How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?

| Updated By: Srinivas Mata

Updated on: Aug 23, 2021 | 11:30 AM

ಒಂದು ವೇಳೆ ಪಿಪಿಎಫ್ ಖಾತೆ ನಿಷ್ಕ್ರಿಯವಾಗಿದ್ದಲ್ಲಿ ಅದನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದರ ಬಗ್ಗೆ ಹಂತ ಹಂತವಾದ ವಿವರಣೆ ಇಲ್ಲಿದೆ.

How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?
ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.
Follow us on

ಸಾರ್ವಜನಿಕ ಭವಿಷ್ಯ ನಿಧಿ (ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್) ಅತ್ಯಂತ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ಸಣ್ಣ ಉಳಿತಾಯ ಯೋಜನೆಗಳ ಪೈಕಿಯೇ ಪಿಪಿಎಫ್ ಉತ್ತಮ ಬಡ್ಡಿದರಗಳನ್ನು ನೀಡುತ್ತದೆ. ಪಿಪಿಎಫ್ ಎಂಬುದು ಸರ್ಕಾರ ಬೆಂಬಲದ ಸಾಲ-ಆಧಾರಿತ ಇನ್​ಸ್ಟ್ರುಮೆಂಟ್ ಆಗಿದ್ದು, ಪ್ರತಿ ತ್ರೈಮಾಸಿಕದಲ್ಲಿ ಸರ್ಕಾರದಿಂದ ನಿರ್ಧರಿಸುವ ಫ್ಲೋಟಿಂಗ್ ಬಡ್ಡಿ ದರವನ್ನು ನೀಡಲಾಗುತ್ತದೆ. ಪಿಪಿಎಫ್ ಉಳಿತಾಯ ಖಾತೆಯ ಬಡ್ಡಿ ದರ ಪ್ರಸ್ತುತ ಶೇ 7.1 ಇದೆ. ಹೂಡಿಕೆಗಳ ಮೇಲೆ ವಾರ್ಷಿಕ ಆಧಾರದ ಮೇಲೆ ಬಡ್ಡಿ ದರವು ಸೇರ್ಪಡೆ ಆಗುತ್ತಾ ಸಾಗುತ್ತದೆ. ಪ್ರತಿ ತಿಂಗಳ 5ನೇ ತಾರೀಕು ಮತ್ತು ತಿಂಗಳ ಕೊನೆಗೆ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಅನ್ನು ಆಧರಿಸಿ ಬಡ್ಡಿ ದರವನ್ನು ಲೆಕ್ಕ ಹಾಕಲಾಗುತ್ತದೆ. ಪಿಪಿಎಫ್ ಎರಡು ರೀತಿಯ ಸಂಪತ್ತು ಸೃಷ್ಟಿಯ ಬೆನಿಫಿಟ್​ ನೀಡುತ್ತದೆ. ಆದಾಯದ ಮೇಲೆ ತೆರಿಗೆ ವಿನಾಯಿತಿ ದೊರೆಯುತ್ತದೆ. ವಯಕ್ತಿಕವಾಗಿ ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಪಿಪಿಎಫ್ ‘ವಿನಾಯಿತಿ, ವಿನಾಯಿತಿ, ವಿನಾಯಿತಿ’ ಅಥವಾ EEE ವರ್ಗದ ಅಡಿಯಲ್ಲಿ ಬರುತ್ತದೆ. ಅಂದರೆ ಹೂಡಿಕೆಯ ಮೊತ್ತ, ಬಡ್ಡಿಯ ಮೇಲೆ ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತ ಎಲ್ಲಕ್ಕೂ ತೆರಿಗೆ ವಿನಾಯಿತಿ ಇದೆ.

ಪಿಪಿಎಫ್ ಉಳಿತಾಯ ಯೋಜನೆಯು 15 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ. ಆದರೆ ಹೂಡಿಕೆದಾರರು ಕೆಲವು ಷರತ್ತುಗಳ ಆಧಾರದ ಮೇಲೆ ಖಾತೆ ತೆರೆದ 5 ವರ್ಷಗಳ ನಂತರ ಹಣವನ್ನು ಹಿಂಪಡೆಯಬಹುದು. ಆದರೆ ಯಾವುದೇ ಠೇವಣಿ ಅಥವಾ ಹಿಂಪಡೆಯುವಿಕೆಯನ್ನು ನಿಷ್ಕ್ರಿಯ PPF ಖಾತೆ ಮಾತ್ರ ಮಾಡಬಹುದು. ಒಂದು ವೇಳೆ ನಿಮ್ಮ ಪಿಪಿಎಫ್ ಖಾತೆಯು ನಿಷ್ಕ್ರಿಯವಾಗಿದ್ದರೆ, ಅದನ್ನು ಮತ್ತೆ ಸಕ್ರಿಯಗೊಳಿಸಬಹುದು.

ಲಿಖಿತ ಮನವಿ
ಖಾತೆದಾರರು ಖಾತೆ ತೆರೆದಿರುವ ಸಂಬಂಧಿತ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಗೆ ಅರ್ಜಿ ಬರೆಯಬಹುದು. ಈ ಲಿಖಿತ ವಿನಂತಿಯನ್ನು 15 ವರ್ಷಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಮಾಡಬಹುದು.

ಠೇವಣಿ
ಪಿಪಿಎಫ್ ಖಾತೆ ನಿಯಮಗಳ ಪ್ರಕಾರ, ಒಂದು ನಿಷ್ಕ್ರಿಯ ಖಾತೆಯನ್ನು ಒಂದು ಆರ್ಥಿಕ ವರ್ಷದಲ್ಲಿ ಕೇವಲ 500 ರೂಪಾಯಿ ಜಮಾ ಮಾಡುವ ಮೂಲಕ ಪುನಃ ಸಕ್ರಿಯಗೊಳಿಸಬಹುದು. ಇದನ್ನು ಮಾಡಲು ವಿಫಲವಾದರೆ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ. ಆದ್ದರಿಂದ, ಪಿಪಿಎಫ್ ಅನ್ನು ಸಕ್ರಿಯವಾಗಿ ಇಡಲು ಪ್ರತಿ ಹಣಕಾಸು ವರ್ಷದ ಮಾರ್ಚ್ 31ರೊಳಗೆ ಪಿಪಿಎಫ್ ಖಾತೆಗೆ 500 ರೂಪಾಯಿ ಠೇವಣಿ ಮಾಡುವುದು ಸೂಕ್ತ.

ದಂಡ
ಒಂದು ವೇಳೆ ಪಿಪಿಎಫ್ ಖಾತೆಯು ಹಲವು ವರ್ಷಗಳವರೆಗೆ ನಿಷ್ಕ್ರಿಯವಾಗಿದ್ದರೆ, ಮೊತ್ತ ಪಾವತಿಸದ ಪ್ರತಿ ವರ್ಷಕ್ಕೆ 500 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ ಮತ್ತು ಪ್ರತಿ ವರ್ಷ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಇದರರ್ಥ ಒಂದು ಖಾತೆಯು ಮೂರು ವರ್ಷಗಳಿಂದ ನಿಷ್ಕ್ರಿಯವಾಗಿದ್ದರೆ, ರೂ.1650 ಅಂದರೆ, ರೂ.1500 (500×3) ಠೇವಣಿ ಜೊತೆಗೆ ರೂ.150 (50×3) ದಂಡವನ್ನು ಜಮಾ ಮಾಡಬೇಕಾಗುತ್ತದೆ.

ಠೇವಣಿದಾರರು 15 ವರ್ಷಗಳ ಮೆಚ್ಯೂರಿಟಿ ಅವಧಿಯ ನಂತರ ಹಣವನ್ನು ಹಿಂಪಡೆಯಬಹುದು ಅಥವಾ ಅದನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ಒಂದು ವೇಳೆ ಹಾಗೆ ಮಾಡಲು ವಿಫಲವಾದರೆ ಪಿಪಿಎಫ್ ‘ಕೊಡುಗೆ ಇಲ್ಲದೆ ವಿಸ್ತರಣೆ’ ಎಂದು ಕವರ್ ಆಗುತ್ತದೆ.

ಇದನ್ನೂ ಓದಿ: Taxation on small savings: ಪಿಪಿಎಫ್​, ಸುಕನ್ಯಾ ಸಮೃದ್ಧಿ ಮತ್ತಿತರ ಸಣ್ಣ ಉಳಿತಾಯ ಯೋಜನೆಗೆ ತೆರಿಗೆ ಲೆಕ್ಕಾಚಾರ ಹೇಗೆ?

ಇದನ್ನೂ ಓದಿ: PPF or Sukanya Samriddhi Yojana: ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಗೆ ಯಾವುದು ಉತ್ತಮ?

(How To Activate PPF Account Here Is The Step By Step Details)