Gold Rates: ಬೆಳ್ಳಿ ಬೆಲೆ ತುಸು ಏರಿಕೆ; ವಿವಿಧೆಡೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರಗಳೆಷ್ಟಿವೆ? ಇಲ್ಲಿದೆ ವಿವರ

|

Updated on: Mar 04, 2023 | 5:00 AM

March 4, 2023- Check Today's Gold and Silver Prices ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಆಭರಣ ಮತ್ತು ಅಪರಂಜಿ ಚಿನ್ನದ ಬೆಲೆಗಳು ಎಷ್ಟಿವೆ? ದುಬೈ, ಅಮೆರಿಕ ಇತ್ಯಾದಿ ವಿದೇಶಗಳಲ್ಲಿ ಬೆಲೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

Gold Rates: ಬೆಳ್ಳಿ ಬೆಲೆ ತುಸು ಏರಿಕೆ; ವಿವಿಧೆಡೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರಗಳೆಷ್ಟಿವೆ? ಇಲ್ಲಿದೆ ವಿವರ
ಚಿನ್ನ
Follow us on

ಬೆಂಗಳೂರು: ಹಿಂದಿನ ದಿನ ಬೆಲೆ ಏರಿಕೆ ಕಂಡಿದ್ದ ಚಿನ್ನ (Gold Price) ಇದೀಗ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ತುಸು ವ್ಯತ್ಯಯವಾಗಿದೆ. ದೆಹಲಿ, ಮುಂಬೈ, ಜೈಪುರ ಮೊದಲಾದ ಕೆಲವೆಡೆ 100 ಗ್ರಾಮ್ ಬೆಳ್ಳಿ ಬೆಲೆ 40 ರೂಪಾಯಿಯಷ್ಟು ಹೆಚ್ಚಾಗಿದೆ. ಇಲ್ಲಿ 6,650 ರೂ ಇದ್ದ ಬೆಲೆ ಈಗ 6,690 ರೂಗೆ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ದಕ್ಷಿಣ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 7,000 ರೂನಲ್ಲೇ ಮುಂದುವರಿದಿದೆ. ವಿದೇಶಗಳ ಮಾರುಕಟ್ಟೆ ಗಮನಿಸುವುದಾದರೆ ಮಲೇಷ್ಯಾ, ದುಬೈ, ಓಮನ್ ಇತ್ಯಾದಿ ಕಡೆ ಚಿನ್ನದ ಬೆಲೆ ತುಸು ಮಟ್ಟಿಗೆ ಏರಿಕೆ ಆಗಿದೆ. ಆದರೆ ಅಲ್ಲಿನ ಕರೆನ್ಸಿಗಳ ಮೌಲ್ಯ ಇಳಿದಿರುವ ಹಿನ್ನೆಲೆಯಲ್ಲಿ ರೂಪಾಯಿ ದರದಲ್ಲಿ ಬೆಲೆ ಇಳಿಕೆಯಾಗಿದೆ.

ಭಾರತದಲ್ಲಿ ನಿನ್ನೆ ಒಂದು ಗ್ರಾಮ್​ನ ಆಭರಣ ಚಿನ್ನದ (22 Carat Gold) ಬೆಲೆ 15 ರೂಗಳಷ್ಟು ಹೆಚ್ಚಾಗಿತ್ತು. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆಯಷ್ಟು ಇಳಿಕೆಯಾಗಿತ್ತು. ಬೆಂಗಳೂರಿನಲ್ಲಿ ಇದೀಗ 10 ಗ್ರಾಮ್​ನ ಆಭರಣ ಚಿನ್ನದ (22 ಕ್ಯಾರಟ್) ಬೆಲೆ 51,800 ರೂ ಇದ್ದು, ಅಪರಂಜಿ ಚಿನ್ನ (24 Carat Gold) 56,500 ಆಗಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 10 ಗ್ರಾಮ್​ಗೆ 7 ಸಾವಿರ ರೂ ಇದೆ.

ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಆಭರಣ ಮತ್ತು ಅಪರಂಜಿ ಚಿನ್ನದ ಬೆಲೆಗಳು ಎಷ್ಟಿವೆ? ವಿದೇಶಗಳಲ್ಲಿ ಬೆಲೆ ಎಷ್ಟಿದೆ ಎಂಬಿತ್ಯಾದಿ ವಿವರಗಳು ಇಲ್ಲಿವೆ. ಭಾರತೀಯರು ಹೆಚ್ಚಾಗಿ ನೆಲಸಿರುವ ದುಬೈ, ಸಿಂಗಾಪುರ, ಮಲೇಷ್ಯಾ, ಅಮೆರಿಕ ಮೊದಲಾದ ಕಡೆಯಲ್ಲಿ ಚಿನ್ನದ ಬೆಲೆ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ: 51,750 ರೂ

24 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ: 56,450 ರೂ

ಇದನ್ನೂ ಓದಿCitigroup Layoffs: ಜೆಪಿ ಮಾರ್ಗನ್, ಗೋಲ್ಡ್​ಮನ್ ಸ್ಯಾಕ್ಸ್ ಬಳಿಕ ಈಗ ಸಿಟಿಗ್ರೂಪ್​ನಿಂದಲೂ ನೂರಾರು ಉದ್ಯೋಗಿಗಳು ವಜಾ

ವಿವಿಧ ನಗರಗಳಲ್ಲಿರುವ ಚಿನ್ನದ ದರ (10 ಗ್ರಾಮ್ 22 ಕ್ಯಾರಟ್ ಮತ್ತು 24 ಕ್ಯಾರಟ್ ಗೋಲ್ಡ್)

ಬೆಂಗಳೂರು: 51,800 ರೂ ಮತ್ತು 56,500 ರೂ

ಚೆನ್ನೈ: 52,430 ರೂ ಮತ್ತು 57,200 ರೂ

ಮುಂಬೈ: 51,750 ರೂ ಮತ್ತು 56,450 ರೂ

ದೆಹಲಿ: 51,900 ರೂ ಮತ್ತು 56,600 ರೂ

ಕೋಲ್ಕತಾ: 51,750 ರೂ ಮತ್ತು 56,450 ರೂ

ಕೇರಳ: 51,750 ರೂ ಮತ್ತು 56,450 ರೂ

ಅಹ್ಮದಾಬಾದ್: 51,800 ರೂ ಮತ್ತು 56,500 ರೂ

ಜೈಪುರ್: 51,900 ರೂ ಮತ್ತು 56,600 ರೂ

ಲಕ್ನೋ: 51,900 ರೂ ಮತ್ತು 56,600 ರೂ

ಭುವನೇಶ್ವರ್: 51,750 ರೂ ಮತ್ತು 56,450 ರೂ

ಇದನ್ನೂ ಓದಿAmbani: ಅಂಬಾನಿಯಿಂದ ಆಗ ಜಿಯೋ ಕ್ರಾಂತಿ, ಈಗ ಜಿನೋಮ್ ಕ್ರಾಂತಿ; ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಜಿನೋಮ್ ಟೆಸ್ಟಿಂಗ್ ಕಿಟ್

ವಿದೇಶಗಳಲ್ಲಿ ಚಿನ್ನದ ದರ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಗೋಲ್ಡ್

ದುಬೈ: 2,072.50 ಡಿರಾಮ್ ಮತ್ತು 2,237.50 ಡಿರಾಮ್ (46,225 ರೂ ಮತ್ತು 49,905 ರೂ)

ಮಲೇಷ್ಯಾ: 2,630 ರಿಂಗಿಟ್ ಮತ್ತು 2,730 ರಿಂಗಿಟ್ (48,133 ಮತ್ತು 49,934 ರೂ)

ಸಿಂಗಾಪುರ: 770 ಸಿಂಗಾಪುರಿಯನ್ ಡಾಲರ್ ಮತ್ತು 857 ಸಿಂಗಾಪುರಿಯನ್ ಡಾಲರ್ (46,858 ರೂ ಮತ್ತು 52,152 ರೂ)

ಅಮೆರಿಕ: 565 ಡಾಲರ್ ಮತ್ತು 610 ಡಾಲರ್ (46,284 ರೂ ಮತ್ತು 49,970 ರೂ)

ಓಮನ್: 225.50 ಒಮಾನಿ ರಿಯಾಲ್ ಮತ್ತು 235.50 ಓಮಾನಿ ರಿಯಾಲ್ (46,982 ರೂ ಮತ್ತು 50,109 ರೂ)

ಇದನ್ನೂ ಓದಿEmployee Insurance; ಹಲವು ಅನುಕೂಲತೆಗಳು, ನೆಮ್ಮದಿಯ ಜೀವನ ಕೊಡುವ ಉದ್ಯೋಗಿ ವಿಮೆ

ಬೆಳ್ಳಿ ಬೆಲೆ (100 ಗ್ರಾಮ್):

ಬೆಂಗಳೂರು: 7,000 ರೂ

ಚೆನ್ನೈ: 7,000 ರೂ

ಮುಂಬೈ: 6,690 ರೂ

ದೆಹಲಿ: 6,690 ರೂ

ಕೋಲ್ಕತಾ: 6,690 ರೂ

ಕೇರಳ: 7,000 ರೂ

ಅಹ್ಮದಾಬಾದ್: 6,690 ರೂ

ಜೈಪುರ್: 6,690 ರೂ

ಲಕ್ನೋ: 6,690 ರೂ

ಭುವನೇಶ್ವರ್: 7,000 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ