Gold Silver Price on 04 October: ಚಿನ್ನದ ಬೆಲೆ ಕಳೆದ 9 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ; ಬೆಳ್ಳಿಯೂ ಇನ್ನಷ್ಟು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2023, October 4th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 52,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 57,380 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 71 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 52,600 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,150 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 04 October: ಚಿನ್ನದ ಬೆಲೆ ಕಳೆದ 9 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ; ಬೆಳ್ಳಿಯೂ ಇನ್ನಷ್ಟು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: Oct 04, 2023 | 5:08 AM

ಬೆಂಗಳೂರು, ಅಕ್ಟೋಬರ್ 04: ಕಳೆದ ವಾರದಂತೆ ಈ ವಾರವೂ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and silver Rates) ಕುಸಿತ ಮುಂದುವರಿಯುತ್ತಿದೆ. ಚಿನ್ನದ ಬೆಲೆ ಈ ವರ್ಷಾರಂಭದಲ್ಲಿ ಇದ್ದ ಮಟ್ಟಕ್ಕೆ ಇಳಿದಿದೆ. ಭಾರತದಲ್ಲಿ ಹಬ್ಬದ ಋತು ಇದ್ದರೂ ಚಿನ್ನದ ಬೆಲೆ ಕುಸಿತ ನಿಲ್ಲುತ್ತಿಲ್ಲ. ಬೆಳ್ಳಿ ಬೆಲೆಯಲ್ಲೂ ತುಸು ಇಳಿಕೆಯಾಗಿದೆ. ಅಮೆರಿಕದ ಬಾಂಡ್​ಗಳ ಮೇಲೆ ಹೂಡಿಕೆದಾರರ ಚಿತ್ತ ನೆಟ್ಟಿರುವುದರಿಂದ ಚಿನ್ನಕ್ಕೆ ಬೇಡಿಕೆ ನಿರೀಕ್ಷೆ ಮೀರಿ ಕಡಿಮೆ ಆಗಿದೆ. ದಿಢೀರ್ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಕಳೆದ ಒಂದು ವರ್ಷದಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಸದ್ಯ ನಿರಾಸೆಯಾಗಿರಬಹುದು. ಆದರೆ, ಚಿನ್ನದ ಆಭರಣ ಖರೀದಿಸುವವರಿಗೆ ಇದಿನ್ನೂ ಸಕಾಲವೇ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 52,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 53,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 52,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,150 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 4ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 52,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 710 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 52,600 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 715 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 52,600 ರೂ
  • ಚೆನ್ನೈ: 52,900 ರೂ
  • ಮುಂಬೈ: 52,600 ರೂ
  • ದೆಹಲಿ: 52,750 ರೂ
  • ಕೋಲ್ಕತಾ: 52,600 ರೂ
  • ಕೇರಳ: 52,600 ರೂ
  • ಅಹ್ಮದಾಬಾದ್: 52,650 ರೂ
  • ಜೈಪುರ್: 52,750 ರೂ
  • ಲಕ್ನೋ: 52,750 ರೂ
  • ಭುವನೇಶ್ವರ್: 52,600 ರೂ

ಇದನ್ನೂ ಓದಿ: ನಕಲಿ ವೆಬ್​ಸೈಟ್​ನಲ್ಲಿ ಫ್ಲ್ಯಾಟ್ ಬುಕ್ ಮಾಡಿ ಲಕ್ಷಾಂತರ ಹಣ ಕಳೆದುಕೊಂಡ ದೆಹಲಿ ವ್ಯಕ್ತಿ; ಗೂಗಲ್​ನಲ್ಲಿ ಸರ್ಚ್ ಮಾಡುವಾಗ ಹುಷಾರು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,770 ರಿಂಗಿಟ್ (48,804 ರುಪಾಯಿ)
  • ದುಬೈ: 2,050 ಡಿರಾಮ್ (46,441 ರುಪಾಯಿ)
  • ಅಮೆರಿಕ: 565 ಡಾಲರ್ (47,020 ರುಪಾಯಿ)
  • ಸಿಂಗಾಪುರ: 777 ಸಿಂಗಾಪುರ್ ಡಾಲರ್ (47,029 ರುಪಾಯಿ)
  • ಕತಾರ್: 2,115 ಕತಾರಿ ರಿಯಾಲ್ (48,276 ರೂ)
  • ಓಮನ್: 223.50 ಒಮಾನಿ ರಿಯಾಲ್ (48,375 ರುಪಾಯಿ)
  • ಕುವೇತ್: 176.50 ಕುವೇತಿ ದಿನಾರ್ (47,475 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,150 ರೂ
  • ಚೆನ್ನೈ: 7,350 ರೂ
  • ಮುಂಬೈ: 7,100 ರೂ
  • ದೆಹಲಿ: 7,100 ರೂ
  • ಕೋಲ್ಕತಾ: 7,100 ರೂ
  • ಕೇರಳ: 7,350 ರೂ
  • ಅಹ್ಮದಾಬಾದ್: 7,100 ರೂ
  • ಜೈಪುರ್: 7,100 ರೂ
  • ಲಕ್ನೋ: 7,100 ರೂ
  • ಭುವನೇಶ್ವರ್: 7,350 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us