Gold Silver Price on 7th May: ಚಿನ್ನದ ಬೆಲೆ ಸತತ ಹೆಚ್ಚಳ; ಬೆಳ್ಳಿಯೂ ದುಬಾರಿ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 May 7th: ಚಿನ್ನದ ಬೆಲೆ ಗ್ರಾಮ್​ಗೆ 20 ರೂನಷ್ಟು ಹೆಚ್ಚಾಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,050 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 84 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 66,050 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,250 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 7th May: ಚಿನ್ನದ ಬೆಲೆ ಸತತ ಹೆಚ್ಚಳ; ಬೆಳ್ಳಿಯೂ ದುಬಾರಿ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: May 07, 2024 | 5:00 AM

ಬೆಂಗಳೂರು, ಮೇ 7: ಚಿನ್ನ ಮತ್ತು ಬೆಳ್ಳಿ ಬೆಲೆ ಏರುಪೇರು ಕಳೆದ ಎರಡು ವಾರಗಳಂತೆ ಈ ಬಾರಿಯೂ ಮುಂದುವರಿದಿದೆ. ನಿನ್ನೆ ತುಸು ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold and silver Rates) ಇವತ್ತೂ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ನಿನ್ನೆ ಇಳಿದಿದ್ದು ಇವತ್ತು ಹೆಚ್ಚಾಗಿದೆ. ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ಇಂದು ಮಂಗಳವಾರ ಬೆಲೆ ಹೆಚ್ಚಳ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 20 ರೂನಷ್ಟು ಹೆಚ್ಚಾದರೆ ಬೆಳ್ಳಿ ಬೆಲೆ ಗ್ರಾಮ್​ಗೆ 10 ಪೈಸೆ ಅಧಿಕಗೊಂಡಿದೆ. ವಿದೇಶಗಳಲ್ಲಿ ಬಹುತೇಕ ಕಡೆ ಬೆಲೆ ಯಥಾಸ್ಥಿತಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,250 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 7ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,050 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,050 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 825 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,050 ರೂ
  • ಚೆನ್ನೈ: 66,100 ರೂ
  • ಮುಂಬೈ: 66,050 ರೂ
  • ದೆಹಲಿ: 66,200 ರೂ
  • ಕೋಲ್ಕತಾ: 66,050 ರೂ
  • ಕೇರಳ: 66,050 ರೂ
  • ಅಹ್ಮದಾಬಾದ್: 66,100 ರೂ
  • ಜೈಪುರ್: 66,200 ರೂ
  • ಲಕ್ನೋ: 66,200 ರೂ
  • ಭುವನೇಶ್ವರ್: 66,050 ರೂ

ಇದನ್ನೂ ಓದಿ: ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,310 ರಿಂಗಿಟ್ (58,342 ರುಪಾಯಿ)
  • ದುಬೈ: 2,597.50 ಡಿರಾಮ್ (59,077 ರುಪಾಯಿ)
  • ಅಮೆರಿಕ: 705 ಡಾಲರ್ (58,900 ರುಪಾಯಿ)
  • ಸಿಂಗಾಪುರ: 973 ಸಿಂಗಾಪುರ್ ಡಾಲರ್ (60,200 ರುಪಾಯಿ)
  • ಕತಾರ್: 2,645 ಕತಾರಿ ರಿಯಾಲ್ (60,609 ರೂ)
  • ಸೌದಿ ಅರೇಬಿಯಾ: 2,660 ಸೌದಿ ರಿಯಾಲ್ (59,255 ರುಪಾಯಿ)
  • ಓಮನ್: 279.50 ಒಮಾನಿ ರಿಯಾಲ್ (60,585 ರುಪಾಯಿ)
  • ಕುವೇತ್: 220.50 ಕುವೇತಿ ದಿನಾರ್ (59,919 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,250 ರೂ
  • ಚೆನ್ನೈ: 8,750 ರೂ
  • ಮುಂಬೈ: 8,400 ರೂ
  • ದೆಹಲಿ: 8,400 ರೂ
  • ಕೋಲ್ಕತಾ: 8,400 ರೂ
  • ಕೇರಳ: 8,750 ರೂ
  • ಅಹ್ಮದಾಬಾದ್: 8,400 ರೂ
  • ಜೈಪುರ್: 8,400 ರೂ
  • ಲಕ್ನೋ: 8,400 ರೂ
  • ಭುವನೇಶ್ವರ್: 8,750 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us