Updated on: Aug 23, 2021 | 8:16 PM
ಭಾರತದ ಸ್ಪರ್ಧಾ ಆಯೋಗವು (CCI) ಆಗಸ್ಟ್ 23ರಂದು ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL)ಗೆ 200 ಕೋಟಿ ರೂಪಾಯಿ ದಂಡ ವಿಧಿಸಿದೆ. ಕಾರುಗಳ ರಿಯಾಯಿತಿಗೆ ಸಂಬಂಧಿಸಿದಂತೆ ಡೀಲರ್ಗಳನ್ನು ಹೀಗೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು ಎಂಬ ಸ್ಪರ್ಧಾ- ವಿರೋಧಿ ನೀತಿಗಳನ್ನು ಅನುಸರಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಆ ಪ್ರಕಾರ CCI ಹೇಳಿಕೆ ಹೀಗಿದೆ: "ರಿಯಾಯಿತಿ ಅನುಷ್ಠಾನಗೊಳಿಸುವ ಮೂಲಕ ಪ್ರಯಾಣಿಕರ ವಾಹನ ವಿಭಾಗದಲ್ಲಿ ಮರುಮಾರಾಟ ಬೆಲೆ ನಿರ್ವಹಣೆಯ (RPM) ಸ್ಪರ್ಧಾತ್ಮಕ-ವಿರೋಧಿ ನಡವಳಿಕೆಯಲ್ಲಿ ತೊಡಗಿದ್ದಕ್ಕಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ವಿರುದ್ಧ ಸ್ಪರ್ಧಾ ಆಯೋಗವು ಅಂತಿಮ ಆದೇಶವನ್ನು ನೀಡಿದೆ. ಎಂಎಸ್‌ಐಎಲ್‌ಗೆ 200 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ," ಎಂದಿದೆ. ಇನ್ನೂ ಮುಂದುವರಿದು: "ಎಂಎಸ್ಐಎಲ್ನಿಂದ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ನೀಡದಂತೆ ಡೀಲರ್ಗಳನ್ನು ತಡೆದಿದ್ದು ಸಿಸಿಐ ಗಮನಕ್ಕೆ ಬಂದಿದೆ," ಎಂದಿದೆ.
ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಂಎಸ್‌ಐಎಲ್ ತನ್ನ ಡೀಲರ್‌ಗಳಿಗಾಗಿ 'ರಿಯಾಯಿತಿ ನಿಯಂತ್ರಣ ನೀತಿ'ಯನ್ನು ಹೊಂದಿದ್ದು, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಗಳು, ಉಚಿತ ಕೊಡುಗೆಗಳು ಇತ್ಯಾದಿಗಳನ್ನು ಗ್ರಾಹಕರಿಗೆ ನೀಡದಂತೆ ಡೀಲರ್ಗಳನ್ನು ತಡೆಯಲಾಗಿದೆ. ಒಂದು ವೇಳೆ ಡೀಲರ್ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲು ಬಯಸಿದರೆ, MSIL ಪೂರ್ವಾನುಮತಿ ಕಡ್ಡಾಯವಾಗಿತ್ತು. ರಿಯಾಯಿತಿ ನಿಯಂತ್ರಣ ನೀತಿಯನ್ನು ಉಲ್ಲಂಘಿಸುವ ಯಾವುದೇ ಡೀಲರ್‌ಗೆ ದಂಡ ವಿಧಿಸುವ ಬೆದರಿಕೆ ಹಾಕಲಾಗುತ್ತಿತ್ತು. ಡೀಲರ್‌ಶಿಪ್ ಮೇಲೆ ಮಾತ್ರವಲ್ಲ, ಅದರ ನೇರ ಮಾರಾಟ ಕಾರ್ಯನಿರ್ವಾಹಕ (ಡೈರೆಕ್ಟ್ ಸೇಲ್ಸ್ ಎಕ್ಸ್ಕ್ಯೂಟಿವ್), ಪ್ರಾದೇಶಿಕ ಮ್ಯಾನೇಜರ್, ಶೋರೂಂ ಮ್ಯಾನೇಜರ್, ಟೀಮ್ ಲೀಡ್ ಮತ್ತಿತರರಿಗೆ ಕೂಡ ದಂಡ ವಿಧಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು ಎಂದು ತಿಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಎಂಎಸ್ಎಗಳ ನೇಮಕ
ಸ್ಪಷ್ಟೀಕರಣ ಕೇಳಲಾಗುತ್ತಿತ್ತು
ಪೂರೈಕೆ ನಿಲ್ಲಿಸುವುದು, ದಂಡ ಇತ್ಯಾದಿ
ಪ್ರಾತಿನಿಧಿಕ ಚಿತ್ರ