ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು

IPO market in India: ಭಾರತದ ಐಪಿಒ ಮಾರುಕಟ್ಟೆ ಪ್ರಬಲವಾಗಿದೆ. ಕಳೆದ ಬಾರಿಯ ದೀಪಾವಳಿಯಿಂದ ಇಲ್ಲಿಯವರೆಗೆ 82 ಕಂಪನಿಗಳು ಐಪಿಒಗೆ ಬಂದು ಒಂದು ಲಕ್ಷ ಕೋಟಿ ರೂಗೂ ಅಧಿಕ ಬಂಡಾಳ ಸಂಗ್ರಹಿಸಿಕೊಂಡಿವೆ. ಹಲವು ಐಪಿಒಗಳಿಗೆ ರೀಟೇಲ್ ಹೂಡಿಕೆದಾರರಿಂದ ಸಖತ್ ಸ್ಪಂದನೆ ಸಿಕ್ಕಿದೆ. ಇನ್ನೂ 63 ಕಂಪನಿಗಳು ಐಪಿಒಗಾಗಿ ಸೆಬಿ ಬಳಿ ಅರ್ಜಿ ಸಲ್ಲಿಸಿವೆ.

ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2024 | 2:06 PM

ನವದೆಹಲಿ, ಅಕ್ಟೋಬರ್ 25: ಕಳೆದ ಕೆಲ ತಿಂಗಳಿಂದ ಮಾರುಕಟ್ಟೆ ಅಲುಗಾಟ ಜೋರಾಗಿದ್ದರೂ ಪ್ರಾಥಮಿಕ ಮಾರುಕಟ್ಟೆಯ ಜೋರಾಟ ಮುಂದುವರಿಯುತ್ತಿದೆ. ಹಿಂದೂ ಕ್ಯಾಲಂಡರ್​ನ ಸಂವತ್ 2080ರ ವರ್ಷ ಪೂರ್ಣಗೊಳ್ಳಲು ಕೆಲವೇ ದಿನ ಬಾಕಿ ಇದೆ. ನವೆಂಬರ್ 1ರಿಂದ 2081ರ ಸಂವತ್ ವರ್ಷ ಆರಂಭವಾಗುತ್ತದೆ. ಕಳೆದ ಬಾರಿಯ ದೀಪಾವಳಿಯಿಂದ ಇಲ್ಲಿಯವರೆಗೆ ಒಂದು ವರ್ಷದಲ್ಲಿ ಪ್ರಾಥಮಿಕ ಮಾರುಕಟ್ಟೆಗೆ (primary market) ಭರ್ಜರಿ ಸ್ಪಂದನೆ ಸಿಕ್ಕಿದೆ. 82 ಕಂಪನಿಗಳು ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಿವೆ. ಈ 82 ಐಪಿಒಗಳಿಂದ 1.08 ಲಕ್ಷ ಕೋಟಿ ರೂ ಬಂಡವಾಳ ಸಂಗ್ರಹವಾಗಿದೆ. ವರ್ಷ ಮುಕ್ತಾಯಕ್ಕೆ ನಾಲ್ಕೈದು ದಿನ ಬಾಕಿ ಇದ್ದು ಇನ್ನೂ ಕೆಲ ಐಪಿಒಗಳು ಚಾಲನೆಯಲ್ಲಿವೆ. ಬಂಡವಾಳ ಸಂಗ್ರಹ ಇನ್ನಷ್ಟು ಏರಬಹುದು.

2080ರ ಸಂವತ್ ವರ್ಷದಲ್ಲಿ ಹ್ಯೂಂಡೈ ಮೋಟಾರ್ಸ್ ಸಂಸ್ಥೆ ಐಪಿಒ ಮೂಲಕ 27,000 ಕೋಟಿ ರೂ ಬಂಡವಾಳ ಕಲೆಹಾಕಿದೆ. ಭಾರತ ಕಂಡ ಅತಿದೊಡ್ಡ ಐಪಿಒಗಳಲ್ಲಿ ಇದೂ ಒಂದು.

ಬಜಾಜ್ ಹೌಸಿಂಗ್ ಫೈನಾನ್ಸ್, ಟಾಟಾ ಟೆಕ್ನಾಲಜೀಸ್, ಭಾರ್ತಿ ಹೆಕ್ಸಾಕಾಮ್, ಐಆರ್​ಇಡಿಎ, ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್, ಬ್ರೈನ್​ಬೀಸ್ ಸಲ್ಯೂಶನ್ಸ್, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ, ಆಧಾರ್ ಹೌಸಿಂಗ್ ಫೈನಾನ್ಸ್, ಪ್ರೀಮಿಯರ್ ಎನರ್ಜೀಸ್, ಬಜಾಜ್ ಹೌಸಿಂಗ್ ಫೈನಾನ್ಸ್ ಮೊದಲಾದ ಸಂಸ್ಥೆಗಳ ಐಪಿಒಗಳಿಗೆ ಹೂಡಿಕೆದಾರರು ಸಖತ್ ಸ್ಪಂದನೆ ನೀಡಿದ್ದಾರೆ.

ಬಜಾಜ್ ಹೌಸಿಂಗ್ ಫೈನಾನ್ಸ್ ಸಂಸ್ಥೆ 6,560 ಕೋಟಿ ರೂ ಬಂಡವಾಳ ಸಂಗ್ರಹಣೆಗೆ ಆಫರ್ ಮಾಡಿದ್ದ ಐಪಿಒಗೆ 3.2 ಲಕ್ಷ ಕೋಟಿ ರೂ ಮೊತ್ತದ ಬಿಡ್​ಗಳು ಸಲ್ಲಿಕೆ ಆಗಿತ್ತು. ಕೆಲವೇ ಕೋಟಿ ರೂ ಪಡೆಯಲು ಐಪಿಒಗೆ ಬಂದ ಸಣ್ಣ ಪುಟ್ಟ ಕಂಪನಿಗಳಿಗೂ ಸಾವಿರಾರು ಕೋಟಿ ರೂ ಮೊತ್ತದ ಬಿಡ್ ಸಲ್ಲಿಕೆ ಆಗಿದ್ದನ್ನು ಈ ವರ್ಷ ನೋಡಿದ್ದೇವೆ. ಅಂದರೆ, ಒಳ್ಳೆಯ ಐಪಿಒಗಳಿಗೆ ಭಾರತದಲ್ಲಿ ಅದೆಷ್ಟು ಬೇಡಿಕೆ ಇರಬಹುದು ಅಂದಾಜಿಸಬಹುದು.

ಇದನ್ನು ಓದಿ: SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ

ಸಂವತ್ 2081ರಲ್ಲಿ ಹೇಗಿದೆ ಐಪಿಒ ಮಾರ್ಕೆಟ್?

ನವೆಂಬರ್ 1ರಿಂದ ಶುರುವಾಗುವ ಸಂವತ್ 2081ರ ವರ್ಷದಲ್ಲಿ ಸಾಕಷ್ಟು ಕಂಪನಿಗಳು ಐಪಿಒಗೆ ಬರುತ್ತಿವೆ. ಇದರಲ್ಲಿ ಸ್ವಿಗ್ಗಿ ಐಪಿಒ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಎನ್​ಎಸ್​​ಇ, ಎನ್​ಎಸ್​ಡಿಎಲ್, ವಿಶಾಲ್ ಮೆಗಾ ಮಾರ್ಟ್, ಎನ್​ಟಿಪಿಸಿ ಗ್ರೀನ್ ಎನರ್ಜಿ, ಒಎನ್​ಜಿಸಿ ಗ್ರೀನ್ ಎನರ್ಜಿ, ಸಟ್ಲಜ್ ಜಲ್ ವಿದ್ಯುತ್ ನಿಗಮ್ ಮೊದಲಾದ ಕಂಪನಿಗಳ ಐಪಿಒ ಬರಲಿವೆ. 63 ಕಂಪನಿಗಳು ಒಟ್ಟು 90,608 ಕೋಟಿ ರೂ ಬಂಡವಾಳಕ್ಕಾಗಿ ಐಪಿಒಗೆ ಬರಲು ಸೆಬಿ ಬಳಿ ಅರ್ಜಿ ಸಲ್ಲಿಸಿವೆ. 28 ಕಂಪನಿಗಳಿಗೆ ಅನುಮೋದನೆ ಸಿಕ್ಕಿದೆ. ಇವುಗಳೆದ್ದೆಲ್ಲವೂ ಸೇರಿ ಐಪಿಒ ಮೊತ್ತ 49,889 ಕೋಟಿ ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ