ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎಂಎಸ್‌ಐಎಲ್ ತನ್ನ ಡೀಲರ್‌ಗಳಿಗಾಗಿ 'ರಿಯಾಯಿತಿ ನಿಯಂತ್ರಣ ನೀತಿ'ಯನ್ನು ಹೊಂದಿದ್ದು, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ರಿಯಾಯಿತಿಗಳು, ಉಚಿತ ಕೊಡುಗೆಗಳು ಇತ್ಯಾದಿಗಳನ್ನು ಗ್ರಾಹಕರಿಗೆ ನೀಡದಂತೆ ಡೀಲರ್‌ಗಳನ್ನು ತಡೆಯಲಾಗಿದೆ. ಒಂದು ವೇಳೆ ಡೀಲರ್ ಹೆಚ್ಚುವರಿ ರಿಯಾಯಿತಿಗಳನ್ನು ನೀಡಲು ಬಯಸಿದರೆ, MSIL ಪೂರ್ವಾನುಮತಿ ಕಡ್ಡಾಯವಾಗಿತ್ತು. ರಿಯಾಯಿತಿ ನಿಯಂತ್ರಣ ನೀತಿಯನ್ನು ಉಲ್ಲಂಘಿಸುವ ಯಾವುದೇ ಡೀಲರ್‌ಗೆ ದಂಡ ವಿಧಿಸುವ ಬೆದರಿಕೆ ಹಾಕಲಾಗುತ್ತಿತ್ತು. ಡೀಲರ್‌ಶಿಪ್ ಮೇಲೆ ಮಾತ್ರವಲ್ಲ, ಅದರ ನೇರ ಮಾರಾಟ ಕಾರ್ಯನಿರ್ವಾಹಕ (ಡೈರೆಕ್ಟ್ ಸೇಲ್ಸ್ ಎಕ್ಸ್ಕ್ಯೂಟಿವ್), ಪ್ರಾದೇಶಿಕ ಮ್ಯಾನೇಜರ್, ಶೋರೂಂ ಮ್ಯಾನೇಜರ್, ಟೀಮ್ ಲೀಡ್ ಮತ್ತಿತರರಿಗೆ ಕೂಡ ದಂಡ ವಿಧಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು ಎಂದು ತಿಳಿಸಲಾಗಿದೆ.