂನಷ್ಟು ಏರಿಕೆ ಆಗಿದೆ. ಒಂದು ಗ್ರಾಮ್ ಒಡವೆ ಚಿನ್ನದ ಬೆಲೆ 7,940 ರೂ ಇದ್ದದ್ದು 8,010 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆಯೂ 8,700 ರೂ ಗಡಿ ದಾಟಿದೆ. ಬಹಳ ದಿನಗಳಿಂದ ಬಹುತೇಕ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಏರಿಳಿತಗಳನ್ನು ಕಂಡಿದೆ. ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ ಗ್ರಾಮ್​ಗೆ 10 ಪೈಸೆಯಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಅದರ ಬೆಲೆ ಒಂದು ರೂ ಏರಿಕೆ ಆಗಿದೆ. 97 ರೂ ಇದ್ದದ್ದು 98 ರೂ ಆಗಿದೆ. ತಮಿಳುನಾಡು, ಕೇರಳ ಮೊದಲಾದೆಡೆ ಅದರ ಬೆಲೆ ಗ್ರಾಮ್​ಗೆ ಎರಡು ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 80,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 87,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,690 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 80,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 04ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,380 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,540 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 80,100 ರೂ
  • ಚೆನ್ನೈ: 80,100 ರೂ
  • ಮುಂಬೈ: 80,100 ರೂ
  • ದೆಹಲಿ: 80,250 ರೂ
  • ಕೋಲ್ಕತಾ: 80,100 ರೂ
  • ಕೇರಳ: 80,100 ರೂ
  • ಅಹ್ಮದಾಬಾದ್: 80,150 ರೂ
  • ಜೈಪುರ್: 80,250 ರೂ
  • ಲಕ್ನೋ: 80,250 ರೂ
  • ಭುವನೇಶ್ವರ್: 80,100 ರೂ

ಇದನ್ನೂ ಓದಿ: ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,050 ರಿಂಗಿಟ್ (79,210 ರುಪಾಯಿ)
  • ದುಬೈ: 3,220 ಡಿರಾಮ್ (76,610 ರುಪಾಯಿ)
  • ಅಮೆರಿಕ: 880 ಡಾಲರ್ (76,890 ರುಪಾಯಿ)
  • ಸಿಂಗಾಪುರ: 1,213 ಸಿಂಗಾಪುರ್ ಡಾಲರ್ (78,700 ರುಪಾಯಿ)
  • ಕತಾರ್: 3,250 ಕತಾರಿ ರಿಯಾಲ್ (77,920 ರೂ)
  • ಸೌದಿ ಅರೇಬಿಯಾ: 3,300 ಸೌದಿ ರಿಯಾಲ್ (76,880 ರುಪಾಯಿ)
  • ಓಮನ್: 341.50 ಒಮಾನಿ ರಿಯಾಲ್ (77,500 ರುಪಾಯಿ)
  • ಕುವೇತ್: 265.50 ಕುವೇತಿ ದಿನಾರ್ (75,590 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,800 ರೂ
  • ಚೆನ್ನೈ: 10,700 ರೂ
  • ಮುಂಬೈ: 9,690 ರೂ
  • ದೆಹಲಿ: 9,800 ರೂ
  • ಕೋಲ್ಕತಾ: 9,690 ರೂ
  • ಕೇರಳ: 10,700 ರೂ
  • ಅಹ್ಮದಾಬಾದ್: 9,800 ರೂ
  • ಜೈಪುರ್: 9,800 ರೂ
  • ಲಕ್ನೋ: 9,800 ರೂ
  • ಭುವನೇಶ್ವರ್: 10,700 ರೂ
  • ಪುಣೆ: 9,690

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us