SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ

SBI Amrit Vrishti FD plan: SBI ಹೊಸ 444 ದಿನಗಳ ಅವಧಿಯ "ಅಮೃತ್ ವೃಷ್ಟಿ" ಠೇವಣಿ ಯೋಜನೆಯನ್ನು ಆರಂಭಿಸಿದೆ. ಇದು 7.25% (ಸಾಮಾನ್ಯ) ಮತ್ತು 7.75% (ಹಿರಿಯ ನಾಗರಿಕರಿಗೆ) ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಕನಿಷ್ಠ ₹1000 ಹೂಡಿಕೆ ಮಾಡಬಹುದು. ಅವಧಿಗೆ ಮುನ್ನ ಹಣ ಹಿಂಪಡೆದರೆ ಪೆನಾಲ್ಟಿ ಅನ್ವಯಿಸುತ್ತದೆ. ಈ ಯೋಜನೆಯು 2025ರ ಮಾರ್ಚ್ 31ರವರೆಗೆ ಲಭ್ಯವಿದೆ.

SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ
ಎಸ್​ಬಿಐ
Follow us
|

Updated on: Oct 24, 2024 | 4:06 PM

ನವದೆಹಲಿ, ಅಕ್ಟೋಬರ್ 24: ಸ್ಟೇಟ್ ಬ್ಯಾಂಕ್ ಇಂಡಿಯಾ ಇತ್ತೀಚೆಗೆ ಹೊಸ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ವೊಂದನ್ನು ಆರಂಭಿಸಿದೆ. 444 ದಿನಗಳ ಅವಧಿಯ ‘ಅಮೃತ್ ವೃಷ್ಟಿ’ ಠೇವಣಿ ಯೋಜನೆ ಇತ್ತೀಚೆಗೆ ಶುರುವಾಗಿದೆ. ಭಾರತೀಯ ನಾಗರಿಕರು ಮಾತ್ರವಲ್ಲ ಅನಿವಾಸಿ ಭಾರತೀಯರೂ ಕೂಡ ಈ ಪ್ಲಾನ್​ನಲ್ಲಿ ಹೂಡಿಕೆ ಮಾಡಬಹುದು. ಜುಲೈ 15ರಿಂದ ಚಾಲನೆಗೊಂಡಿರುವ ಈ ಠೇವಣಿ ಯೋಜನೆ 2025ರ ಮಾರ್ಚ್ 31ರವರೆಗೂ ಲಭ್ಯ ಇರುತ್ತದೆ.

ಶೇ. 7. 25 ಮತ್ತು ಶೇ. 7.75 ಬಡ್ಡಿ

ಎಸ್​ಬಿಐ ಅಮೃತ್ ವೃಷ್ಟಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

ಈ ಪ್ಲಾನ್​ನಲ್ಲಿ ವರ್ಷಕ್ಕೆ ಶೇ. 7.25ರ ದರದಲ್ಲಿ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 7.75ರ ವಾರ್ಷಿಕ ದರ ಇದೆ. ಡೆಪಾಸಿಟ್ ಅವಧಿ 444 ದಿನ ಇರುತ್ತದೆ. ಒಂದೂವರೆ ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಪ್ಲಾನ್ ಇದು.

ಇದನ್ನೂ ಓದಿ: ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ

ಇಲ್ಲಿ ಬಡ್ಡಿ ಆದಾಯಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ. ಅಂದರೆ, ನಿಮ್ಮ ಒಟ್ಟಾರೆ ವಾರ್ಷಿಕ ಆದಾಯ ಯಾವ ಟ್ಯಾಕ್ಸ್ ಸ್ಲಾಬ್​ನಲ್ಲಿ ಬೀಳುತ್ತದೋ ಆ ತೆರಿಗೆ ದರ ಅನ್ವಯ ಆಗುತ್ತದೆ. ಟಿಡಿಎಸ್ ಕಡಿತ ಬಳಿಕ ಉಳಿದ ಬಡ್ಡಿಹಣ ನಿಮ್ಮ ಖಾತೆಗೆ ಬರುತ್ತದೆ.

ಅವಧಿಗೆ ಮುನ್ನ ಠೇವಣಿ ರದ್ದುಗೊಳಿಸಿದರೆ..?

ಎಸ್​ಬಿಐ ಅಮೃತ್ ವೃಷ್ಟಿ ಠೇವಣಿ ಯೋಜನೆಯಲ್ಲಿ ನೀವು 5 ಲಕ್ಷ ರೂವರೆಗಿನ ಠೇವಣಿ ಇರಿಸಿದ್ದು, 444 ದಿನದೊಳಗೆ ಅದನ್ನು ಹಿಂಪಡೆದರೆ ಶೇ. 0.5ರಷ್ಟು ಪೆನಾಲ್ಟಿ ಕಟ್ಟಬೇಕಾಗುತ್ತದೆ. ಉದಾಹರಣೆಗೆ, 2 ಲಕ್ಷ ರೂ ಡೆಪಾಸಿಟ್ ಇಟ್ಟಿದ್ದು, ಅದನ್ನು ಅವಧಿಗೆ ಮುನ್ನ ಹಿಂಪಡೆದರೆ 1,000 ರೂ ದಂಡ ಕಟ್ಟಬೇಕಾಗುತ್ತದೆ.

ಇನ್ನು, 5 ಲಕ್ಷ ರೂಗಿಂತ ಮೇಲ್ಪಟ್ಟ ಹಾಗೂ 3 ಕೋಟಿ ರೂ ಒಳಗಿನ ಡೆಪಾಸಿಟ್​ಗಳನ್ನು ಅವಧಿಗೆ ಮುನ್ನ ವಿತ್​ಡ್ರಾ ಮಾಡಿದರೆ ಶೇ. 1ರಷ್ಟು ದಂಡ ಕಟ್ಟಬೇಕು.

ಈ ಪೆನಾಲ್ಟಿ ಅಂಶವು ಕೇವಲ ಅಮೃತ್ ವೃಷ್ಟಿ ಪ್ಲಾನ್​ಗೆ ಮಾತ್ರವಲ್ಲ, ಎಸ್​ಬಿಐನ ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೂ ಅನ್ವಯ ಆಗುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಯೋಜನೆ: ತಿಂಗಳಿಗೆ 21,000 ರೂ ಉಳಿಸಿ, 2 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಿ

ಎಸ್​ಬಿಐ ಅಮೃತ್ ವೃಷ್ಟಿಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಎಲ್ಲಾ ಎಫ್​ಡಿಗಳಂತೆ ಅಮೃತ್ ವೃಷ್ಟಿ ಪ್ಲಾನ್ ಅನ್ನು ಆನ್​ಲೈನ್​ನಲ್ಲೇ ಸುಲಭವಾಗಿ ಮಾಡಬಹುದು. ಎಸ್​ಬಿಐನ ಯೋನೋ ಆ್ಯಪ್, ನೆಟ್ ಬ್ಯಾಂಕಿಂಗ್ ಜಾಲತಾಣಕ್ಕೆ ಹೋಗಿ ಲಾಗಿನ್ ಆದರೆ ಅಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ ಸೆಕ್ಷನ್​ನಲ್ಲಿ ಅಮೃತ್ ವೃಷ್ಟಿ ಪ್ಲಾನ್ ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು. ಆನ್​ಲೈನ್​ನಲ್ಲಿ ಬೇಡವೆಂದರೆ, ಎಸ್​ಬಿಐನ ನಿಮ್ಮ ಬ್ರ್ಯಾಂಚ್ ಕಚೇರಿಗೆ ಹೋಗಿ ಅಲ್ಲಿ ಎಫ್​ಡಿ ತೆರೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಜನ ಕುಮಾರಸ್ವಾಮಿ ಹೊರಗಿನವ ಅಂದುಕೊಂಡಿದ್ದರೆ 2 ಬಾರಿ ಗೆಲ್ಲಿಸುತ್ತಿದ್ವರೇ?
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಾಬುಸಾಬ್​ ​ಪಾಳ್ಯ ದುರಂತ: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬಿಗ್​ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಬೆಂಗಳೂರು ನಗರ ಉಸ್ತುವಾರಿ ಸಚಿವ ಶಿವಕುಮಾರ್ ಚನ್ನಪಟ್ಟಣದಲ್ಲಿ ಬ್ಯೂಸಿ!
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ
ಹಾಸನಾಂಬಾ ಸನ್ನಿಧಾನದಲ್ಲಿ ಭರದ ಸಿದ್ಧತೆ