ನೀತಿ ಆಯೋಗದಿಂದ (NITI Aayog) ಶುಕ್ರವಾರ ನ್ಯಾಷನಲ್ ಡೇಟಾ ಅಂಡ್ ಅನಲಿಟಿಕ್ಸ್ ಪ್ಲಾಟ್ಫಾರ್ಮ್ (NDAP) ಅನಾವರಣ ಮಾಡಲಾಗಿದೆ. ಸರ್ಕಾರದ ಡೇಟಾ ಈ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರೆಯಬೇಕು ಎಂಬುದು ಗುರಿಯಾಗಿದೆ. ಸಂಪರ್ಕಿಸಬಹುದಾದ, ಪರಸ್ಪರ ಕಾರ್ಯ ನಿರ್ವಹಿಸಬಹುದಾದ, ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ವೇದಿಕೆಯಲ್ಲಿ ಡೇಟಾ ಲಭ್ಯವಿದೆ. ಈ ಪ್ಲಾಟ್ಫಾರ್ಮ್ ಅನ್ನು ನೀತಿ ಆಯೋಗದ ಉಪಾಧ್ಯಕ್ಷರಾದ ಸುಮನ್ ಬೆರಿ ಅನಾವರಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಈ ವೇಳೆ ಅಮಿತಾಬ್ ಕಾಂತ್ ಮಾತನಾಡಿ, ಡೇಟಾ ಮತ್ತು ಡಿಜಿಟಲ್ ತಂತ್ರಜ್ಞಾನಗಳ ವ್ಯಾಪಕತೆ ಸರ್ಕಾರಗಳ ದೈನಂದಿನ ಕಾರ್ಯಾಚರಣೆಗಳ ಮೇಲೆ ಅಗಾಧವಾದ ಪರಿಣಾಮ ಬೀರುವುದರ ಜತೆಗೆ ಆರ್ಥಿಕತೆಗಳು ಮತ್ತು ಸಮಾಜವನ್ನು ವೇಗವಾಗಿ ಪರಿವರ್ತಿಸುತ್ತಿದೆ ಎಂದರು. ಈ ಪ್ಲಾಟ್ಫಾರ್ಮ್ ಒಂದು ನಿರ್ಣಾಯಕ ಮೈಲುಗಲ್ಲು ಆಗಿದ್ದು, ಡೇಟಾ-ಚಾಲಿತ ಬಹಿರಂಗಪಡಿಸುವಿಕೆಯನ್ನು ಉತ್ತೇಜಿಸುವ ಮೂಲಕ ದೇಶದ ಪ್ರಗತಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕೊನೆಯ ಮೈಲುವರೆಗೆ ಸಂಪರ್ಕಿಸುವ ಡೇಟಾದ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ ಎಂದಿದ್ದಾರೆ.
NDAP ವಿವಿಧ ಸರ್ಕಾರಿ ಏಜೆನ್ಸಿಗಳಿಂದ ಮೂಲ ಡೇಟಾಸೆಟ್‌ಗಳನ್ನು ಒದಗಿಸಿ ಕೊಡುತ್ತದೆ. ಆ ನಂತರ ಅವುಗಳನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸುತ್ತದೆ ಹಾಗೂ ವಿಶ್ಲೇಷಣೆ ಮತ್ತು ವಿಶ್ಯುಯಲೈಸೇಷನ್ಗಾಗಿ ಸಾಧನಗಳನ್ನು ಒದಗಿಸುತ್ತದೆ ಎಂದು ನೀತಿ ಆಯೋಗದ ಬಿಡುಗಡೆ ಶುಕ್ರವಾರ ತಿಳಿಸಿದೆ. ಆಗಸ್ಟ್ 2021ರಲ್ಲಿ ಪ್ಲಾಟ್‌ಫಾರ್ಮ್‌ನ ಬೇಟಾ ಬಿಡುಗಡೆಯನ್ನು ಮಾಡಲಾಗಿತ್ತು. ಇದೀಗ NDAPಯ ಸಾರ್ವಜನಿಕ ಬಿಡುಗಡೆ ಮಾಡಲಾಗಿದೆ. ಇದು ಪರೀಕ್ಷೆ ಮತ್ತು ಪ್ರತಿಕ್ರಿಯೆಗಾಗಿ ಸೀಮಿತ ಸಂಖ್ಯೆಯ ಬಳಕೆದಾರರಿಗೆ ಪ್ರವೇಶವನ್ನು ಒದಗಿಸಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ಹೋಸ್ಟ್ ಮಾಡಲಾದ ಡೇಟಾಸೆಟ್‌ಗಳು ಸರ್ಕಾರ, ಶೈಕ್ಷಣಿಕ, ಪತ್ರಿಕೋದ್ಯಮ, ನಾಗರಿಕ ಸಮಾಜ ಮತ್ತು ಖಾಸಗಿ ವಲಯದ ಡೇಟಾ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು NDAP ಬಳಕೆ-ಪ್ರಕರಣ ಆಧಾರಿತ ವಿಧಾನವನ್ನು ಅನುಸರಿಸುತ್ತದೆ. ಎಲ್ಲ ಡೇಟಾಸೆಟ್‌ಗಳನ್ನು ಸಾಮಾನ್ಯ ಸ್ಕೀಮಾಗೆ ಪ್ರಮಾಣೀಕರಿಸಲಾಗಿದೆ. ಇದು ಡೇಟಾಸೆಟ್‌ಗಳನ್ನು ವಿಲೀನಗೊಳಿಸಲು ಮತ್ತು ಕ್ರಾಸ್-ವಿಭಾಗದ ವಿಶ್ಲೇಷಣೆ ಮಾಡಲು ಸುಲಭಗೊಳಿಸುತ್ತದೆ.
NDAP ಅನ್ನು http://ndap.niti.gov.inನಲ್ಲಿ ಸಂಪರ್ಕಿಸಬಹುದು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲ ಡೇಟಾಸೆಟ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮುಕ್ತವಾಗಿ ವಿಲೀನಗೊಳಿಸಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 12 ರಾಜ್ಯಗಳ ಒತ್ತಾಯದಿಂದ ಹೊಸ ಲಸಿಕೆ ಖರೀದಿ ನೀತಿ ಜಾರಿ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್