AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!

ಬೆಂಗಳೂರಿಗರಿಗರು ಇನ್ಮುಂದೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ 5 ಕೆಜಿ ಮತ್ತು 10 ಕೆಜಿ ತೂಕದ HPCL ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಬಾಗಿಲಿಗೇ ಆರ್ಡರ್ ಮಾಡಬಹುದಾಗಿದೆ. ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದ್ದು, ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ.

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!
ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!Image Credit source: deccanherald.com
ಪ್ರಸನ್ನ ಹೆಗಡೆ
|

Updated on:Jul 15, 2026 | 4:06 PM

Share

ಮುಖ್ಯಾಂಶಗಳು

  • ಇನ್‌ಸ್ಟಾಮಾರ್ಟ್ ಮೂಲಕ ಎಲ್‌ಪಿಜಿ ಸಿಲಿಂಡರ್‌ ಆರ್ಡರ್​​ಗೆ ಅವಕಾಶ
  • ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಲ್ಲಿ ಯೋಜನೆ ಜಾರಿ
  • ಈ ಸಿಲಿಂಡರ್ ಖರೀದಿಸಲು ಗೃಹಬಳಕೆಯ ಎಲ್‌ಪಿಜಿ ಸಂಪರ್ಕ ಬೇಕಿಲ್ಲ

ಬೆಂಗಳೂರು, ಜುಲೈ 15: ತ್ವರಿತ ವಿತರಣಾ (Quick Commerce) ವೇದಿಕೆ ಇನ್‌ಸ್ಟಾಮಾರ್ಟ್ (Instamart) ಮೂಲಕ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಅವಕಾಶವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪರಿಚಯಿಸಿದೆ. ಈ ಸೇವೆ ಆರಂಭವಾಗುತ್ತಿರುವ ದೇಶದ ಮೊದಲ ನಗರವಾಗಿ ಬೆಂಗಳೂರು ಆಯ್ಕೆಯಾಗಿದೆ. ಬುಧವಾರ ಘೋಷಿಸಲಾದ ಈ ಸೇವೆಯಲ್ಲಿ ಆರಂಭಿಕ ಹಂತದಲ್ಲಿ HPCLನ ಹೊಸ 10 ಕೆ.ಜಿ. ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ‘HP Navya’ ಹಾಗೂ 5 ಕೆ.ಜಿ. ಲೋಹದ (Metal) ಎಲ್‌ಪಿಜಿ ಸಿಲಿಂಡರ್ ಲಭ್ಯವಾಗಲಿದೆ.

ಯಾರು ಬೇಕಾದರೂ ಆರ್ಡರ್​​ ಮಾಡಬಹುದು!

ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ (On-demand) ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ. ಈ ಸೇವೆಯ ವಿಶೇಷತೆ ಎಂದರೆ, ಈ ಸಿಲಿಂಡರ್ ಖರೀದಿಸಲು ಈಗಾಗಲೇ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ (Domestic LPG Connection) ಹೊಂದಿರಬೇಕೆಂಬ ಅವಶ್ಯಕತೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಣ್ಣ ಕುಟುಂಬಗಳಿಗೆ ಈ ಸೇವೆ ಹೆಚ್ಚು ಅನುಕೂಲಕರವಾಗಲಿದೆ. ಸಿಲಿಂಡರ್ ರಿಫಿಲ್ ಬೇಕಾದರೆ, ಹೊಸ ಸಿಲಿಂಡರ್ ವಿತರಿಸುವ ವೇಳೆ ಖಾಲಿ HPCL ಸಿಲಿಂಡರ್ ಅನ್ನು ಹಿಂತಿರುಗಿಸಿದರೆ ಸಾಕು.

ಇದನ್ನೂ ಓದಿ:  ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ

ಈ ಬಗ್ಗೆ ಮಾಹಿತಿ ನೀಡಿರುವ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, ಇನ್‌ಸ್ಟಾಮಾರ್ಟ್ ಕೇವಲ ದಿನಸಿ ವಸ್ತುಗಳ ವಿತರಣೆಗೆ ಸೀಮಿತವಾಗಿಲ್ಲ. HPCL ಜೊತೆಗಿನ ಈ ಸಹಭಾಗಿತ್ವದ ಮೂಲಕ ಅತ್ಯಗತ್ಯ ಗೃಹಬಳಕೆಯ ಸೇವೆಯಾದ LPG ವಿತರಣೆಯನ್ನೂ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ. ಗ್ರಾಹಕರು ನಿರೀಕ್ಷಿಸುವ ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡೇ ಈ ಸೇವೆ ಒದಗಿಸಲಾಗುತ್ತಿದೆ ಎಂದಿದ್ದಾರೆ.

HPCLನ ಅಧಿಕೃತ ವಿತರಕರ ಜಾಲದ ಮೂಲಕವೇ ಪೂರೈಕೆ

ಈ ಸೇವೆಯಡಿ ಬರುವ ಎಲ್ಲಾ ಆರ್ಡರ್‌ಗಳನ್ನು HPCLನ ಅಧಿಕೃತ ವಿತರಕರ ಜಾಲ (Authorised Distributor Network) ಮೂಲಕ ಪೂರೈಸಲಾಗುತ್ತದೆ. ಮೊದಲ ಬಾರಿಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ವಿತರಣೆಗೂ ಮುನ್ನ ಕಡ್ಡಾಯವಾಗಿ ಗುರುತಿನ ಪರಿಶೀಲನೆ (Identity Verification) ಪೂರ್ಣಗೊಳಿಸಬೇಕಾಗುತ್ತದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:01 pm, Wed, 15 July 26

Follow Us
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್