AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unlisted Shares: ಅನ್​ಲಿಸ್ಟೆಡ್​ ಷೇರುಗಳ ಖರೀದಿ, ವಹಿವಾಟು ಹೇಗೆ? ಇಲ್ಲಿದೆ ಅಗತ್ಯ ಮಾಹಿತಿ

TV9 Web
| Updated By: Srinivas Mata

Updated on: Aug 23, 2021 | 6:44 PM

ಝೊಮ್ಯಾಟೋದ ಸ್ಟಾಕ್ ಐಪಿಒ ಲಿಸ್ಟಿಂಗ್ ಶೇ 52ರಷ್ಟು ಪ್ರೀಮಿಯಂನೊಂದಿಗೆ ಆಯಿತು. ಈ ಐಪಿಒ ಆಫರ್​ ಮಾಡಿದ್ದಕ್ಕಿಂಗ 38 ಪಟ್ಟು ಹೆಚ್ಚು ಸಬ್‌ಸ್ಕ್ರೈಬ್ ಆಯಿತು. ಅನೇಕ ಐಪಿಒಗಳಲ್ಲಿ ಹೂಡಿಕೆದಾರರು ಒಂದೊಳ್ಳೆ ಲಾಭವನ್ನೇ ಪಡೆಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕಂಪೆನಿಯು ಕೆಲವು ಹೊಸ-ತಲೆಮಾರಿನ ಡಿಜಿಟಲ್ ವ್ಯವಹಾರದಲ್ಲಿದ್ದಾಗ ಒಳ್ಳೆ ಲಾಭವನ್ನು ಸುಲಭವಾಗಿ ನಿರೀಕ್ಷಿಸಬಹುದು ಆದರೆ ಷೇರು ಹಂಚಿಕೆ ಆಗುವುದು ಮಾತ್ರ ಸವಾಲಿನ ಸಂಗತಿ. ಏಕೆಂದರೆ ಐಪಿಒ ಇಶ್ಯೂಗಿಂತ ಹಲವು ಬಾರಿ ಹೆಚ್ಚಿನ ಚಂದಾದಾರಿಕೆ ಪಡೆಯುತ್ತದೆ. ಕೆಲವು ಹೂಡಿಕೆದಾರರು ಐಪಿಒಗೆ ಮುಂಚಿತವಾಗಿಯೇ ಷೇರು ಖರೀದಿ ಮಾಡುವುದನ್ನು ಬಯಸುತ್ತಾರೆ. ಈಗಾಗಲೇ ಅನೇಕ ಕಂಪೆನಿಗಳ ಹೆಸರು ಸಂಭಾವ್ಯ ಐಪಿಒ ವಿತರಣೆಗಾಗಿ ಹರಿದಾಡುತ್ತಿದೆ. ಮತ್ತು ಇವುಗಳಲ್ಲಿ ಕೆಲವು ಐಪಿಒಗೆ ಸಿದ್ಧತೆಯ ಆರಂಭಿಕ ಹಂತಗಳಲ್ಲಿವೆ. ಆದರೆ ಈ ಷೇರುಗಳನ್ನು ಅನ್​ಲಿಸ್ಟೆಡ್ ಆಗಿರುವಾಗಲೇ ಖರೀದಿಸಿ, ಬೇಗ ಹಣ ಸಂಪಾದಿಸುವುದು ಅಂದುಕೊಂಡಷ್ಟು ಸುಲಭವಲ್ಲ.

1 / 8
ಅನ್​ಲಿಸ್ಟೆಡ್​ ಷೇರುಗಳನ್ನು ಖರೀದಿಸುವುದು
ಕಂಪೆನಿಯು ತನ್ನ IPO ಗಾಗಿ ಫೈಲ್ ಮಾಡಿದಾಗ, ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಉದ್ಯೋಗಿಗಳು ಈಗಾಗಲೇ ತಾವು ಹೊಂದಿರುವ ಷೇರುಗಳ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ ಏರುತ್ತಿರುವುದನ್ನು ನೋಡುತ್ತಾರೆ. ಉದಾಹರಣೆಗೆ, ಪೇಟಿಎಂನ ಮಾತೃ ಕಂಪೆನಿಯಾದ ಒನ್ 97 ಕಮ್ಯುನಿಕೇಷನ್ಸ್. ಅದರ ಷೇರಿನ ಬೆಲೆಯು ರೂ. 3,000ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಒಂದು ವರ್ಷದ ಹಿಂದೆ, ಇದು ಒಂದು ಷೇರಿಗೆ 1,500 ರೂಪಾಯಿಗೆ ಕೋಟ್​ ಆಗುತ್ತಿತ್ತು. ಷೇರು ಮಾರುಕಟ್ಟೆಯಲ್ಲಿನ ಉತ್ಸಾಹ ಮತ್ತು ಮುಂದಿನ ದಿನಗಳಲ್ಲಿ ಸಂಭವನೀಯ ಲಿಸ್ಟಿಂಗ್ ಕಾರಣಕ್ಕೆ ಕಂಪೆನಿಯ ಷೇರುಗಳಿಗೆ ಬೇಡಿಕೆಯನ್ನು ಹುಟ್ಟುಹಾಕಿದೆ. ಕಂಪೆನಿಯ ಐಪಿಒ ಬಿಡುಗಡೆ ಬಗ್ಗೆ ವರದಿಗಳು ಬರಲಾರಂಭಿಸಿದ ಮೇಲೆ ಕೇರ್ ಹೆಲ್ತ್ ಇನ್ಷೂರೆನ್ಸ್ ಷೇರುಗಳ ಬೆಲೆ ರೂ.230ಕ್ಕಿಂತ ಹೆಚ್ಚು ಕೋಟಿಂಗ್ ಆರಂಭಿಸಿತು.

ಅನ್​ಲಿಸ್ಟೆಡ್​ ಷೇರುಗಳನ್ನು ಖರೀದಿಸುವುದು ಕಂಪೆನಿಯು ತನ್ನ IPO ಗಾಗಿ ಫೈಲ್ ಮಾಡಿದಾಗ, ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಉದ್ಯೋಗಿಗಳು ಈಗಾಗಲೇ ತಾವು ಹೊಂದಿರುವ ಷೇರುಗಳ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ ಏರುತ್ತಿರುವುದನ್ನು ನೋಡುತ್ತಾರೆ. ಉದಾಹರಣೆಗೆ, ಪೇಟಿಎಂನ ಮಾತೃ ಕಂಪೆನಿಯಾದ ಒನ್ 97 ಕಮ್ಯುನಿಕೇಷನ್ಸ್. ಅದರ ಷೇರಿನ ಬೆಲೆಯು ರೂ. 3,000ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಒಂದು ವರ್ಷದ ಹಿಂದೆ, ಇದು ಒಂದು ಷೇರಿಗೆ 1,500 ರೂಪಾಯಿಗೆ ಕೋಟ್​ ಆಗುತ್ತಿತ್ತು. ಷೇರು ಮಾರುಕಟ್ಟೆಯಲ್ಲಿನ ಉತ್ಸಾಹ ಮತ್ತು ಮುಂದಿನ ದಿನಗಳಲ್ಲಿ ಸಂಭವನೀಯ ಲಿಸ್ಟಿಂಗ್ ಕಾರಣಕ್ಕೆ ಕಂಪೆನಿಯ ಷೇರುಗಳಿಗೆ ಬೇಡಿಕೆಯನ್ನು ಹುಟ್ಟುಹಾಕಿದೆ. ಕಂಪೆನಿಯ ಐಪಿಒ ಬಿಡುಗಡೆ ಬಗ್ಗೆ ವರದಿಗಳು ಬರಲಾರಂಭಿಸಿದ ಮೇಲೆ ಕೇರ್ ಹೆಲ್ತ್ ಇನ್ಷೂರೆನ್ಸ್ ಷೇರುಗಳ ಬೆಲೆ ರೂ.230ಕ್ಕಿಂತ ಹೆಚ್ಚು ಕೋಟಿಂಗ್ ಆರಂಭಿಸಿತು.

2 / 8
ವಹಿವಾಟು ಹೇಗೆ ನಡೆಯುತ್ತದೆ?

ಈ ಷೇರುಗಳನ್ನು ಸಾರ್ವಜನಿಕ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದ ಕಾರಣದಿಂದಾಗಿ 'ಮಾರುಕಟ್ಟೆ ಬೆಲೆ'ಯಲ್ಲಿ ಸಿಗಲ್ಲ. ಬದಲಾಗಿ, ಸೂಚಕ ಮಾರುಕಟ್ಟೆ ಬೆಲೆ ಅಥವಾ ಮಾರಾಟದ ಕೋಟ್ ಪಡೆಯುತ್ತೀರಿ. ಕೆಲವು ಅಸೆಟ್ ಮ್ಯಾನೇಜ್​ಮೆಂಟ್ ಸಂಸ್ಥೆಗಳು ಹೂಡಿಕೆದಾರರಿಗೆ ಅನ್​ಲಿಸ್ಟೆಡ್​ ಷೇರುಗಳನ್ನು ಖರೀದಿಸಲು ಸಹಾಯ ಮಾಡುತ್ತವೆ. ಅನಲಾಹ್ ಕ್ಯಾಪಿಟಲ್ ಮತ್ತು ಅನ್‌ಲಿಸ್ಟೆಡ್‌ಕಾರ್ಟ್‌ನಂತಹ ಪೋರ್ಟಲ್‌ಗಳು ನಿಮಗಾಗಿ ಅಂತಹ ಷೇರುಗಳನ್ನು ವ್ಯವಸ್ಥೆ ಮಾಡುತ್ತವೆ. "ನೀವು ದೊಡ್ಡ ಹೂಡಿಕೆದಾರರಾಗಿದ್ದರೆ, ಷೇರುಗಳನ್ನು ನಿಗದಿತ ಶುಲ್ಕಕ್ಕೆ ವ್ಯವಸ್ಥೆ ಮಾಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮಾರಾಟದ ಕೋಟಿಂಗ್ ಬ್ರೋಕರ್‌ನ ಸಂಭಾವನೆಯನ್ನು ಸಹ ಒಳಗೊಂಡಿರುತ್ತದೆ,” ಎಂದು ಫ್ಯಾಮಿಲಿ ಫಸ್ಟ್ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಸ್ಥಾಪಕ ರೂಪೇಶ್ ನಗ್ಡಾ ಹೇಳುತ್ತಾರೆ. ಅಂದಹಾಗೆ ಡಿಮ್ಯಾಟ್ ಖಾತೆ ಕಡ್ಡಾಯವಾಗಿ ಬೇಕು.

3 / 8
ಸಾಂದರ್ಭಿಕ ಚಿತ್ರ

Rs 1 Lakh Investment In This Multibagger Stock Become Rs 8 Crore

4 / 8
ಇಷ್ಟವಿಲ್ಲದ ಷೇರುಗಳಲ್ಲಿ ವಹಿವಾಟು ಮಾಡುವುದು ಅಪಾಯಕಾರಿ?

ನೀವು ಇಲ್ಲಿ ತೆಗೆದುಕೊಳ್ಳುವ ದೊಡ್ಡ ಅಪಾಯವೆಂದರೆ, ಲಿಕ್ವಿಡಿಟಿ. "ಷೇರುಗಳಲ್ಲಿನ ಹೂಡಿಕೆಯಲ್ಲಿ ವ್ಯಾಪಾರದ ಅಪಾಯಗಳು ಇವೆ. ಲಿಸ್ಟೆಡ್ ಷೇರನ್ನು ಖರೀದಿಸಿದಾಗ ಮತ್ತು ವ್ಯವಹಾರದ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾದರೆ ಅದನ್ನು ಶೀಘ್ರವಾಗಿ ವಿನಿಮಯದಲ್ಲಿ ಮಾರಾಟ ಮಾಡಬಹುದು. ಆದರೆ ಲಿಸ್ಟಿಂಗ್ ಮಾಡದ ಷೇರುಗಳ ಸಂದರ್ಭದಲ್ಲಿ, ಬೆಲೆ ಪತ್ತೆ ಮಾಡುವುದೇ ಒಂದು ಸಮಸ್ಯೆಯಾಗಿದೆ ಮತ್ತು ಲಿಕ್ವಿಡಿಟಿ ಒಂದು ದೊಡ್ಡ ಸಮಸ್ಯೆಯಾಗಿದೆ," ಎಂದು ಗುರುತು ಹೇಳಿಕೊಳ್ಳುವುದಕ್ಕೆ ಬಯಸದ ಫಂಡ್​ ಮ್ಯಾನೇಜರ್​ವೊಬ್ಬರು ಹೇಳುತ್ತಾರೆ. ಕಂಪೆನಿಯು ಲಿಸ್ಟಿಂಗ್ ಆಗದಿದ್ದಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಮತ್ತು ಬೆಲೆಗಳು ಸಹ ಇಳಿಕೆ ಕಾಣುವಂತಾಗಬಹುದು. ಎಚ್‌ಡಿಬಿ ಹಣಕಾಸು ಸೇವೆಗಳ ಷೇರುಗಳನ್ನು 2019ರಲ್ಲಿ ಅನೇಕ ಹೂಡಿಕೆದಾರರಿಂದ ಸಂಗ್ರಹಿಸಲಾಯಿತು, ಶೀಘ್ರದಲ್ಲೇ ಐಪಿಒ ಆಗಬಹುದು ಎಂಬ ನಿರೀಕ್ಷಿಸಿ ಹಾಗೆ ಮಾಡಲಾಯಿತು. ಆದರೂ ಇನ್ನೂ ಕಂಪೆನಿಯಿಂದ ಐಪಿಒ ಘೋಷಣೆ ಮಾಡಿಲ್ಲ. ಐಪಿಒ ವಿಳಂಬವಾಗುವ ಸಾಧ್ಯತೆ ಅಂಶವು ಸಹ ಮುಖ್ಯವಾಗಿದೆ.

5 / 8
ಮಾಹಿತಿ ಕೊರತೆ

ನೀವು ವ್ಯಾಪಾರ, ಉದ್ಯಮದ ಬದಲಾವಣೆಗಳನ್ನು, ವ್ಯವಹಾರದ ಲಾಭದಾಯಕತೆ ಮತ್ತು ಭವಿಷ್ಯದ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಅಥವಾ ವಿಶ್ವಾಸಾರ್ಹ ಸಲಹೆಗಾರರ ​​ಮೂಲಕ ನ್ಯಾಯಯುತ ಮೌಲ್ಯಮಾಪನಕ್ಕೆ ಬರಲು ಸಾಧ್ಯವಾಗದಿದ್ದರೆ, ತೊಂದರೆಗೆ ಸಿಲುಕಬಹುದು. "ಕಂಪೆನಿಯ ಗಳಿಕೆಯನ್ನು ಪರಿಶೀಲಿಸಿ ಮತ್ತು ಹೆಚ್ಚು ಪಾವತಿಸಬೇಡಿ. ಭವಿಷ್ಯದ ಬೆಳವಣಿಗೆ ನಿಮಗೆ ಪ್ರತಿಫಲ ನೀಡಬೇಕು. ರಿಸ್ಕ್-ರಿವಾರ್ಡ್ ನಿಮ್ಮ ಪರವಾಗಿ ಇಲ್ಲದಿರುವುದನ್ನು ಖರೀದಿಸುವುದನ್ನು ತಪ್ಪಿಸಿ," ಎಂದು ಸಲಹೆಗಾರರು ಅಭಿಪ್ರಾಯ ಪಡುತ್ತಾರೆ. ಸ್ಟಾಕ್‌ಗಾಗಿ ಅತಿಯಾಗಿ ಪಾವತಿಸುವುದರಿಂದ ನಿಮ್ಮ ರಿಟರ್ನ್ಸ್​ಗೆ ಹಾನಿ ಉಂಟಾಗಬಹುದು. ಕೆಲವು ಹೂಡಿಕೆದಾರರು ಯುಪಿಐ ಎಎಮ್‌ಸಿಯ ಷೇರುಗಳನ್ನು ಐಪಿಒಗಿಂತ ಹೆಚ್ಚಿನ ಮೌಲ್ಯಗಳಲ್ಲಿ ಖರೀದಿಸಿದ್ದರು ಎಂದು ತಜ್ಞರು ಗಮನ ಸೆಳೆದಿದ್ದರು. ಆದರೆ IPO ಬೆಲೆ (ರೂ 554) IPO ಗಿಂತ ಮುಂದಿದ್ದ ಬೆಲೆಗಿಂತ ಕಡಿಮೆಯಿತ್ತು. ಅಂತಹ ಅಪಾಯಗಳು ಮತ್ತು ವಹಿವಾಟಿನ ಟಿಕೆಟ್ ಗಾತ್ರವನ್ನು ಗಮನಿಸಿದರೆ (ಅನ್​ಲಿಸ್ಟೆಡ್​ ಷೇರು ಕನಿಷ್ಠ ರೂ. 5 ಲಕ್ಷದ ವಹಿವಾಟುಗಳು ಬೇಕಾಗುತ್ತವೆ), ಚಿಲ್ಲರೆ ಹೂಡಿಕೆದಾರರು ಅದನ್ನು ಎಷ್ಟೇ ಪ್ರಲೋಭನೆ ಒಡ್ಡಿದರೂ ಖರೀದಿಸುವುದನ್ನು ತಪ್ಪಿಸಬೇಕು.

6 / 8
ನೀವು ಖರೀದಿಸಬೇಕೇ?

ಅನ್​ಲಿಸ್ಟೆಡ್​ ಷೇರುಗಳಲ್ಲಿ ಹೂಡಿಕೆ ಮಾಡಲು ಅಗತ್ಯವಾದ ಅಪಾಯ ಅರಿವಿದ್ದೂ ಹಾಗೂ ಅಷ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸಿದ್ಧರಿದ್ದರೂ ನಿಮ್ಮ ಈಕ್ವಿಟಿ ಪೋರ್ಟ್​ ಫೋಲಿಯೋದ ಶೆಕಡಾ 10ಕ್ಕಿಂತ ಹೆಚ್ಚಿನದನ್ನು ಅನ್​ಲಿಸ್ಟೆಡ್​ ಷೇರುಗಳಿಗೆ ಹಾಕಬೇಡಿ. "ನಿಮ್ಮ ಶೇ 80 ರಿಂದ 90ರಷ್ಟು ಈಕ್ವಿಟಿ ಹೂಡಿಕೆಗಳನ್ನು ಲಿಕ್ವಿಡಿಟಿ ಸಾಧನಗಳಲ್ಲಿ ಹೊಂದಿರಬೇಕು ಅನ್​ಲಿಸ್ಟೆಡ್​ ಷೇರುಗಳು, ಸಾಮಾನ್ಯ ಈಕ್ವಿಟಿ ಸ್ವತ್ತಿನ ಅಪಾಯವನ್ನು ಹೊಂದುವುದರ ಹೊರತಾಗಿ, ಅವುಗಳ ಐಪಿಒಗಳು ಯಾವಾಗ ಬರುತ್ತವೆ ಎಂಬುದರ ಬಗ್ಗೆಯೂ ಖಚಿತವಾಗಿರುವುದಿಲ್ಲ. ಜೊತೆಗೆ, ಅವರು ಲಿಕ್ವಿಡಿಟಿಯಲ್ಲಿ ಕಡಿಮೆ ಸ್ಕೋರ್ ಮಾಡುತ್ತಾರೆ, ಎನ್ನುತ್ತಾರೆ ವೆಲ್ತ್ ಅಡ್ವೈಸರ್ಸ್‌ನ ಯೋಜನಾಧಿಕಾರಿ ಮತ್ತು ಮುಖ್ಯ ಹಣಕಾಸು ಯೋಜಕರು.

7 / 8
ಸೆಬಿ (ಸಾಂದರ್ಭಿಕ ಚಿತ್ರ)

SEBI New Margin Rules Introduced From September 1st 2021 Traders Angry Against Regulator

8 / 8
Follow us
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?