Money Double: ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಬೇಗ ಹಣ ಡಬಲ್; ಅತಿ ಹೆಚ್ಚು ಬಡ್ಡಿ ದರ; ಇಲ್ಲಿದೆ ವಿವರ

Axis Bank FD Rates: ಹಿರಿಯ ನಾಗರಿಕರು ಆ್ಯಕ್ಸಿಸ್ ಬ್ಯಾಂಕ್​ನಲ್ಲಿ 2 ಕೋಟಿ ರೂಗಿಂತ ಕಡಿಮೆ ಮೊತ್ತದ ಠೇವಣಿ ಇರಿಸಿದರೆ ಶೇ. 8.01 ಬಡ್ಡಿ ಪಡೆಯಬಹುದು. ಇತರ ಸಾರ್ವಜನಿಕರು ಇರಿಸುವ ಠೇವಣಿಗಳಿಗೆ ಗರಿಷ್ಠ ಶೇ. 7.26 ಬಡ್ಡಿ ಕೊಡಲಾಗುತ್ತದೆ.

Money Double: ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಬೇಗ ಹಣ ಡಬಲ್; ಅತಿ ಹೆಚ್ಚು ಬಡ್ಡಿ ದರ; ಇಲ್ಲಿದೆ ವಿವರ
ಆ್ಯಕ್ಸಿಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2023 | 4:53 PM

ಬೆಂಗಳೂರು: ಆ್ಯಕ್ಸಿಸ್ ಬ್ಯಾಂಕ್ (Axis bank) ಇತ್ತೀಚೆಗಷ್ಟೇ ತನ್ನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಈ ಬ್ಯಾಂಕ್​ನಲ್ಲಿ ಇಡಲಾಗುವ ನಿಶ್ಚಿತ ಠೇವಣಿಗಳಿಗೆ (Fixed Deposits) ಶೇ. 8.01ರವರೆಗೂ ಬಡ್ಡಿ ಸಿಗುತ್ತದೆ. ದೇಶದ ಬ್ಯಾಂಕುಗಳಲ್ಲೇ ಠೇವಣಿಗಳಿಗೆ ನೀಡಲಾಗುವ ಅತಿಹೆಚ್ಚು ಬಡ್ಡಿ ಇದಾಗಿದೆ. ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ.

ಹಿರಿಯ ನಾಗರಿಕರು (Senior Citizens) ಆ್ಯಕ್ಸಿಸ್ ಬ್ಯಾಂಕ್​ನಲ್ಲಿ 2 ಕೋಟಿ ರೂಗಿಂತ ಕಡಿಮೆ ಮೊತ್ತದ ಠೇವಣಿ ಇರಿಸಿದರೆ ಶೇ. 8.01 ಬಡ್ಡಿ ಪಡೆಯಬಹುದು. ಇತರ ಸಾರ್ವಜನಿಕರು ಇರಿಸುವ ಠೇವಣಿಗಳಿಗೆ ಗರಿಷ್ಠ ಶೇ. 7.26 ಬಡ್ಡಿ ಕೊಡಲಾಗುತ್ತದೆ.

10 ವರ್ಷದ ಅವಧಿಯ ನಿಶ್ಚಿತ ಠೇವಣಿಗಳಿಗೆ ತುಸು ಕಡಿಮೆ ಬಡ್ಡಿ ಸಿಗುತ್ತದೆ. ಆದರೆ, ಸಾರ್ಜನಿಕರು ಕನಿಷ್ಠ ಶೇ. 7ರಷ್ಟು ಬಡ್ಡಿ ಪಡೆಯಬಹುದು. 1 ಲಕ್ಷ ರೂ ಹಣವನ್ನು 10 ವರ್ಷದ ಅವಧಿಗೆ ನಿಶ್ಚಿತ ಠೇವಣಿಯಾಗಿ ಇರಿಸಿದರೆ 2,00,159 ರೂ ಕೈ ಸೇರುತ್ತದೆ. ಹಿರಿಯ ನಾಗರಿಕರಿಗೆ ಇದೇ ವೇಳೆ ಶೇ. 7.75ರಷ್ಟು ಬಡ್ಡಿ ಹಣ ಸಿಕ್ಕು ಅವರ ಕೈಸೇರುವ ಹಣ 2,15,456 ರೂ ಆಗುತ್ತದೆ. ಅಂದರೆ 10 ವರ್ಷದಲ್ಲಿ ಸುಲಭವಾಗಿ ಹಣ ಡಬಲ್ ಆಗುತ್ತದೆ.

ಹಿರಿಯ ನಾಗಕರಿಕರು 2 ವರ್ಷದ ಅವಧಿಗೆ 1 ಲಕ್ಷ ರೂ ಹಣವನ್ನು ಇರಿಸಿ ಅದರಿಂದ ಬರುವ ಬಡ್ಡಿ ಸಮೇತ ಹಾಗೆಯೇ ಮತ್ತೆ ಹೊಸ ಎಫ್​ಡಿಗೆ ಮುಂದುವರಿಸಬಹುದು. ಹೀಗೆ 10 ವರ್ಷದಲ್ಲಿ 1 ಲಕ್ಷ ರೂ ಹಣಕ್ಕೆ 2.25 ಲಕ್ಷ ರೂ ಶೇಖರಣೆ ಆಗುತ್ತದೆ.

ಆ್ಯಕ್ಸಿಸ್ ಬ್ಯಾಂಕ್​ನಲ್ಲಿ 13 ತಿಂಗಳಿಂದ 24 ತಿಂಗಳೊಳಗಿನ ನಿಶ್ಚಿತ ಠೇವಣಿಗಳಿಗೆ ಶೇ. 6.75ದಿಂದ ಶೇ. 7.5ರವರೆಗೆ ಬಡ್ಡಿ ಬರುತ್ತದೆ.

ಇದನ್ನೂ ಓದಿ: SBI Sarvottam Scheme: ಪಿಪಿಎಫ್, ಎನ್​ಎಸ್​ಸಿ ಇತ್ಯಾದಿಗಿಂತ ಎಸ್​ಬಿಐನ ಈ ಸ್ಕೀಮ್​ನಲ್ಲಿ ರಿಟರ್ನ್ಸ್ ಹೆಚ್ಚು

ಇನ್ನು, 1 ವರ್ಷ 25 ದಿನಗಳಿಂದ ಹಿಡಿದು 13 ತಿಂಗಳವರೆಗಿನ ಠೇವಣಿಯಾದರೆ ಸಾಮಾನ್ಯ ನಾಗಕರಿಗೆ ಶೇ. 7.1 ಮತ್ತು ಹಿರಿಯ ನಾಗರಿಕರಿಗೆ ಶೇ. 7.85 ಬಡ್ಡಿ ಸಿಗುತ್ತದೆ. ಇನ್ನು ಈ ಬ್ಯಾಂಕ್​ನಲ್ಲಿ ಆರಂಭಿಕ ಬಡ್ಡಿ ದರ ಶೇ. 3.5ರಿಂದ ಶುರುವಾಗುತ್ತದೆ. 45 ದಿನಗಳಿಗೂ ಹೆಚ್ಚು ಅವಧಿಯ ಠೇವಣಿಗಳಿಗೆ ಶೇ. 4ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಶೇ. 6ಕ್ಕಿಂತ ಹೆಚ್ಚು ಬಡ್ಡಿ ದರ ಸಿಗಬೇಕೆಂದರೆ ಕನಿಷ್ಠ 9 ತಿಂಗಳ ಅವಧಿಯ ಎಫ್​ಡಿ ಮಾಡಿಸಬೇಕಾಗುತ್ತದೆ.

ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕು. ಎಫ್​ಡಿ ಮೇಲೆ ಸಿಗುವ ಬಡ್ಡಿಗೆ ತೆರಿಗೆ ಅನ್ವಯ ಆಗುತ್ತದೆ. ಆದರೆ, 5 ವರ್ಷಗಳ ಅವಧಿಗೆ ಇರಿಸುವ ಎಫ್​ಡಿ ಇಟ್ಟುಕೊಂಡು ಡಿಡಕ್ಷನ್ ಕ್ಲೇಮ್ ಮಾಡಬಹುದು. ಐಟಿ ಸೆಕ್ಷನ್ 80ಸಿ ಅಡಿಯಲ್ಲಿ ಒಂದು ವರ್ಷದಲ್ಲಿ ಒಂದೂವರೆ ಲಕ್ಷ ರೂನಷ್ಟು ಡಿಡಕ್ಷನ್ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ