ಪಿಎಂ ಮುದ್ರಾ ಸ್ಕೀಮ್; ಹೊಸ ವಿಭಾಗ ಸೇರ್ಪಡೆ; ಸಾಲದ ಮಿತಿ 20 ಲಕ್ಷ ರೂಗೆ ಹೆಚ್ಚಳ

PM Mudra Yojana: ಪಿಎಂ ಮುದ್ರಾ ಯೋಜನೆಯಲ್ಲಿ ಶಿಶು, ಕಿಶೋರ್, ತರುಣ್ ವಿಭಾಗಗಳಿಗೆ ಈಗ ತರುಣ್ ಪ್ಲಸ್ ವಿಭಾಗವೂ ಸೇರ್ಪಡೆಯಾಗಿದ್ದು ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಶಿಶು ವಿಭಾಗದಲ್ಲಿ 50,000 ರೂ, ಕಿಶೋರ್ ವಿಭಾಗದಲ್ಲಿ 5 ಲಕ್ಷ ರೂ, ತರುಣ್ ವಿಭಾಗದಲ್ಲಿ 10 ಲಕ್ಷ ರೂ, ತರುಣ್ ಪ್ಲಸ್ ವಿಭಾಗದಲ್ಲಿ 20 ಲಕ್ಷ ರೂ ಸಾಲದ ಮಿತಿ ಇದೆ.

ಪಿಎಂ ಮುದ್ರಾ ಸ್ಕೀಮ್; ಹೊಸ ವಿಭಾಗ ಸೇರ್ಪಡೆ; ಸಾಲದ ಮಿತಿ 20 ಲಕ್ಷ ರೂಗೆ ಹೆಚ್ಚಳ
ಪಿಎಂ ಮುದ್ರಾ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2024 | 3:32 PM

ನವದೆಹಲಿ, ಅಕ್ಟೋಬರ್ 25: ಕಳೆದ ಬಾರಿ ಬಜೆಟ್ ವೇಳೆ ಘೋಷಿಸಲಾದಂತೆ ಪಿಎಂ ಮುದ್ರಾ ಯೋಜನೆಯಲ್ಲಿ ಸಾಲದ ಮಿತಿಯನ್ನು 10 ಲಕ್ಷ ರೂನಿಂದ 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯ ಇಂದು ಶುಕ್ರವಾರ ಸಾಲದ ಮಿತಿ ಏರಿಕೆಯನ್ನು ಪ್ರಕಟಿಸಿದೆ. ದೇಶದಲ್ಲಿ ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹಿಸಲೆಂದು ಮುದ್ರಾ ಯೋಜನೆ ಅಡಿ ಸರ್ಕಾರ ಸಾಲ ಒದಗಿಸುತ್ತಿದೆ. ಕ್ರೆಡಿಟ್ ಗ್ಯಾರಂಟಿ ಫಂಡ್ (ಸಿಜಿಎಫ್​ಎಂಯು) ಅಡಿಯಲ್ಲಿ 20 ಲಕ್ಷ ರೂವರೆಗೂ ಮುದ್ರಾ ಸಾಲ ನೀಡಲಾಗುತ್ತಿದೆ.

ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ತರುಣ್ ಪ್ಲಸ್ ಎನ್ನುವ ಹೊಸ ಕೆಟಗರಿ ಮಾಡಲಾಗಿದೆ. ಈವರೆಗೂ ಶಿಶು, ಕಿಶೋರ ಮತ್ತು ತರುಣ್ ಎಂಬ ವಿಭಾಗಗಳಿದ್ದವು. ಶಿಶು ವಿಭಾಗದಲ್ಲಿ 50,000 ರೂವರೆಗೂ ಸಾಲ ಸಿಗುತ್ತದೆ. ಕಿಶೋರ್ ವಿಭಾಗದಲ್ಲಿ 5 ಲಕ್ಷ ರೂವರೆಗೂ ಸಾಲದ ಅವಕಾಶ ಇರುತ್ತದೆ. ತರುಣ್ ವಿಭಾಗದಲ್ಲಿ ಐದರಿಂದ ಹತ್ತು ಲಕ್ಷ ರೂವರೆಗೂ ಸಾಲ ಸೌಲಭ್ಯ ಇರುತ್ತದೆ. ಈಗ ತರುಣ್ ಪ್ಲಸ್ ವಿಭಾಗವನ್ನು ಸೇರಿಸಲಾಗಿದ್ದು, 10 ಲಕ್ಷ ಮೇಲ್ಪಟ್ಟ ಮತ್ತು 20 ಲಕ್ಷ ರೂವರೆಗೆ ಸಾಲ ಕೊಡಲಾಗುತ್ತದೆ.

ಇದನ್ನೂ ಓದಿ: ಡಿಬಿಟಿ ಚಮತ್ಕಾರ; 8 ವರ್ಷದಲ್ಲಿ ಸರ್ಕಾರಕ್ಕೆ 3 ಲಕ್ಷ ಕೋಟಿ ರೂ ಹಣ ಉಳಿತಾಯ: ನಿರ್ಮಲಾ ಸೀತಾರಾಮನ್

ತರುಣ್ ವಿಭಾಗದಲ್ಲಿ ಸಾಲ ಪಡೆದು ಅದನ್ನು ಸರಿಯಾದ ಸಮಯಕ್ಕೆ ತೀರಿಸಿದವರಿಗೆ ತರುಣ್ ಪ್ಲಸ್ ವಿಭಾಗದಲ್ಲಿ 20 ಲಕ್ಷ ರೂವರೆಗೆ ಸಾಲದ ಅವಕಾಶ ಸಿಗುತ್ತದೆ.

ಏನಿದು ಪಿಎಂ ಮುದ್ರಾ ಯೋಜನೆ?

ನರೇಂದ್ರ ಮೋದಿ ನೇತೃತ್ವದ ಮೊದಲ ಎನ್​ಡಿಎ ಸರ್ಕಾರದಲ್ಲಿ ತೆಗೆದುಕೊಂಡು ಹಲವು ಯೋಜನೆಗಳಲ್ಲಿ ಪಿಎಂ ಮುದ್ರಾ ಸ್ಕೀಮ್ ಕೂಡ ಒಂದು. 2015ರ ಏಪ್ರಿಲ್ 8ರಂದು ಪಿಎಂಎಂವೈ ಆರಂಭವಾಯಿತು. ಕಾರ್ಪೊರೇಟ್ ಅಲ್ಲ, ಕೃಷಿ ಅಲ್ಲದ ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡಲು ಸುಲಭ ಸಾಲ ನೀಡುವ ಯೋಜನೆ ಇದು. ಯಾವುದೇ ಅಡಮಾನ ಇಲ್ಲದೇ ಸಾಲ ನೀಡಲಾಗುತ್ತದೆ. ಪಡೆದ ಸಾಲವನ್ನು ಸರಿಯಾಗಿ ತೀರಿಸಿದವರಿಗೆ ಇನ್ನಷ್ಟು ಹೆಚ್ಚಿನ ಸಾಲ ಪಡೆಯುವ ಅವಕಾಶವನ್ನೂ ಈ ಸ್ಕೀಮ್​ನಲ್ಲಿ ಕೊಡಲಾಗಿದೆ.

ಇದನ್ನೂ ಓದಿ: ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು

ಇಲ್ಲಿಯವರೆಗೆ 41 ಕೋಟಿಗೂ ಅಧಿಕ ಖಾತೆಗಳಿಗೆ ಒಟ್ಟಾರೆ 2,14,364.71 ಕೋಟಿ ರೂ ಮೊತ್ತದ ಸಾಲದ ಹಣವನ್ನು ವಿತರಿಸಲಾಗಿದೆ. ಈ 41 ಕೋಟಿ ಅಕೌಂಟ್​ಗಳಲ್ಲಿ ಶೇ. 68ರಷ್ಟವು ಮಹಿಳಾ ಉದ್ದಿಮೆದಾರರಿಗೆ ಸೇರಿವೆ. ಶೇ. 51ರಷ್ಟು ಮಂದಿ ಫಲಾನುಭವಿಗಳು ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ