
ವಿಶಾಖಪಟ್ಟಣಂ, ಅಕ್ಟೋಬರ್ 14: ವಿಶ್ವದ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ದೊಡ್ಡ ಎಐ ಹಬ್ (Google AI Hub) ನಿರ್ಮಿಸಲು ಸಿದ್ಧವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೃಹತ್ ಡಾಟಾ ಸೆಂಟರ್ ಮತ್ತು ಎಐ ಬೇಸ್ ನಿರ್ಮಿಸುವುದಾಗಿ ಹೇಳಿದೆ. ಗೂಗಲ್ನ ಅತಿದೊಡ್ಡ ಎಐ ಹಬ್ ಇದಾಗಿರಲಿದೆ. ಅಮೆರಿಕ ಹೊರಗೆ ಯಾವುದೇ ಕಂಪನಿ ನಿರ್ಮಿಸಿದ ಅತಿದೊಡ್ಡ ಎಐ ಹಬ್ ಇದಾಗಿರಲಿದೆ. ಗೂಗಲ್ ಮುಂದಿನ ಐದು ವರ್ಷದಲ್ಲಿ ಈ ಸೌಕರ್ಯಗಳನ್ನು ನಿರ್ಮಿಸಲು 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿ ವೈಜಾಗ್ನಲ್ಲಿ ಗೂಗಲ್ನ ಉದ್ದೇಶಿತ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ಎಕ್ಸ್ನಲ್ಲಿ ಅವರೇ ಹಂಚಿಕೊಂಡಿದ್ದಾರೆ. ಈ ಎಐ ಹಬ್ನಲ್ಲಿ ಗೀಗಾವ್ಯಾಟ್ ಮಟ್ಟದ ಗಣಕ ಸಾಮರ್ಥ್ಯ, ಹೊಸ ಇಂಟರ್ನ್ಯಾಷನಲ್ ಸಬ್ಸೀ ಗೇಟ್ವೇ, ದೊಡ್ಡ ಮಟ್ಟದ ವಿದ್ಯುತ್ ಸೌಕರ್ಯ ಮೊದಲಾದವು ಇರಲಿವೆ. ಗೂಗಲ್ನ ವಿನೂತನ ತಂತ್ರಜ್ಞಾನವು ಭಾರತದಲ್ಲಿ ವಿವಿಧ ಉದ್ದಿಮೆಗಳು ಮತ್ತು ಬಳಕೆದಾರರಿಗೆ ಲಭ್ಯವಾಗಲಿವೆ. ಇದರಿಂದ ದೇಶಾದ್ಯಂತ ಎಐ ಇನ್ನೋವೇಶನ್ಗೆ ಪುಷ್ಟಿ ಸಿಗುತ್ತದೆ. ಅಭಿವೃದ್ಧಿಗೂ ಪುಷ್ಟಿ ಸಿಗುತ್ತದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಇದನ್ನೂ ಓದಿ: ಟೆಲಿಗ್ರಾಮ್ ಸಿಇಒ ಆದರೂ ಮೊಬೈಲ್ ಮುಟ್ಟಲ್ಲ, ಒಂದೂ ಚಟ ಹೊಂದಿಲ್ಲ; ಪಾವೆಲ್ ದುರೋವ್ ಕಥೆ ಇದು…
ಆಂಧ್ರದಲ್ಲಿ ಗೂಗಲ್ ಎಐ ಹಬ್ ನಿರ್ಮಾಣವಾಗುವುದನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಇದು ವಿಕಸಿತ ಭಾರತ ನಿರ್ಮಾಣ ಮಾಡುವ ತಮ್ಮ ಗುರಿಗೆ ಪೂರಕವಾಗಿದೆ. ಅತ್ಯಾಧುನಿಕ ಪರಿಕರಗಳಿಂದ ನಮ್ಮ ಜನರೆಲ್ಲರಿಗೂ ಎಐ ಫಲ ದೊರಕಲಿದೆ. ಇದರಿಂದ ಡಿಜಿಟಲ್ ಆರ್ಥಿಕತೆಗೆ ಸಹಾಯಕವಾಗುತ್ತದೆ. ಭಾರತವು ಜಾಗತಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಲು ಸಾಧ್ಯವಾಗುತ್ತದೆ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಎಕ್ಸ್ ಪೋಸ್ಟ್
Delighted by the launch of the Google AI Hub in the dynamic city of Visakhapatnam, Andhra Pradesh.
This multi-faceted investment that includes gigawatt-scale data center infrastructure, aligns with our vision to build a Viksit Bharat. It will be a powerful force in… https://t.co/lbjO3OSyMy
— Narendra Modi (@narendramodi) October 14, 2025
ಗೂಗಲ್ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ವಿಶಾಖಪಟ್ಟಣಂನಲ್ಲಿ ಜಂಟಿಯಾಗಿ ಸೇರಿ ಭಾರತದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಬ್ ನಿರ್ಮಿಸಲಿವೆ. ಇದರಲ್ಲಿ ಬೃಹತ್ ಡಾಟಾ ಸೆಂಟರ್ ಕೂಡ ಇರುತ್ತದೆ. ಗೂಗಲ್ನ ಹೊಸ ಅಂತಾರಾಷ್ಟ್ರೀಯ ಸಾಗರತಳದ ಕೇಬಲ್ಗಳನ್ನು ಬೆಂಬಲಿಸುವಂತಹ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಕೂಡ ನಿರ್ಮಾಣವಾಗಲಿದೆ. ಗೂಗಲ್ನ ಜಾಗತಿಕ ನೆಟ್ವರ್ಕ್ಗೆ ಇದು ನೆರವಾಗುತ್ತದೆ.
ಇದನ್ನೂ ಓದಿ: ಸಾಲಕ್ಕೆ ಹೆದರಿ ಕವಡೆಕಾಸಿಗೆ ಆ್ಯಪಲ್ ಷೇರು ಮಾರಿದ್ದ ವಾಯ್ನೆ; ಇವತ್ತು ಷೇರುಮೌಲ್ಯ 26 ಲಕ್ಷ ಕೋಟಿ ರೂ
ಗೂಗಲ್ ಕ್ಲೌಡ್ಸ್ ಸಿಇಒ ಥಾಮಸ್ ಕುರಿಯನ್ ಅವರು ಬೃಹತ್ ಎಐ ಸೌಕರ್ಯ, ಗೂಗಲ್ ಕ್ಲೌಂಡ್ ಸೌಲಭ್ಯ, ಸಬ್ಸೀ ಕೇಬಲ್ ಲ್ಯಾಂಡಿಂಗ್, ಗ್ಲೋಬಲ್ ಕನ್ಸೂಮರ್ ಸರ್ವಿಸಸ್ ಡಾಟಾ ಸ್ಟೋರೇಜ್ ಸ್ಥಾಪನೆಯ ಯೋಜನೆಗಳನ್ನು ಪ್ರಕಟಿಸಿದರು.
ನಿರ್ಮಲಾ ಸೀತಾರಾಮನ್ ಎಕ್ಸ್ ಪೋಸ್ಟ್
Minister @AshwiniVaishnaw does a timely selfie on a momentous occasion—launching of Google at #BharatAIShakti event held in Delhi. Saw the launch of 1 GW hyperscale data center campus at AI City Vizag. @Google shall invest upto ₹80,000 crores in 5 years in the project.
The… pic.twitter.com/x5M8oRcgjR— Nirmala Sitharaman (@nsitharaman) October 14, 2025
ದೆಹಲಿಯಲ್ಲಿ ನಡೆದ ಭಾರತ್ಎಐಶಕ್ತಿ ಕಾರ್ಯಕ್ರಮದಲ್ಲಿ ವೈಜಾಗ್ ಎಐ ಹಬ್ ಅನ್ನು ಅನಾವರಣಗೊಳಿಸಲಾಯಿತು. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಆಂಧ್ರ ಐಟಿ ಸಚಿವ ನರ ಲೋಕೇಶ್ ಅವರೂ ಈ ಸಂದರ್ಭದಲ್ಲಿ ಇದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Tue, 14 October 25