Employee Insurance; ಹಲವು ಅನುಕೂಲತೆಗಳು, ನೆಮ್ಮದಿಯ ಜೀವನ ಕೊಡುವ ಉದ್ಯೋಗಿ ವಿಮೆ
Benefits of Corporate Insurance- ಎಂಪ್ಲಾಯೀ ಹೆಲ್ತ್ ಇನ್ಷೂರೆನ್ಸ್ ಎಂಬುದು ಒಂದು ಕಾರ್ಪೊರೇಟ್ ವಿಮಾ ಯೋಜನೆ. ಕಾರ್ಪೊರೇಟ್ ಕಂಪನಿಯು ತನ್ನಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೂ ವಿಮಾ ಕವರೇಜ್ ಕೊಡುತ್ತದೆ.
ಇಂದಿನ ಜೀವಮಾನದಲ್ಲಿ ವಿಮೆ (Insurance) ಬಹಳ ಅಗತ್ಯ ಇರುವ ಯೋಜನೆ. ಕೋವಿಡ್ನಿಂದ ಜನರಿಗೆ ಇದರ ಅರಿವು ಇನ್ನೂ ಹೆಚ್ಚಾಗಿರುವುದು ಹೌದು. ಸರಿಯಾದ ವಿಮಾ ವ್ಯವಸ್ಥೆ ಇದ್ದರೆ ಜೀವನ ಹೆಚ್ಚು ನೆಮ್ಮದಿಯಿಂದ ಕೂಡಿರುತ್ತದೆ. ವೈಯಕ್ತಿಕ ಇನ್ಷೂರೆನ್ಸ್ ಪಾಲಿಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಜೊತೆಗೆ ಎಂಪ್ಲಾಯೀ ಇನ್ಷೂರೆನ್ಸ್ ಇನ್ನಷ್ಟು ನೆಮ್ಮದಿ ತರುತ್ತದೆ.
ಎಂಪ್ಲಾಯೀ ಹೆಲ್ತ್ ಇನ್ಷೂರೆನ್ಸ್ (Employee Insurance) ಎಂಬುದು ಒಂದು ಕಾರ್ಪೊರೇಟ್ ವಿಮಾ ಯೋಜನೆ. ಕಾರ್ಪೊರೇಟ್ ಕಂಪನಿಯು ತನ್ನಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೂ ವಿಮಾ ಕವರೇಜ್ ಕೊಡುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಇಎಸ್ಐ ಸೌಲಭ್ಯ ಇರುವಂತೆ ಕಾರ್ಪೊರೇಟ್ ಕಂಪನಿಗಳು ಖಾಸಗಿ ಇನ್ಷೂರೆನ್ಸ್ ಕಂಪನಿಗಳ ಜೊತೆ ಟೈ ಅಪ್ ಆಗಿ ವಿಮೆ ಪಾಲಿಸಿ ಒದಗಿಸುತ್ತವೆ.
ವೈಯಕ್ತಿಕ ವಿಮಾ ಯೋಜನೆಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಾರ್ಪೊರೇಟ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಕವರೇಜ್ ಅಧಿಕ ಇರುತ್ತದೆ. ಪ್ರೀಮಿಯಂ ಕಡಿಮೆ ಇರುತ್ತದೆ. ಕೆಳ ಮತ್ತು ಮಧ್ಯಮಸ್ತರದ ಉದ್ಯೋಗಿಗಳಿಗೆ 3ರಿಂದ 5 ಲಕ್ಷ ರೂವರೆಗೂ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಉನ್ನತ ಸ್ತರದ ಉದ್ಯೋಗಿಗಳಿಗೆ 10 ಲಕ್ಷ ರೂ ಕವರೇಜ್ ಇರುತ್ತದೆ. ಇದರ ಪ್ರೀಮಿಯಮ್ ಹಣ ವರ್ಷಕ್ಕೊಮ್ಮೆ ಕಟ್ಟುವುದಿಲ್ಲ, ಕೆಲ ಕಂಪನಿಗಳು ಉದ್ಯೋಗಿಗಳ ಸಂಬಳದಿಂದಲೇ ಹಣ ಮುರಿದುಕೊಳ್ಳಬಹುದು. ಇನ್ನೂ ಕೆಲ ಕಂಪನಿಗಳು ತಮ್ಮ ಕೈಯಿಂದಲೇ ಪ್ರೀಮಿಯಂ ಪಾವತಿಸಬಹುದು.
ಅನುಕೂಲತೆಗಳು ಹೆಚ್ಚು
ಎಂಪ್ಲಾಯೀ ಇನ್ಷೂರೆನ್ಸ್ ಸ್ಕೀಮ್ನಲ್ಲಿ ನಿಮ್ಮ ಕುಟುಂಬದವರನ್ನು ಸುಲಭವಾಗಿ ಸೇರಿಸಬಹುದು. ವೈಯಕ್ತಿಕ ವಿಮೆ ಮಾಡಿಸಬೇಕೆಂದರೆ ವಯಸ್ಸಾಗಿರುವ ಅಪ್ಪ ಅಮ್ಮರನ್ನು ಪಟ್ಟಿಗೆ ಸೇರಿಸುವುದು ಕಷ್ಟ. ಸೇರಿಸಿದರೂ ಬಹಳ ಹೆಚ್ಚು ಪ್ರೀಮಿಯಂ ಕಟ್ಟಬೇಕಾಗುತ್ತದೆ. ಕಾರ್ಪೊರೇಟ್ ವಿಮಾ ಪಾಲಿಸಿಗಳಲ್ಲಿ ಗಂಡ, ಹೆಂಡತಿ, ಮಕ್ಕಳು ಮತ್ತು ಅಪ್ಪ ಅಮ್ಮರನ್ನು ಯಾವುದೇ ಅಡೆತಡೆಯಿಲ್ಲದೇ ಸೇರಿಸಬಹುದು.
ಇದನ್ನೂ ಓದಿ: Money Double: ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟರೆ ಬೇಗ ಹಣ ಡಬಲ್; ಅತಿ ಹೆಚ್ಚು ಬಡ್ಡಿ ದರ; ಇಲ್ಲಿದೆ ವಿವರ
ಪೂರ್ವದಲ್ಲೇ ರೋಗ ಇದ್ದರೆ ಅಡೆತಡೆಯ ನಿಯಮಗಳು ಹೆಚ್ಚು. ಉದಾಹರಣೆಗೆ, ಬಿಪಿ ಶುಗರ್ ಇತ್ಯಾದಿ ರೋಗ ಇರುವ ಸದಸ್ಯರಿಗೆ ಕನ್ಷೂರೆನ್ಸ್ ಕವರ್ ಆಗಬೇಕೆಂದರೆ ಒಂದರಿಂದ ನಾಲ್ಕು ವರ್ಷದವರೆಗೆ ಪ್ರೀಮಿಯಮ್ ಕಟ್ಟಬೇಕಾಗುತ್ತದೆ. ಅದೇ ಕಾರ್ಪೊರೇಟ್ ಇನ್ಷೂರೆನ್ಸ್ ಆದರೆ ಮೊದಲ ವರ್ಷದಿಂದಲೇ ನೇರ ಕವರೇಜ್ ಸಿಗುತ್ತದೆ.
ಹಾಗೆಯೇ, ಕಾರ್ಪೊರೇಟ್ ಇನ್ಷೂರೆನ್ಸ್ನಲ್ಲಿ ನೆಟ್ವರ್ಕ್ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿರುತ್ತದೆ. ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಕ್ಯಾಷ್ಲೆಸ್ ಟ್ರೀಟ್ಮೆಂಟ್ ಪಡೆಯಬಹುದು. ಕ್ಯಾಷ್ಲೆಸ್ ಇಲ್ಲದ ಅಥವಾ ಪಟ್ಟಿಯಲ್ಲಿ ಇಲ್ಲದ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದು ಅದರ ವೆಚ್ಚವನ್ನು ಕ್ಲೇಮ್ ಮಾಡಬಹುದು. ಈ ಉದ್ಯೋಗಿ ಇನ್ಷೂರೆನ್ಸ್ನ ಇನ್ನೊಂದು ಅನುಕೂಲತೆ ಎಂದರೆ ವಿಮಾ ಸಂಬಂಧ ಯಾವುದಾದರೂ ಗೊಂದಲವಾದರೆ ಅಥವಾ ಸಮಸ್ಯೆ ತಲೆದೋರಿದರೆ ಆತ ಕೆಲಸ ಮಾಡುವ ಕಂಪನಿಯ ನಿಯೋಜಿತ ವ್ಯಕ್ತಿಯೊಬ್ಬರು ಸಹಾಯಕ್ಕೆ ಸಿದ್ಧರಿರುತ್ತಾರೆ.
ನಿಮಗೆ ಇನ್ಷೂರೆನ್ಸ್ ಕವರೇಜ್ ಮಟ್ಟ ಸಾಕಾಗುವುದಿಲ್ಲ ಎಂದನಿಸಿದರೆ ಟಾಪ್ ಅಪ್ ಪ್ಲಾನ್ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಇದು ವರ್ಷಕ್ಕೊಮ್ಮೆ ಇನ್ಷೂರೆನ್ಸ್ ರಿನಿವಲ್ ಸಮಯದಲ್ಲಿ ಮಾತ್ರ ಈ ಆಯ್ಕೆ ಇರುತ್ತದೆ. ಟಾಪ್ ಅಪ್ ಪ್ಲಾನ್ ಆರಿಸಿಕೊಂಡರೆ ಹೆಚ್ಚು ಪ್ರೀಮಿಯಮ್ ಕಟ್ಟಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Thu, 2 March 23