ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೊಡಾಫೋನ್ ಐಡಿಯಾವನ್ನು ಸರ್ಕಾರಿ ಸಂಸ್ಥೆಯಾದ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ನಲ್ಲಿ ವಿಲೀನ ಮಾಡುವುದಕ್ಕೆ ಸರ್ಕಾರ ವಿರೋಧಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದಾಗಿ ವೊಡಾಫೋನ್ ಐಡಿಯಾದಲ್ಲಿ ಇರುವ ತಮ್ಮ ಶೇ 27ರಷ್ಟು ಪಾಲನ್ನು ಯಾವುದೇ ಸಂಸ್ಥೆಗೆ- ಸಾರ್ವಜನಿಕ ವಲಯ/ಸರ್ಕಾರಿ/ದೇಶೀಯ ಹಣಕಾಸು ಸಂಸ್ಥೆಗೆ ಕೈ ಬದಲಾವಣೆ ಮಾಡಲು ಸಿದ್ಧ ಎಂದು ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಹೇಳಿದ ಒಂದು ವಾರದ ನಂತರ ಈ ವಿಚಾರ ಬಂದಿದೆ. ಸರ್ಕಾರದ ಮೂಲಗಳು ಹೇಳಿರುವಂತೆ, ಹಲವು ಮತ್ತು ಪ್ರಬಲ ತಾರ್ಕಿಕ ಕಾರಣಗಳಉ ಸೂಚಿಸುವ ಹಾಗೆ ಈ ಪ್ರಸ್ತಾವವನ್ನು ದೂಸರಾ ಆಲೋಚನೆ ಮಾಡದೆ ತಿರಸ್ಕರಿಸಬೇಕು. ಏಕೆಂದರೆ, ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ನಿರ್ವಹಣೆಯನ್ನೇ ಚೆನ್ನಾಗಿ ಮಾಡಿದ ಇತಿಹಾಸ ಇಲ್ಲ. ಇನ್ನು ಅದರ ಕಾರ್ಯ ನಿರ್ವಹಣೆಗೆ ಸರ್ಕಾರವೇ ಸಹಾಯ ಮಾಡುವಂಥ ಸ್ಥಿತಿ ಇದೆ ಎಂದು ಹೇಳುತ್ತದೆ.
ನಾವು ಇದಕ್ಕೆ ಅವಕಾಶ ಮಾಡಿಕೊಡುವುದಕ್ಕಾದರೂ ಹೇಗೆ ಸಾಧ್ಯ? ಇದು ಹೇಗೆ ಅಂದರೆ, ಲಾಭ ಬಂದರೆ ಖಾಸಗೀಕರಣ, ನಷ್ಟವು ರಾಷ್ಟ್ರೀಕರಣ?- ಹೀಗನ್ನುತ್ತಾರೆ ಹಿರಿಯ ಅಧಿಕಾರಿಗಳೊಬ್ಬರು. ಡಾಯಿಷ್ ಬ್ಯಾಂಕ್ ನೀಡಿದ ಸಲಹೆಯಂತೆ, ಬಿರ್ಲಾ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಸಮಸ್ಯೆಯನ್ನು ಪರಿಷ್ಕರಿಸಲು ಕಂಡುಬರುತ್ತಿರುವ ಮಾರ್ಗ ಅಂತಂದರೆ, ಸರ್ಕಾರವಿಂದ ವೊಡಾಫೋನ್ ಐಡಿಯಾದ ಸಾಲವನ್ನು ಈಕ್ವಿಟಿಯಾಗಿ ಮಾರ್ಪಡಿಸಬೇಕು. ಬಿಎಸ್ಎನ್ಎಲ್ ಜತೆಗೆ ವಿಲೀನ ಮಾಡಿ, ಲಾಭದ ಗುರಿ ಮತ್ತು ಸ್ಪಷ್ಟ ವಾಣಿಜ್ಯ ಲೆಕ್ಕಾಚಾರದೊಂದಿಗೆ ನೀಡಬೇಕು ಎಂದು ಬ್ಯಾಂಕ್ನಿಂದ ಈಚೆಗಿನ ನೋಟ್ನಲ್ಲಿ ತಿಳಿಸಲಾಗಿದೆ.
ಮಾರುಕಟ್ಟೆ ಮೌಲ್ಯದ ಆರು ಪಟ್ಟಿದೆ ಸಾಲ ಪ್ರಮಾಣ
ಡಾಯಿಷ್ ಬ್ಯಾಂಕ್ ಇನ್ನೂ ಮುಂದುವರಿದು, ಇದಾಗಬೇಕು, ವೊಡಾಫೋನ್ ಐಡಿಯಾದ ಷೇರುದಾರರ ಮೊತ್ತವು ಡೈಲ್ಯೂಟ್ ಆಗುತ್ತದೆ. ಏಕೆಂದರೆ ವೊಡಾಫೋನ್ ಐಡಿಯಾವು ಸರ್ಕಾರವು ನೀಡಬೇಕಾದ ಸಾಲದ ಮೊತ್ತವು ಈಗ ಕಂಪೆನಿಯ ಮಾರುಕಟ್ಟೆ ಬಂಡವಾಳ ಇದೆಯಲ್ಲಾ, ಅದರ ಆರು ಪಟ್ಟಿದೆ. ಇಂಥ ಪರಿಹಾರವನ್ನು ಷೇರುದಾರರು ಒಪ್ಪುವ ಸಾಧ್ಯತೆ ಇದೆ ಎಂದಿದೆ. ಅಂದ ಹಾಗೆ ವೊಡಾಫೋನ್ ಐಡಿಯಾವು ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್. ಮುಂದಕ್ಕೆ ಹಾಕಿದ ಸ್ಪೆಕ್ಟ್ರಮ್ ಪಾವತಿಯು ಸರ್ಕಾರಕ್ಕೆ 96,300 ಕೋಟಿ ರೂಪಾಯಿ ಬಾಕಿ ಇದೆ. 61000 ಕೋಟಿ ರೂಪಾಯಿ ಎಜಿಆರ್ ಬಾಕಿ ಇದೆ. ಕಂಪೆನಿಗೆ ಬಡ್ಡಿಯ ಹೊರೆಯು ಸಹ ಸಾವಿರಾರು ಕೋಟಿ ರೂಪಾಯಿ ಇದೆ. 23 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಇದೆ. ಕಳೆದ ಎರಡು ತ್ರೈಮಾಸಿಕದಲ್ಲಿ 7000 ಕೋಟಿ ರೂಪಾಯಿಗೂ ಹೆಚ್ಚಾಗಿದೆ.
69 ಸಾವಿರ ಕೋಟಿ ರೂಪಾಯಿ ಪುನಶ್ಚೇತನ ಪ್ಯಾಕೇಜ್
ಮತ್ತೊಂದು ಕಡೆ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗೆ 69 ಸಾವಿರ ಕೋಟಿ ರೂಪಾಯಿ ಪುನಶ್ಚೇತನ ಪ್ಯಾಕೇಜ್ ನೀಡಿತ್ತು. ಆದರೆ ಈಗಲೂ ಲಾಭ ಪಡೆಯುವುದಕ್ಕೆ ಈ ಎರಡು ಸಂಸ್ಥೆಗಳು ಲಾಭಕ್ಕೆ ಮರಳುವುದಕ್ಕೆ ಸಾಧ್ಯವಾಗಿಲ್ಲ. ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ನೀಡಿದ ಉತ್ತರದ ಪ್ರಕಾರ, ಬಿಎಸ್ಎನ್ಎಲ್ನ ಒಟ್ಟು ಸಾಲ FY21ರಲ್ಲಿ 21,156 ಕೋಟಿ ರೂಪಾಯಿ ಇದ್ದರೆ, ಎಂಟಿಎನ್ಎಲ್ ಸಾಲ 29,391 ಕೋಟಿ ರೂಪಾಯಿ ಇದೆ. ಇನ್ನು ನೀತಿ ಆಯೋಗ ಕೂಡ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು, ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದೆ. ಇಂಥ ಕ್ರಮದಿಂದ ವೊಡಾಫೋನ್ ಐಡಿಯಾದ ಮೌಲ್ಯ ಕೊಚ್ಚಿಹೋಗುತ್ತದೆ ಎಂಬ ಅಭಿಪ್ರಾಯ ಪಟ್ಟಿದೆ. ಆದ್ದರಿಂದ ಈ ವ್ಯವಹಾರದಿಂದ ಬಿಎಸ್ಎನ್ಎಲ್ ಎಂಟಿಎನ್ಎಲ್ಗೆ ಯಾವ ಲಾಭವೂ ಇಲ್ಲ ಎಂದಿದೆ.
ಕೆಲವು ಅಧಿಕಾರಿಗಳು ಹೇಳುವಂತೆ, ಕೆಲಸದ ವೈಖರಿಯಲ್ಲೇ ಎರಡೂ ಸಂಸ್ಥೆಗಳ ಮಧ್ಯೆ ವ್ಯತ್ಯಾಸ ಇದೆ. ಆ ಕಾರಣಕ್ಕೆ ಈ ವಿಲೀನವು ವಿಫಲವಾಗಲಿದೆ. ಖಾಸಗಿ ಸಂಸ್ಥೆಗಳು ಆಕ್ರಮಣಕಾರಿ ಧೋರಣೆ ಹೊಂದಿರುತ್ತವೆ. ಆದರೆ ಇದು ಬಿಎಸ್ಎನ್ಎಲ್/ಎಂಟಿಎನ್ಎಲ್ನಲ್ಲಿ ಇಲ್ಲ. ವಯಸ್ಸಿನ ವಿಚಾರ, ಕಾರ್ಮಿಕರು- ಒಕ್ಕೂಟದ ಸಮಸ್ಯೆಗಳು ಸಹ ಇವೆ. ಇನ್ನು ವೊಡಾಫೋನ್ ಹಾಗೂ ಐಡಿಯಾಗೆ ಅವೆರಡರ ವಿಲೀನ ಸರಿಯಾಗಿ ನಿಭಾಯಿಸಲು ಆಗಿಲ್ಲ. ಆ ಕಾರಣಕ್ಕೆ ಕುಸಿತ ಆಗಿದೆ. ಮತ್ತೊಬ್ಬ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿ ಮಾತನಾಡಿ, ಈ ವ್ಯವಹಾರ ಆಗುವುದಕ್ಕೆ ಸಿಕ್ಕಾಪಟ್ಟೆ ಕಾನೂನು ಅಡೆತಡೆಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vodafone Idea: ಬಂದ್ ಆಗಲಿದೆಯಾ ವೊಡಾಫೋನ್-ಐಡಿಯಾ?
(Government Opposing Vodafone Idea Merger With BSNL MTNL Here Is The Reason Know Why)