ಎನ್ಪಿಎಸ್ ಯೋಜನೆ: ತಿಂಗಳಿಗೆ 21,000 ರೂ ಉಳಿಸಿ, 2 ಲಕ್ಷ ರೂ ಮಾಸಿಕ ಆದಾಯ ಸೃಷ್ಟಿಸಿ
National Pension Scheme, interesting things: ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಹೂಡಿಕೆ ವಾರ್ಷಿಕವಾಗಿ ಶೇ. 10ರಿಂದ 14ರವರೆಗೆ ಬೆಳೆಯಲು ಸಾಧ್ಯ. ಶೇ 10ರ ದರದಲ್ಲಿ ಹೂಡಿಕೆ ಬೆಳೆಯುತ್ತಾ ಹೋಗುತ್ತದೆ ಎಂದು ಪರಿಗಣಿಸಿದರೆ, ನೀವು ತಿಂಗಳಿಗೆ 21,000 ರೂನಂತೆ 25 ವರ್ಷ ಕಾಲ ಹೂಡಿಕೆ ಮಾಡಿದರೆ, ಆ ಬಳಿಕ ಎರಡು ಲಕ್ಷ ರೂ ಮಾಸಿಕ ಪಿಂಚಣಿ ಸೃಷ್ಟಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಒಂದು ಲೆಕ್ಕಾಚಾರ ಇಲ್ಲಿದೆ...
ನಿಮ್ಮ ಜೀವನದ ಹಣಕಾಸು ಭದ್ರತೆಗೆ ಇರುವ ಮೂಲಮಂತ್ರ ಎಂದರೆ ಹಣ ಉಳಿಸುವುದು ಮತ್ತು ಹಣ ಹೂಡಿಕೆ ಮಾಡುವುದು. ನೀವು ದುಡಿಯುವ ಹೊತ್ತಲ್ಲೇ ಭವಿಷ್ಯದಲ್ಲಿ ಬರುವ ನಿವೃತ್ತಿ ಬಗ್ಗೆ ಯೋಜಿಸುವುದು ಜಾಣತನ. ಹಣ ಉಳಿಸಿ, ಹೂಡಿಕೆ ಮಾಡಲು ಹಲವು ಯೋಜನೆಗಳಿವೆ. ಅವುಗಳಲ್ಲಿ ಪ್ರಮುಖವಾದುದು ಎನ್ಪಿಎಸ್ ಅಥವಾ ನ್ಯಾಷನಲ್ ಪೆನ್ಷನ್ ಸಿಸ್ಟಂ. ನಿಮ್ಮ ಪ್ರಸಕ್ತ ವಯಸ್ಸು ಎಷ್ಟು, ನಿವೃತ್ತಿಯಾಗಲು ಎಷ್ಟು ವರ್ಷ ಬೇಕು ಇತ್ಯಾದಿ ಆಧಾರದ ಮೇಲೆ ನೀವು ಹಣ ಉಳಿತಾಯ ಮತ್ತು ಹೂಡಿಕೆಗೆ ಪ್ಲಾನ್ ಹಾಕಬಹುದು.
ಎನ್ಪಿಎಸ್ ಮೂಲಕ 2,00,000 ರೂ ಮಾಸಿಕ ಪಿಂಚಣಿ ಸೃಷ್ಟಿಸುವುದು ಹೇಗೆ?
ನೀವು ನಿವೃತ್ತಿ ನಂತರ ತಿಂಗಳಿಗೆ ಎರಡು ಲಕ್ಷ ರೂ ಪಿಂಚಣಿ ಬರುವಂತಾಗಲು ಎಷ್ಟು ವರ್ಷ ಎಷ್ಟು ಹೂಡಿಕೆ ಬೇಕಾಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ. ನಿಮ್ಮ ಪ್ರಸಕ್ತ ವರ್ಷ 35 ವರ್ಷ ಎಂದು ಪರಿಗಣಿಸೋಣ. ನೀವು 60 ವರ್ಷದವರೆಗೂ ಕೆಲಸದಲ್ಲಿದ್ದು ನಂತರ ರಿಟೈರ್ ಆಗುತ್ತೀರೆಂದರೆ ನಿಮ್ಮ ದುಡಿಮೆ ಅವಧಿ 25 ವರ್ಷ ಇರುತ್ತದೆ.
ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ
ನಿಮಗೆ ತಿಂಗಳಿಗೆ ಎರಡು ಲಕ್ಷ ರೂ ಪಿಂಚಣಿ ಬರಬೇಕೆಂದರೆ ನಿಮ್ಮ ಬಳಿ 2.77 ಕೋಟಿ ರೂ ಹಣ ಇರಬೇಕು. ಈಗ ನಿಮ್ಮ ಗುರಿ ಈ 25 ವರ್ಷದಲ್ಲಿ 2.77 ಕೋಟಿ ರೂ ಹಣ ಸೃಷ್ಟಿವುದಾಗಿರಬೇಕು. 25 ವರ್ಷದಲ್ಲಿ ನಿಮ್ಮ ಎನ್ಪಿಎಸ್ ಪ್ಲಾನ್ ವಾರ್ಷಿಕವಾಗಿ ಶೇ. 10ರಷ್ಟು ಬೆಳೆಯುತ್ತದೆ ಎಂದು ಪರಿಗಣಿಸೋಣ. ಈಗ ತಿಂಗಳಿಗೆ 21,000 ರೂನಂತೆ ನೀವು 25 ವರ್ಷ ಹೂಡಿಕೆ ಮಾಡಿದರೆ, ಅದು 2.80 ಕೋಟಿ ರೂ ಆಗುತ್ತದೆ.
ಎನ್ಪಿಎಸ್ ಸ್ಕೀಮ್ ಮೆಚ್ಯೂರಿಟಿ ಆದ ಬಳಿಕ ಇಡೀ ಮೊತ್ತವನ್ನು ವಿತ್ಡ್ರಾ ಮಾಡಲು ಆಗುವುದಿಲ್ಲ. ನಿಯಮದ ಪ್ರಕಾರ ಕನಿಷ್ಠ ಶೇ. 40ರಷ್ಟು ಮೊತ್ತವನ್ನು ಆ್ಯನುಟಿ ಪ್ಲಾನ್ ಖರೀದಿಸಲು ಬಳಸಬೇಕು. 2.8 ಕೋಟಿಯಲ್ಲಿ 40 ಪರ್ಸೆಂಟ್ ಎಂದರೆ 1.12 ಕೋಟಿ ರೂ ಆಗುತ್ತದೆ. ಆ್ಯನುಟಿ ಪ್ಲಾನ್ಗಳು ಸಾಮಾನ್ಯವಾಗಿ ವಾರ್ಷಿಕವಾಗಿ ಶೇ. 6ರಷ್ಟು ಬಡ್ಡಿ ಒದಗಿಸುತ್ತವೆ. ಆ ಲೆಕ್ಕದಲ್ಲಿ ಆ್ಯನುಟಿ ಮೂಲಕ ಮಾಸಿಕವಾಗಿ 60,650 ರೂ ಪಿಂಚಣಿ ಪಡೆಯಬಹುದು.
ಇದನ್ನೂ ಓದಿ: ಹಣವಂತ ಎನಿಸಿಕೊಳ್ಳಬೇಕಾದರೆ ಎಷ್ಟು ಹಣ ಸಂಪಾದನೆ ಇರಬೇಕು? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ
ಈಗ ಎನ್ಪಿಎಸ್ನ 2.80 ಕೋಟಿ ಮೊತ್ತದಲ್ಲಿ ಉಳಿಯುವ ಹಣವನ್ನು ಲಂಪ್ಸಮ್ ಆಗಿ ಹಿಂಪಡೆಯಬಹುದು. ಅಂದರೆ, 1.68 ಕೋಟಿ ರೂ ನಿಮಗೆ ಹಿಡಿಯಾಗಿ ಸಿಗುತ್ತದೆ. ಇದನ್ನು ನೀವು ಯಾವುದಾದರೂ ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಪ್ಲಾನ್ ಮೂಲಕ ಹೈಬ್ರಿಡ್ ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು. ಈ ಫಂಡ್ ವಾರ್ಷಿಕವಾಗಿ ಶೇ. 10ರಷ್ಟು ಬೆಳೆಯುತ್ತದೆ ಎಂದು ಭಾವಿಸೋಣ. ಆಗ 1,40,00,000 (1.4 ಲಕ್ಷ) ರೂ ಮೊತ್ತವನ್ನು ಮಾಸಿಕವಾಗಿ ಪಡೆಯಬಹುದು.
ಅಲ್ಲಿಗೆ ಎಸ್ಡಬ್ಲ್ಯುಪಿಯಿಂದ 1.4 ಲಕ್ಷ ರೂ, ಆ್ಯನುಟಿಯಿಂದ 60,650 ರೂ, ಎರಡೂ ಸೇರಿ 2,00,650 ರೂ ನಿಮಗೆ ಮಾಸಿಕ ಆದಾಯ ಸಿಗುತ್ತಾ ಹೋಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ