Mutual Fund: ಈ ಮ್ಯೂಚುವಲ್ ಫಂಡ್​​ನಲ್ಲಿ ದಿನಕ್ಕೆ 50 ರೂ. ಹೂಡಿಕೆ ಮಾಡಿ, 30 ಲಕ್ಷ ಗಳಿಸಿ!

ಉದಾಹರಣೆಗೆ ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್​ನ ಲೆಕ್ಕಾಚಾರ ಗಮನಿಸಬಹುದು. ಈ ಸ್ಮಾಲ್​ಕ್ಯಾಪ್ ಫಂಡ್​ ಈವರೆಗೆ ಹೂಡಿಕೆದಾರರಿಗೆ ಎಷ್ಟು ರಿಟರ್ನ್ಸ್ ತಂದುಕೊಟ್ಟಿದೆ? ಈಗ ಹೂಡಿಕೆ ಮಾಡಿದರೆ ಎಷ್ಟು ಗಳಿಸಬಹುದಾದ ಸಾಧ್ಯತೆ ಇದೆ ಎಂಬ ವಿವರ ಇಲ್ಲಿದೆ.

Mutual Fund: ಈ ಮ್ಯೂಚುವಲ್ ಫಂಡ್​​ನಲ್ಲಿ ದಿನಕ್ಕೆ 50 ರೂ. ಹೂಡಿಕೆ ಮಾಡಿ, 30 ಲಕ್ಷ ಗಳಿಸಿ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Mar 01, 2023 | 9:00 AM

ದಿನಕ್ಕೆ 50 ರೂ. ಉಳಿತಾಯ (Savings) ಮಾಡುವುದು ಈಗ ದೊಡ್ಡ ವಿಷಯವೆನಿಸದು. ಆದರೆ, ಅದನ್ನೇ ದೀರ್ಘಾವಧಿಗೆ ಹೂಡಿಕೆ (Investment) ಮಾಡಿದರೆ ಬರೋಬ್ಬರಿ ರಿಟರ್ನ್ಸ್ ಪಡೆಯಬಹುದು ಎನ್ನುತ್ತವೆ ಎಸ್​​ಐಪಿ (SIP Calculator) ಕ್ಯಾಲ್ಕುಲೇಟರ್​ಗಳು. ಹೌದು, ಪ್ರತಿ ದಿನ 50 ರೂ. ಅಂದರೆ ತಿಂಗಳಿಗೆ 1,500 ರೂ. ಆಯಿತು. ಇದನ್ನು ಮ್ಯೂಚುವಲ್ ಫಂಡ್​ನಲ್ಲಿ (Mutual Fund) ವ್ಯವಸ್ಥಿತ ಹೂಡಿಕೆ ವಿಧಾನ ಅಥವಾ ಎಸ್​ಐಪಿ ಮೂಲಕ ಹೂಡಿಕೆ ಮಾಡುತ್ತಾ ಬಂದರೆ ಹೆಚ್ಚಿನ ಲಾಭ ಪಡೆಯಬಹುದು. ಉದಾಹರಣೆಗೆ; ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್​ನ (Quant Small Cap fund) ಲೆಕ್ಕಾಚಾರ ಗಮನಿಸಬಹುದು. ಈ ಸ್ಮಾಲ್​ಕ್ಯಾಪ್ ಫಂಡ್​ ಈವರೆಗೆ ಹೂಡಿಕೆದಾರರಿಗೆ ಎಷ್ಟು ರಿಟರ್ನ್ಸ್ ತಂದುಕೊಟ್ಟಿದೆ? ಈಗ ಹೂಡಿಕೆ ಮಾಡಿದರೆ ಎಷ್ಟು ಗಳಿಸಬಹುದಾದ ಸಾಧ್ಯತೆ ಇದೆ ಎಂಬ ವಿವರ ಇಲ್ಲಿದೆ.

ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್​ 1996ರ ಅಕ್ಟೋಬರ್ 29ರಂದು ಸ್ಥಾಪನೆಯಾಗಿದೆ. ಅಂದಿನಿಂದ ಈವರೆಗೆ ಶೇ 11.47ರ ರಿಟರ್ನ್ಸ್​ ತಂದುಕೊಟ್ಟಿರುವುದಾಗಿ ಎಎಂಎಫ್​​ಐ ವೆಬ್​​ಸೈಟ್​​ನಲ್ಲಿರುವ ಈವರೆಗಿನ (2023ರ ಫೆಬ್ರವರಿ 28) ದತ್ತಾಂಶಗಳಿಂದ ತಿಳಿದುಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಫಂಡ್ ರೆಗ್ಯುಲರ್ ಪ್ಲಾನ್​​ನಡಿಯಲ್ಲಿ ಶೇ 47.25 ಹಾಗೂ ಡೈರೆಕ್ಟ್ ಪ್ಲಾನ್ ಅಡಿಯಲ್ಲಿ ಶೇ 49.35ರ ರಿಟರ್ನ್ಸ್ ತಂದುಕೊಟ್ಟಿದೆ.

ಇದನ್ನೂ ಓದಿ: Mutual Funds: ಮ್ಯೂಚುವಲ್ ಫಂಡ್; 5 ವರ್ಷಗಳಲ್ಲಿ 50 ಲಕ್ಷ ರಿಟರ್ನ್ಸ್​ಗೆ ಎಷ್ಟು ಮೊತ್ತದ ಎಸ್​ಐಪಿ ಅಗತ್ಯ? ಇಲ್ಲಿದೆ ಮಾಹಿತಿ

ಆನ್​ಲೈನ್ ಮ್ಯೂಚುವಲ್ ಫಂಡ್​ ಎಸ್​ಐಪಿ ಕ್ಯಾಲ್ಕುಲೇಟರ್​ಗಳು ತೋರಿಸಿರುವ ಲೆಕ್ಕಾಚಾರದ ಪ್ರಕಾರ, 1996ರಿಂದ ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್​ನಲ್ಲಿ ತಿಂಗಳಿಗೆ 1,500 ರೂ.ನಂತೆ ಹೂಡಿಕೆ ಮಾಡಿದ್ದರೆ ಈಗ 30 ಲಕ್ಷ ರೂ. ರಿಟರ್ನ್ಸ್ ದೊರೆಯುತ್ತಿತ್ತು. ಕಳೆದ ಮೂರು ವರ್ಷಗಳಿಂದ ತಿಂಗಳಿಗೆ 1,500 ರೂ.ನಂತೆ ಹೂಡಿಕೆ ಮಾಡಿದ್ದರೆ ಈಗ ಅದು 1.2 ಲಕ್ಷ ರೂ. ಆಗುತ್ತಿತ್ತು.

ದೀರ್ಘಾವಧಿಯ ಹೂಡಿಕೆಗೆ ಉತ್ತಮ

ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್ ದೀರ್ಘಾವಧಿಯ ಹೂಡಿಕೆಗೆ ಬೆಸ್ಟ್ ಎನ್ನುತ್ತಾರೆ ಹೂಡಿಕೆ ತತ್ಞರು. ಸ್ಮಾಲ್​ಕ್ಯಾಪ್ ಫಂಡ್​ಗಳು ಸಾಮಾನ್ಯವಾಗಿ ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ಗಳಿಸಿಕೊಡುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಅತಿಹೆಚ್ಚಿನ ರಿಟರ್ನ್ಸ್​ ಅನ್ನೂ ಗಳಿಸಿಕೊಟ್ಟಿವೆ.

ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್ ಎಲ್ಲೆಲ್ಲಿ ಹೂಡಿಕೆ ಮಾಡಿದೆ?

ಕ್ವಾಂಟ್ ಸ್ಮಾಲ್​ಕ್ಯಾಪ್ ಫಂಡ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ 12.45ರಷ್ಟು ಹೂಡಿಕೆ ಮಾಡಿದೆ. ಎಫ್​ಎಂಸಿಜಿಯಲ್ಲಿ ಶೇ 9.39, ನಿರ್ಮಾಣ ಚಟುವಟಿಕೆಯಲ್ಲಿ ಶೇ 6.74, ಲೋಹ ಉದ್ದಿಮೆಯಲ್ಲಿ ಶೇ 5.74, ಔಷಧ ಕ್ಷೇತ್ರದಲ್ಲಿ ಶೇ 5.2 ಹಾಗೂ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ.

(ಮ್ಯೂಚುವಲ್ ಫಂಡ್​ ಹೂಡಿಕೆಗಳು ಮಾರುಕಟ್ಟೆ ರಿಸ್ಕ್​​ಗಳಿಗೆ ಮುಕ್ತವಾಗಿರುತ್ತವೆ. ಹೀಗಾಗಿ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆದು ಮುಂದುವರಿಯುವುದು ಉತ್ತಮ) 

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ