AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 27th October: ವಾರಾಂತ್ಯದಲ್ಲೂ ಚಿನ್ನದ ಬೆಲೆಯಲ್ಲಿ ಸಖತ್ ಏರಿಕೆ; ಬೆಳ್ಳಿ ಸ್ಥಿರ

Bullion Market 2024 October 27th: ಚಿನ್ನದ ಬೆಲೆ ತೀವ್ರವಾಗಿ ಏರಿದೆ. ಆಭರಣ ಚಿನ್ನದ ಬೆಲೆ 7,250 ರೂ ಗಡಿದಾಟಿ ಹೋಗಿದೆ. ಅಪರಂಜಿ ಚಿನ್ನದ ಬೆಲೆ 8,030 ರೂ ಸಮೀಪಕ್ಕೆ ಹೋಗಿದೆ.

Gold Silver Price on 27th October: ವಾರಾಂತ್ಯದಲ್ಲೂ ಚಿನ್ನದ ಬೆಲೆಯಲ್ಲಿ ಸಖತ್ ಏರಿಕೆ; ಬೆಳ್ಳಿ ಸ್ಥಿರ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 27, 2024 | 10:39 AM

Share

ಬೆಂಗಳೂರು, ಅಕ್ಟೋಬರ್ 27: ವಾರಾಂತ್ಯದಲ್ಲೂ ಚಿನ್ನದ ಬೆಲೆ ಏರಿಕೆ ಆಗಿದೆ. ಗ್ರಾಮ್​ಗೆ 65 ರೂನಷ್ಟು ಭರ್ಜರಿಯಾಗಿ ಬೆಲೆ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ವಿದೇಶದ ಮಾರುಕಟ್ಟೆಗಳಲ್ಲಿ ಕಳೆದ ಒಂದೆರಡು ವಾರದಿಂದ ಚಿನ್ನದ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯಗಳಾಗಿಲ್ಲ. ಆದರೆ, ಭಾರತದ ಮಾರುಕಟ್ಟೆಯಲ್ಲಿ ತೀವ್ರ ಮಟ್ಟದ ಏರಿಕೆ ಆಗುತ್ತಿದೆ. ಹಬ್ಬದ ಸೀಸನ್ ಕಾರಣಕ್ಕೆ ಬೇಡಿಕೆ ಹೆಚ್ಚಿರಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 73,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 80,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 73,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 27ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,290 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,220 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 98 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,290 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 98 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 73,600 ರೂ
  • ಚೆನ್ನೈ: 73,600 ರೂ
  • ಮುಂಬೈ: 73,600 ರೂ
  • ದೆಹಲಿ: 73,750 ರೂ
  • ಕೋಲ್ಕತಾ: 73,600 ರೂ
  • ಕೇರಳ: 73,600 ರೂ
  • ಅಹ್ಮದಾಬಾದ್: 73,650 ರೂ
  • ಜೈಪುರ್: 73,750 ರೂ
  • ಲಕ್ನೋ: 73,750 ರೂ
  • ಭುವನೇಶ್ವರ್: 73,600 ರೂ

ಇದನ್ನೂ ಓದಿ: ಪಿಎಂ ಮುದ್ರಾ ಸ್ಕೀಮ್; ಹೊಸ ವಿಭಾಗ ಸೇರ್ಪಡೆ; ಸಾಲದ ಮಿತಿ 20 ಲಕ್ಷ ರೂಗೆ ಹೆಚ್ಚಳ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,680 ರಿಂಗಿಟ್ (71,240 ರುಪಾಯಿ)
  • ದುಬೈ: 3,070 ಡಿರಾಮ್ (70,290 ರುಪಾಯಿ)
  • ಅಮೆರಿಕ: 820 ಡಾಲರ್ (68,960 ರುಪಾಯಿ)
  • ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (70,560 ರುಪಾಯಿ)
  • ಕತಾರ್: 3,080 ಕತಾರಿ ರಿಯಾಲ್ (71,040 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,060 ರುಪಾಯಿ)
  • ಓಮನ್: 324.50 ಒಮಾನಿ ರಿಯಾಲ್ (70,880 ರುಪಾಯಿ)
  • ಕುವೇತ್: 248.30 ಕುವೇತಿ ದಿನಾರ್ (68,150 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,700 ರೂ
  • ಚೆನ್ನೈ: 10,700 ರೂ
  • ಮುಂಬೈ: 9,800 ರೂ
  • ದೆಹಲಿ: 9,800 ರೂ
  • ಕೋಲ್ಕತಾ: 9,800 ರೂ
  • ಕೇರಳ: 10,700 ರೂ
  • ಅಹ್ಮದಾಬಾದ್: 9,800 ರೂ
  • ಜೈಪುರ್: 9,800 ರೂ
  • ಲಕ್ನೋ: 9,800 ರೂ
  • ಭುವನೇಶ್ವರ್: 10,700 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ