ಶತಶತಮಾನಗಳಿಂದ ಚಿನ್ನ ಮತ್ತು ಮನುಷ್ಯರ ಮಧ್ಯೆ ಗಾಢ ಬಂಧ ಇದೆ. ಚಿನ್ನ ಸೌಂದರ್ಯ ಹೆಚ್ಚಿಸುವ ವಸ್ತು. ಹೀಗಾಗಿ, ಚಿನ್ನವೆಂದರೆ ಮನುಷ್ಯನಿಗೆ ಹೆಚ್ಚು ಪ್ರೀತಿ. ಅದರಲ್ಲೂ ಭಾರತ ಮತ್ತು ಚೀನಾ ಜನರಿಗೆ ಚಿನ್ನ ಅಂದರೆ ಅತೀವ ಪ್ರೇಮ. ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಚಿನ್ನ ಇರುವುದರಿಂದ ಅದಕ್ಕೆ ಇರುವ ಬೇಡಿಕೆ ದಿನೇದಿನೇ ಹೆಚ್ಚುತ್ತಲೇ ಹೋಗುತ್ತದೆ. ಭಾರತದಲ್ಲಿ 22 ಕೆರಟ್ನ ಆಭರಣ ಚಿನ್ನದ ಬೆಲೆ (Gold Rates) ಇದೀಗ 55,000 ರೂ ಆಸುಪಾಸಿನಲ್ಲಿದೆ. ಭಾರತದಲ್ಲಿ ತೆರಿಗೆ ಹೆಚ್ಚು ಇರುವ ಕಾರಣ ಚಿನ್ನ ದುಬಾರಿಯಾಗಿದೆ. ಬೇರೆ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಬಹಳ ಕಡಿಮೆ ಇದೆ.
ಅಗ್ಗದ ಚಿನ್ನದ ವಿಷಯಕ್ಕೆ ಬಂದರೆ, ಕಾಂಬೋಡಿಯಾದಲ್ಲಿ ಬೆಲೆ ಬಹಳ ಕಡಿಮೆ. ಈಶಾನ್ಯ ಏಷ್ಯನ್ ಭಾಗದಲ್ಲಿ ಥಾಯ್ಲೆಂಡ್ ಮತ್ತು ವಿಯೆಟ್ನಾಂ ನಡುವೆ ಬರುವ, ಹಾಗೂ ವಿಶ್ವದ ಅತಿದೊಡ್ಡ ಹಿಂದೂ ದೇವಸ್ಥಾನ ಇರುವ ಕಾಂಬೋಡಿಯಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,735.46 ರೂ ಇದೆ.
ಭಾರತೀಯರು ಸಾಕಷ್ಟು ಪ್ರಮಾಣದಲ್ಲಿ ಇರುವ ಹಾಗೂ ಬಹಳಷ್ಟು ಭಾರತೀಯ ಪ್ರವಾಸಿಗರು ಹೋಗಿ ಬರುವ ಹಾಂಕಾಂಗ್ನಲ್ಲಿ ಚಿನ್ನದ ಬೆಲೆ ಕಡಿಮೆ ಇದೆ. ವಿಶ್ವದ ಅತ್ಯಂತ ಸಕ್ರಿಯ ಬುಲಿಯನ್ ಮಾರುಕಟ್ಟೆ ಇಲ್ಲಿನದು. ಸದ್ಯ ಇಲ್ಲಿನ ಬೆಲೆಯನ್ನು ಭಾರತೀಯ ರೂಪಾಯಿಯಲ್ಲಿ ಪರಿಗಣಿಸಿದಾಗ 22 ಕ್ಯಾರೆಟ್ನ 10 ಗ್ರಾಮ್ ಚಿನ್ನ 46,867 ರೂಕ ಆಗುತ್ತದೆ.
ಸ್ವಿಟ್ಜರ್ಲೆಂಡ್‌ನ ಚಿನ್ನದ ವಿನ್ಯಾಸಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಪ್ರಪಂಚದಾದ್ಯಂತ ಅದರ ವಿನ್ಯಾಸಕಾರರ ಕೈಗಡಿಯಾರಗಳಿಗೆ ಇದು ಬಹಳ ಪ್ರಸಿದ್ಧವಾಗಿದೆ. ಈ ದೇಶದಲ್ಲಿ ಉತ್ತಮ ಚಿನ್ನದ ವ್ಯಾಪಾರವಿದೆ. ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ನಗರದಲ್ಲಿ ಜನರು ಉತ್ತಮ ಮತ್ತು ಉತ್ತಮವಾದ ಚಿನ್ನವನ್ನು ಕಾಣಬಹುದು. ಇಲ್ಲಿ ಕೈಯಿಂದ ತಯಾರಿಸಿದ ಡಿಸೈನರ್ ಆಭರಣಗಳ ಜೊತೆಗೆ ನಿಮಗೆ ಸಾಕಷ್ಟು ವೈವಿಧ್ಯತೆಗಳು ಸಿಗುತ್ತವೆ. ಸ್ವಿಟ್ಜರ್ಲೆಂಡ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 46,899 ರೂ.
ಇದನ್ನೂ ಓದಿ: TCS: ಟಿಸಿಎಸ್ಗೆ ಮೊದಲ ಕ್ವಾರ್ಟರ್ನಲ್ಲಿ ನಿರೀಕ್ಷೆಮೀರಿದ ಲಾಭ; ಷೇರಿಗೆ 9 ರೂ ಡಿವಿಡೆಂಡ್ ಘೋಷಣೆ
ದುಬೈ, ಅಬುಧಾಬಿ, ಶಾರ್ಜಾ ಒಳಗೊಂಡಿರುವ ಯುಎಇ ದೇಶದಲ್ಲಿ ಚಿನ್ನ ಗುಣಮಟ್ಟದಲ್ಲಿ ಮತ್ತು ಬೆಲೆಯಲ್ಲಿ ಬೆಸ್ಟ್. ದುಬೈನಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆಲ್ಲಾ ದುಬೈನಿಂದ ಭಾರತಕ್ಕೆ ಬರುವ ಜನರು ಕೈಯಲ್ಲಿ ಒಂದಿಷ್ಟು ಚಿನ್ನ ತಂದೇ ತರುತ್ತಿದ್ದರು. ಅಷ್ಟರಮಟ್ಟಿಗೆ ದುಬೈ ಚಿನ್ನ ಫೇಮಸ್. ದುಬೈ ಚಿನ್ನದ ಶುದ್ಧತೆ ಹೆಚ್ಚು ಎಂದು ಪರಿಗಣಿಸಲಾಗಿದೆ. ಅಂದರೆ, ದುಬೈನ ಚಿನ್ನವು ಇತರ ದೇಶಗಳಿಗಿಂತ ಉತ್ತಮವಾಗಿದೆ ಎಂದು ನಂಬಲಾಗಿದೆ. ಅದರಲ್ಲೂ ದುಬೈನಲ್ಲಿರುವ ಡೇರಾ ಎಂಬ ಪ್ರದೇಶವು ಚಿನ್ನದ ಅಡ್ಡೆ ಎಂದೇ ಖ್ಯಾತವಾಗಿದೆ. ಅಲ್ಲಿರುವ ಕೆಲವು ಪ್ಲಾಟ್‌ಫಾರ್ಮ್‌ಗಳಿಂದ ನೀವು ಉತ್ತಮ ಮತ್ತು ಅಗ್ಗದ ಚಿನ್ನವನ್ನು ಖರೀದಿಸಬಹುದು. ನಿಯಮದ ಪ್ರಕಾರ, ಪುರುಷರು 20 ಗ್ರಾಂ ಮತ್ತು ಮಹಿಳೆಯರು 40 ಗ್ರಾಂ ಚಿನ್ನವನ್ನು ಯುಎಇಯಿಂದ ತರಬಹುದು. ಯುಎಇ ಚಿನ್ನದ ಬೆಲೆಯ ಬಗ್ಗೆ ಮಾತನಾಡುವುದಾದರೆ, ಭಾರತೀಯ ರೂಪಾಯಿಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ₹ 48,793 ರೂ ಇದೆ.
ದುಬೈ ನಂತರ ನೀವು ಥೈಲ್ಯಾಂಡ್‌ನಲ್ಲಿ ಅಗ್ಗದ ಚಿನ್ನವನ್ನು ಕಾಣಬಹುದು. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನೀವು ಉತ್ತಮ ಗುಣಮಟ್ಟದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಇಲ್ಲಿ ನೀವು ತುಂಬಾ ಕಡಿಮೆ ಮಾರ್ಜಿನ್ ಮತ್ತು ಉತ್ತಮ ವೈವಿಧ್ಯತೆಯಲ್ಲಿ ಚಿನ್ನವನ್ನು ಪಡೆಯುತ್ತೀರಿ. ಥಾಯ್ಲೆಂಡ್‌ನ ಚೈನಾಟೌನ್‌ನಲ್ಲಿರುವ ಯಾವೋರತ್ ರಸ್ತೆ ಚಿನ್ನವನ್ನು ಖರೀದಿಸಲು ಹೆಚ್ಚು ಆದ್ಯತೆಯ ಸ್ಥಳಗಳಲ್ಲಿ ಒಂದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ