Mutual Funds: ಮ್ಯೂಚುವಲ್ ಫಂಡ್; 5 ವರ್ಷಗಳಲ್ಲಿ 50 ಲಕ್ಷ ರಿಟರ್ನ್ಸ್​ಗೆ ಎಷ್ಟು ಮೊತ್ತದ ಎಸ್​ಐಪಿ ಅಗತ್ಯ? ಇಲ್ಲಿದೆ ಮಾಹಿತಿ

ಐದು ವರ್ಷಗಳಲ್ಲಿ 50 ಲಕ್ಷ ರೂ. ರಿಟರ್ನ್ಸ್​​ ಗುರಿಯೊಂದಿಗೆ ಹೂಡಿಕೆ ಮಾಡುವಾಗ ಫ್ಲೆಕ್ಸಿ ಕ್ಯಾಪ್ ಅಥವಾ ಮಲ್ಟಿ ಕ್ಯಾಪ್ ಫಂಡ್​​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಯಾಕೆಂದರೆ ಈ ಫಂಡ್​​ಗಳು ಮಾರುಕಟ್ಟೆಯ ವಿವಿಧ ವಿಭಾಗಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ.

Mutual Funds: ಮ್ಯೂಚುವಲ್ ಫಂಡ್; 5 ವರ್ಷಗಳಲ್ಲಿ 50 ಲಕ್ಷ ರಿಟರ್ನ್ಸ್​ಗೆ ಎಷ್ಟು ಮೊತ್ತದ ಎಸ್​ಐಪಿ ಅಗತ್ಯ? ಇಲ್ಲಿದೆ ಮಾಹಿತಿ
ಎಸ್​ಐಪಿ ಹೂಡಿಕೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on: Jan 03, 2023 | 12:28 PM

ವೈಯಕ್ತಿಕ ಹಣಕಾಸಿನ (Personal Finance) ವಿಚಾರಕ್ಕೆ ಬಂದಾಗ, ಉತ್ತಮ ಅನುಭವ ಉಳ್ಳವರಾಗಿರಬಹುದು ಅಥವಾ ಹೊಸಬರೇ ಆಗಿರಬಹುದು, ಸರಿಯಾಗಿ ವಿವೇಚಿಸಿ ಮತ್ತು ಲೆಕ್ಕಾಚಾರ ಹಾಕಿ ಹೂಡಿಕೆ (Investment) ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸಂಪತ್ತಿನ ವೃದ್ಧಿಗೆ ಸಾಮಾನ್ಯವಾಗಿ ಎಸ್​ಐಪಿ (SIP) ಅಥವಾ ವ್ಯವಸ್ಥಿತ ಹೂಡಿಕೆ ವಿಧಾನದ ಮೂಲಕ ಹೂಡಿಕೆಗೆ ಸಲಹೆ ನೀಡಲಾಗುತ್ತಿದೆ. ಎಸ್​ಐಪಿ ಮೂಲಕ ದೀರ್ಘಾವಧಿಗೆ ಮಾಡುವ ಹೂಡಿಕೆಯಿಂದ ಹೆಚ್ಚಿನ ರಿಟರ್ನ್ಸ್ ಗಳಿಸಬಹುದು. ಎಸ್​​ಐಪಿ ಮೂಲಕ ಹೂಡಿಕೆ ಮಾಡಿ ಮುಂದಿನ 5 ವರ್ಷಗಳಲ್ಲಿ 50 ಲಕ್ಷ ರೂ. ಗಳಿಸುವುದು ನಿಮ್ಮ ಗುರಿ ಎಂದಿಟ್ಟುಕೊಳ್ಳೋಣ. ಹಾಗಿದ್ದರೆ ನಿಮ್ಮ ರಿಸ್ಕ್ ಪ್ರೊಫೈಲ್​ಗೆ ಅನುಗುಣವಾಗಿ ಪ್ರತಿ ತಿಂಗಳು ಎಷ್ಟು ಮೊತ್ತದ ಎಸ್​ಐಪಿ ಹೂಡಿಕೆ ಮಾಡಬೇಕು? ತಜ್ಞರು ನೀಡಿರುವ ಸಲಹೆ ಆಧಾರಿತ ಮಾಹಿತಿ ಇಲ್ಲಿದೆ.

ಯಾವುದೇ ಗುರಿ ಇಟ್ಟುಕೊಳ್ಳದೆ ಸುಮ್ಮನೇ ಹೂಡಿಕೆ ಮಾಡುತ್ತಾ ಹೋಗುವ ಬದಲು, ಗುರಿ ಆಧಾರಿತ ಹೂಡಿಕೆ ವಿಧಾನ ಒಳ್ಳೆಯದು ಎಂದಿದ್ದಾರೆ ‘ಫಿನ್​ಟೂ’ ಸ್ಥಾಪಕ ಸಿಎ ಮನೀಶ್ ಪಿ ಹಿಂಗರ್. ಇವರ ಜತೆಗೆ ನಡೆಸಿದ ಸಂದರ್ಶನವನ್ನು ಆಧಾರವಾಗಿಟ್ಟುಕೊಂಡು ‘ಲೈವ್ ಮಿಂಟ್ ಡಾಟ್ ಕಾಂ’ ಎಸ್​ಐಪಿ ಹೂಡಿಕೆ ಸಲಹೆ ನೀಡಿದೆ. ಗುರಿ ಆಧಾರಿತ ಹೂಡಿಕೆಯಲ್ಲಾದರೆ ಇಂತಿಷ್ಟು ಮೊತ್ತ ಹೂಡಿಕೆ ಮಾಡಬೇಕೆಂಬ ಲೆಕ್ಕಾಚಾರ ಹಾಕಬಹುದು. ಹೂಡಿಕೆದಾರ ರಿಸ್ಕ್ ಪ್ರೊಫೈಲ್, ಹೂಡಿಕೆ ಸಾಮರ್ಥ್ಯ ಇತ್ಯಾದಿ ಲೆಕ್ಕಾಚಾರಗಳಿಗೆ ಅನುಗುಣವಾಗಿ ಹಣಕಾಸು ಯೋಜನೆಗಳನ್ನು ಸಿದ್ಧತೆ ಮಾಡಿಕೊಳ್ಳಬಹುದು ಎಂದು ಮನೀಶ್ ಹೇಳಿದ್ದಾರೆ.

50 ಲಕ್ಷ ರಿಟರ್ನ್ಸ್​ಗೆ ಎಷ್ಟು ಮೊತ್ತದ ಎಸ್​​ಐಪಿ ಅಗತ್ಯ?

ಐದು ವರ್ಷಗಳಲ್ಲಿ 50 ಲಕ್ಷ ರೂ. ರಿಟರ್ನ್ಸ್​​ ಗುರಿಯೊಂದಿಗೆ ಹೂಡಿಕೆ ಮಾಡುವಾಗ ಫ್ಲೆಕ್ಸಿ ಕ್ಯಾಪ್ ಅಥವಾ ಮಲ್ಟಿ ಕ್ಯಾಪ್ ಫಂಡ್​​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಯಾಕೆಂದರೆ ಈ ಫಂಡ್​​ಗಳು ಮಾರುಕಟ್ಟೆಯ ವಿವಿಧ ವಿಭಾಗಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ ಎಂದು ಅವರು ಸಲಹೆ ನೀಡಿದ್ದಾರೆ. ಉದಾಹರಣೆಗೆ, ಐದು ವರ್ಷಗಳಲ್ಲಿ 50 ಲಕ್ಷ ರೂ. ರಿಟರ್ನ್ಸ್​​ ಗುರಿಯೊಂದಿಗೆ ಫ್ಲೆಕ್ಸಿ ಕ್ಯಾಪ್ ಅಥವಾ ಮಲ್ಟಿ ಕ್ಯಾಪ್ ಫಂಡ್​​​ನಲ್ಲಿ ಹೂಡಿಕೆ ಮಾಡುವುದಿದ್ದರೆ, ವಾರ್ಷಿಕ ಶೇಕಡಾ 15ರ ರಿಟರ್ನ್ಸ್ ಗುರಿಯೊಂದಿಗೆ ಪ್ರತಿ ತಿಂಗಳು 55,750 ರೂ. ಮೊತ್ತದ ಎಸ್​​ಐಪಿ ಆರಂಭಿಸಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್​ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ

ಎಚ್​ಡಿಎಫ್​ಸಿ ಫ್ಲೆಕ್ಸಿ ಕ್ಯಾಪ್ ಫಂಡ್, ನಿಪ್ಪಾನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್​​ಗಳು ಈ ವರ್ಷ ಕ್ರಮವಾಗಿ ವಾರ್ಷಿಕ ಶೇಕಡಾ 19.40 ಹಾಗೂ ಶೇಕಡಾ 15.90 ಗಳಿಕೆ ದಾಖಲಿಸಿವೆ. ಈ ಫಂಡ್​​ಗಳ ಕೆಟಗರಿ ಸರಾಸರಿ ಶೇಕಡಾ 2.59 ಹಾಗೂ ಶೇಕಡಾ 5.91 ಆಗಿದೆ. ಈ ಎರಡೂ ಫಂಡ್​​ಗಳು ಬೇರೆ ಬೇರೆ ಕ್ಷೇತ್ರದ ಷೇರುಗಳಲ್ಲಿ ಹೂಡಿಕೆ ಮಾಡಿ ಉತ್ತಮ ಕಾರ್ಯತಂತ್ರ ರೂಪಿಸಿರುವುರಿಂದ ಮಾರುಕಟ್ಟೆ ಏರಿಳಿತಗಳ ಹೊರತಾಗಿಯೂ ಉತ್ತಮ ಗಳಿಕೆ ದಾಖಲಿಸುತ್ತಿವೆ.

ಫಂಡ್ ಆಯ್ಕೆ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ ಅಧ್ಯಯನ ನಡೆಸಿ ಭಿನ್ನ ಮ್ಯೂಚುವಲ್ ಫಂಡ್​​ಗಳಲ್ಲಿ ಹೂಡಿಕೆ ಆಯ್ದುಕೊಳ್ಳುಬೇಕು. ಹೂಡಿಕೆ ಗುರಿ, ಮಾರುಕಟ್ಟೆ ಅಪಾಯಗಳಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹಾಗೂ ಇತರ ಅಂಶಗಳನ್ನು ಪರಿಗಣಿಸಿ ಫಂಡ್ ಆಯ್ದುಕೊಳ್ಳಬೇಕು ಎಂದು ಮನೀಶ್ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?