ಪತಂಜಲಿ ಫುಡ್ಸ್ ಷೇರುಬೆಲೆ ಹೊಸ ದಾಖಲೆ ಬರೆಯುತ್ತಾ? ಗರಿಷ್ಠ ಮಟ್ಟ ಮುಟ್ಟಲು ಎಷ್ಟಿದೆ ಬಾಕಿ?
Patanjali Foods Share Price Surge, 20% Up in a Month: ಪತಂಜಲಿ ಫುಡ್ಸ್‌ನ ಷೇರು ಬೆಲೆ ಕಳೆದ ಒಂದು ತಿಂಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಷೇರುಗಳಲ್ಲಿ ಉತ್ತಮ ಲಯ ಕಂಡುಬಂದಿದ್ದು, ಬೋನಸ್ ಷೇರು ಪ್ರಕಟಣೆಯ ನಂತರ ಇನ್ನಷ್ಟು ಏರಿಕೆಯಾಗಿದೆ. 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಲು ಇನ್ನೂ ಸ್ವಲ್ಪ ದೂರವಿದ್ದರೂ, ತಜ್ಞರು ತ್ರೈಮಾಸಿಕ ಫಲಿತಾಂಶಗಳನ್ನು ಅವಲಂಬಿಸಿ ಮುಂದಿನ ಏರಿಕೆ ನಿರೀಕ್ಷಿಸುತ್ತಿದ್ದಾರೆ.

ಈ ವಾರದ ಮೊದಲ ಎರಡು ದಿನ ಪತಂಜಲಿ ಫುಡ್ಸ್ ಷೇರುಬೆಲೆ (share price) ತುಸು ಇಳಿಕೆಯಾದರೂ ಒಟ್ಟಾರೆ ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಲಯದಲ್ಲಿ ಸಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಇದರ ಷೇರುಬೆಲೆ ಶೇ. 20ರಷ್ಟು ಹೆಚ್ಚಿದೆ. ಜುಲೈ ತಿಂಗಳಲ್ಲಿ, ಒಂದನೇ ತಾರೀಖಿನಿಂದ ಈಚೆ ಷೇರುಬೆಲೆ 361 ರೂ ಹೆಚ್ಚಿದೆ. ಅಂದರೆ, ಶೇ. 22ರಷ್ಟು ಷೇರುಬೆಲೆ ಏರಿಕೆ ಕಂಡಿದೆ. ಅದರಲ್ಲೂ ಬೋನಸ್ ಷೇರು ಪ್ರಕಟಿಸಿದ ಬಳಿಕ ಕಳೆದ ಒಂದು ವಾರದಲ್ಲಿ ಸಾಕಷ್ಟು ಹೆಚ್ಚಳ ಆಗಿದೆ. ಪತಂಜಲಿ ಫೂಡ್ಸ್ನ ಸಾರ್ವಕಾಲಿಕ ದಾಖಲೆ ಬೆಲೆ ಮಟ್ಟವನ್ನು ಮತ್ತೆ ಯಾವಾಗ ತಲುಪಬಹುದು ಎನ್ನುವ ಕುತೂಹಲ ಹೆಚ್ಚುತ್ತಿದೆ.
ಇವತ್ತಿನ ಮಂಗಳವಾರದ ಟ್ರೇಡಿಂಗ್ ಡೇ ಅಂತ್ಯದಲ್ಲಿ ಪತಂಜಲಿ ಫುಡ್ಸ್‌ನ ಷೇರುಬೆಲೆ 1,938 ರೂ ಇದೆ. 52 ವಾರಗಳ ಗರಿಷ್ಠ ಮಟ್ಟವಾಗಿ 2,011 ರೂ ಇದೆ. ಆ ಮಟ್ಟ ಮುಟ್ಟಲು ಇನ್ನೂ 73 ರೂ ಏರಿಕೆಯಾಗುವ ಅವಶ್ಯಕತೆ ಇದೆ. ಒಟ್ಟಾರೆ ಷೇರು ಮಾರುಕಟ್ಟೆ ಕುಸಿಯುತ್ತಿರುವುದರಿಂದ ಪತಂಜಲಿ ಷೇರು ಕೂಡ ಸ್ವಾಭಾವಿಕವಾಗಿ ಕುಸಿದಿದೆ. ಮಾರುಕಟ್ಟೆ ಚೇತರಿಸಿಕೊಂಡಂತೆ ಪತಂಜಲಿ ಕೂಡ ಕಂಬ್ಯಾಕ್ ಮಾಡಲಿದೆ.
ಇದನ್ನೂ ಓದಿ: ಟಿಡಿಎಸ್-ಟಿಸಿಎಸ್ ಪಾವತಿದಾರರಿಗೆ ರಿಲೀಫ್; ಡೆಡ್ಲೈನ್ನೊಳಗೆ ಈ ಕೆಲಸ ಮಾಡಿದರೆ ರದ್ದಾಗಲಿದೆ ಟ್ಯಾಕ್ಸ್ ನೋಟೀಸ್
ನಿನ್ನೆ ಸೋಮವಾರ 1,942 ರೂ ಬೆಲೆಯಲ್ಲಿ ದಿನಾಂತ್ಯಗೊಳಿಸಿದ್ದ ಪತಂಜಲಿ ಫೂಡ್ಸ್ ಷೇರು ಇವತ್ತು ಮಂಗಳವಾರ ಒಂದು ಹಂತದಲ್ಲಿ 1,960 ರೂವರೆಗೂ ಹೋಗಿತ್ತು. ಅಂತಿಮವಾಗಿ ಅದು 1,938 ರೂನಲ್ಲಿ ಅಂತ್ಯಗೊಂಡಿತು.
ತಜ್ಞರ ಪ್ರಕಾರ, ಪತಂಜಲಿ ಸಂಸ್ಥೆಯ ತ್ರೈಮಾಸಿಕ ಫಲಿತಾಂಶಗಳು ಬರಲಿವೆ. ಇದರಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಒಂದು ವೇಳೆ, ನಿರೀಕ್ಷೆಯಂತೆ ಕಂಪನಿಯ ಆದಾಯದಲ್ಲಿ ಹೆಚ್ಚಳ ಆಗಿದ್ದರೆ ಷೇರುಗಳಿಗೆ ಬೇಡಿಕೆ ಹೆಚ್ಚಲಿದೆ. ತನ್ನ ಗರಿಷ್ಠ ಬೆಲೆ ಮಟ್ಟವನ್ನು ಇನ್ನೊಂದು ತಿಂಗಳಲ್ಲಿ ಮುಟ್ಟುವ ಸಾಧ್ಯತೆ ಇದೆ.
ಒಂದೇ ತಿಂಗಳಲ್ಲಿ ಶೇ.20 ರಷ್ಟು ಹೆಚ್ಚಳ
ಕಳೆದ ಕೆಲ ದಿನಗಳಲ್ಲಿ ಪತಂಜಲಿ ಫುಡ್ಸ್ ಷೇರುಗಳು ಉತ್ತಮ ಏರಿಕೆ ಕಂಡಿವೆ. ದತ್ತಾಂಶದ ಪ್ರಕಾರ, ಪತಂಜಲಿ ಫುಡ್ಸ್ ಷೇರುಗಳು ಒಂದು ತಿಂಗಳಲ್ಲಿ ಶೇ. 20 ರಷ್ಟು ಏರಿಕೆ ಕಂಡಿವೆ. ಕಳೆದ ಒಂದು ವಾರದ ಬಗ್ಗೆ ಮಾತನಾಡಿದರೆ, ಕಂಪನಿಯ ಷೇರುಗಳು ಸುಮಾರು ಶೇ. 15 ರಷ್ಟು ಏರಿಕೆ ಕಂಡಿವೆ. ಪ್ರಸಕ್ತ ವರ್ಷದಲ್ಲಿ (2025ರ ಜನವರಿ 1ರಿಂದೀಚೆ), ಕಂಪನಿಯ ಷೇರುಗಳು ಹೂಡಿಕೆದಾರರಿಗೆ ಸಕಾರಾತ್ಮಕ ಫಲಿತಾಂಶವನ್ನು ನೀಡಿವೆ ಮತ್ತು ಶೇ. 7 ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಆದರೆ ಕಳೆದ ಒಂದು ವರ್ಷದಲ್ಲಿ, ಕಂಪನಿಯು ಹೂಡಿಕೆದಾರರಿಗೆ ಶೇ. 21 ರಷ್ಟು ಲಾಭವನ್ನು ನೀಡಿದೆ.
ಇದನ್ನೂ ಓದಿ: Patanjali Foods: ಪತಂಜಲಿ ಫೂಡ್ಸ್ನಿಂದ 2:1 ಬೋನಸ್ ಷೇರು ವಿತರಣೆಗೆ ನಿರ್ಧಾರ; ಯಾರಿಗೇನು ಲಾಭ?
ಕಂಪನಿ ಹೊಸ ದಾಖಲೆ ಸೃಷ್ಟಿಸುತ್ತಾ?
ಈಗ ದೊಡ್ಡ ಪ್ರಶ್ನೆಯೆಂದರೆ ಕಂಪನಿಯ ಷೇರುಗಳು ಹೊಸ ದಾಖಲೆಯನ್ನು ಸ್ಥಾಪಿಸುತ್ತವೆಯಾ ಎಂಬುದು. ಏಕೆಂದರೆ ಪತಂಜಲಿ ಫುಡ್ಸ್‌ನ ಷೇರುಗಳು 52 ವಾರಗಳ ಗರಿಷ್ಠ ಮಟ್ಟಕ್ಕೆ ಬಹಳ ಹತ್ತಿರದಲ್ಲಿವೆ. ನಾವು ಡೇಟಾವನ್ನು ನೋಡಿದರೆ, ಕಂಪನಿಯ 52 ವಾರಗಳ ಗರಿಷ್ಠ ಮಟ್ಟವು 2,011 ರೂ. ಇದೆ. 2024ರ ಸೆಪ್ಟೆಂಬರ್ 4ರಂದು ಈ ಮಟ್ಟ ತಲುಪಿದವು. ಪ್ರಸ್ತುತ ಷೇರು ಬೆಲೆ ದಾಖಲೆಯ ಗರಿಷ್ಠ ಮಟ್ಟದಿಂದ ಸುಮಾರು 73 ರೂ. ದೂರದಲ್ಲಿದೆ. ಇದರರ್ಥ ಕಂಪನಿಯ ಷೇರುಗಳು 52 ವಾರಗಳ ದಾಖಲೆಯನ್ನು ಮುರಿಯಲು ಇನ್ನು 5 ಪ್ರತಿಶತದಷ್ಟು ಏರಿಕೆಯ ಅಗತ್ಯವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




