ಟೀಮ್ ಇಂಡಿಯಾಗೆ ವಿದಾಯ ಹೇಳಿದ ಮಾಜಿ RCB ಆಟಗಾರ
Milind Kumar: ಐಪಿಎಲ್ನಲ್ಲಿ ದೆಹಲಿ ಮೂಲದ ಬ್ಯಾಟ್ಸ್ಮನ್ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
Updated on: Aug 24, 2021 | 6:45 PM

ಟೀಮ್ ಇಂಡಿಯಾ ಅಂಡರ್-19 ತಂಡವನ್ನು ಪ್ರತಿನಿಧಿಸಿದ ಭಾರತೀಯ ಆಟಗಾರರ ವಲಸೆ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಂದ್, ಸ್ಮಿತ್ ಪಟೇಲ್, ಮನನ್ ಶರ್ಮಾ, ಹರ್ಮೀತ್ ಸಿಂಗ್ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲದೆ ಈ ಆಟಗಾರರು ಅಮೆರಿಕ ಕ್ರಿಕೆಟ್ ಲೀಗ್ನತ್ತ ವಲಸೆ ಹೋಗಿದ್ದರು.

ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಮಿಲಿಂದ್ ಕುಮಾರ್. ಹೌದು, ಅಂಡರ್-19 ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಮಿಲಿಂದ್ ಇದೀಗ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಅಮೆರಿಕ ಪರ ಭವಿಷ್ಯದಲ್ಲಿ ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಿಲಿಂದ್ ಕುಮಾರ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. 2019 ರಲ್ಲಿ RCB ತಂಡದಲ್ಲಿ ಕಾಣಿಸಿಕೊಂಡಿದ್ದ ಮಿಲಿಂದ್ಗೆ ಆಡುವ ಅವಕಾಶ ದೊರೆತಿರಲಿಲ್ಲ.

ಇದಾಗ್ಯೂ ಕಳೆದ ಬಾರಿ ಕೂಡ ಐಪಿಎಲ್ನಲ್ಲಿ ದೆಹಲಿ ಮೂಲದ ಬ್ಯಾಟ್ಸ್ಮನ್ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಭಾರತೀಯ ಕ್ರಿಕೆಟ್ನಿಂದ ಹೊರಗುಳಿದಿರುವ ಮಿಲಿಂದ್, ಅಮೆರಿಕದ ಮೈನರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಫಿಲಡೆಲ್ಫಿಯನ್ಸ್ ಪರ ಆಡಲಿದ್ದಾರೆ. ಈಗಾಗಲೇ ಈ ಲೀಗ್‌ನಲ್ಲಿ ಮನನ್ ಶರ್ಮಾ ಮತ್ತು ಉನ್ಮುಕ್ತ್ ಚಂದ್ ಕೂಡ ಆಡುತ್ತಿದ್ದಾರೆ. ಇದೀಗ ಮಿಲಿಂದ್ ಸಹ ಅದೇ ಲೀಗ್ ಅನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ನಿವೃತ್ತಿ ಬಗ್ಗೆ ಮಾತನಾಡಿರುವ ಮಿಲಿಂದ್, ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಇಶಾಂತ್ ಶರ್ಮಾ ಅವರಂತಹ ಶ್ರೇಷ್ಠ ಕ್ರಿಕೆಟಿಗರೊಂದಿಗೆ ಆಡುವ ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಇದೀಗ ಒಂದೊಳ್ಳೆ ಅವಕಾಶ ಸಿಕ್ಕಿದೆ. ಹೀಗಾಗಿ ವಿದೇಶಿ ಲೀಗ್‌ನಲ್ಲಿ ಭವಿಷ್ಯ ರೂಪಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

TV9 Kannada
Read More




