AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

64 ಕೋಟಿ ರೂ ಲಂಚ ಆರೋಪ: ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ತಪ್ಪಿತಸ್ಥೆ ಎಂದ ನ್ಯಾಯಮಂಡಳಿ

Former ICICI bank CEO Chanda Kochhar found guilty of taking bribe: ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೋಚರ್ 64 ಕೋಟಿ ರೂ ಲಂಚ ಸ್ವೀಕರಿಸಿದ್ದಾರೆ ಎನ್ನುವ ಇಡಿ ಆರೋಪವನ್ನು ಟ್ರಿಬ್ಯುನಲ್ ಪುರಸ್ಕರಿಸಿದೆ. ವಿಡಿಯೋಕಾನ್ ಗ್ರೂಪ್​ಗೆ 300 ಕೋಟಿ ರೂ ಸಾಲ ಮಂಜೂರು ಮಾಡುವ ಬದಲಾಗಿ ಈ ಲಂಚ ಪಡೆಯಲಾಗಿರುವ ಆರೋಪ ಇದೆ. 2009ರಲ್ಲಿ ಸಾಲ ನೀಡಲಾಗಿತ್ತು. ಚಂದಾ ಕೋಚರ್ ಪತಿಗೆ ಸೇರಿದ ಕಂಪನಿಗೆ ವಿಡಿಯೋಕಾನ್ ಗ್ರೂಪ್​ನಿಂದ 64 ಕೋಟಿ ರೂ ಹಣ ವರ್ಗಾವಣೆ ಆಗಿತ್ತು.

64 ಕೋಟಿ ರೂ ಲಂಚ ಆರೋಪ: ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ತಪ್ಪಿತಸ್ಥೆ ಎಂದ ನ್ಯಾಯಮಂಡಳಿ
ಚಂದಾ ಕೋಚರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 22, 2025 | 12:03 PM

Share

ನವದೆಹಲಿ, ಜುಲೈ 22: ಐಸಿಐಸಿಐ ಬ್ಯಾಂಕ್​ನಿಂದ ವಿಡಿಯೊಕಾನ್ ಗ್ರೂಪ್​ಗೆ 300 ಕೋಟಿ ರೂ ಸಾಲ ಮಂಜೂರು ಮಾಡಲು 64 ಕೋಟಿ ರೂ ಲಂಚ ಸ್ವೀಕರಿಸಿದ್ದಾರೆ ಎಂದು ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೋಚರ್ (Chanda Kochhar) ವಿರುದ್ಧದ ಆರೋಪವನ್ನು ನ್ಯಾಯಮಂಡಳಿ ಸಮ್ಮತಿಸಿದೆ. ಈ ಪ್ರಕರಣದಲ್ಲಿ ಕೋಚರ್ ಅವರು ತಪ್ಪಿತಸ್ಥೆ ಎಂದು ಮೇಲ್ಮನವಿ ನ್ಯಾಯಮಂಡಳಿ ತೀರ್ಮಾನಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ವರದಿ ಮಾಡಿದೆ.

ಜುಲೈ 3ರಂದು ನ್ಯಾಯಮಂಡಳಿಯ ತೀರ್ಪು ಪ್ರಕಟವಾಗಿತ್ತು. ಅದರಲ್ಲಿ ಚಂದಾ ಕೋಚರ್ 64 ಕೋಟಿ ರೂ ಲಂಚ ಸ್ವೀಕರಿಸಿರುವ ಸಂಬಂಧ ಉಲ್ಲೇಖ ಇದೆ. ತಮ್ಮ ಪತಿ ದೀಪಕ್ ಕೋಚರ್ ಅವರನ್ನು ಬಳಸಿಕೊಂಡು ಚಂದಾ ಕೋಚರ್ ಈ ಲಂಚ ಸ್ವೀಕರಿಸಿರುವುದು ಹೌದು ಎಂದು ಟ್ರಿಬ್ಯುನಲ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ಆಸ್ತಿ ಮುಟ್ಟುಗೋಲು ಹಾಕಿರುವುದನ್ನು ಖಚಿತಪಡಿಸಿದ ಟ್ರಿಬ್ಯುನಲ್

ವಿಡಿಯೋಕಾನ್ ಗ್ರೂಪ್​ಗೆ ಐಸಿಐಸಿಐ ಬ್ಯಾಂಕ್​ನಿಂದ 300 ಕೋಟಿ ರೂ ಸಾಲ ಮಂಜೂರಾದಾಗ ಬ್ಯಾಂಕ್​ಗೆ ಚಂದಾ ಕೋಚರ್ ಅವರೇ ಸಿಇಒ ಆಗಿದ್ದರು. ಸಾಲ ವಿತರಣೆ ಆಗಿ ಒಂದು ದಿನದ ಬಳಿಕ ವಿಡಿಯೋಕಾನ್ ಗ್ರೂಪ್​ಗೆ ಸೇರಿದ ಎಸ್​ಇಪಿಎಲ್ ಸಂಸ್ಥೆಯ ಮೂಲಕ ನುಪವರ್ ರಿನಿವಬಲ್ಸ್ ಪ್ರೈ ಲಿಮಿಟೆಡ್ (ಎನ್​ಆರ್​ಪಿಎಲ್) ಕಂಪನಿಗೆ 64 ಕೋಟಿ ರೂ ವರ್ಗಾವಣೆ ಆಗಿದೆ.

ಈ ಎನ್​ಆರ್​ಪಿಎಲ್ ಸಂಸ್ಥೆಯಲ್ಲಿ ಚಂದಾ ಕೋಚರ್ ಪತಿ ದೀಪಕ್ ಕೋಚರ್ ಎಂಡಿಯಾಗಿದ್ದರು. ಹಿತಾಸಕ್ತಿ ಸಂಘರ್ಷದ ಸ್ಥಿತಿ ಇದ್ದರೂ ಚಂದಾ ಕೋಚರ್ ತಮ್ಮ ಅಧಿಕಾರ ಬಳಸಿ ವಿಡಿಯೋಕಾನ್ ಗ್ರೂಪ್​ಗೆ ಸಾಲ ಮಂಜೂರು ಮಾಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ. ಮೇಲ್ಮನವಿ ನ್ಯಾಯಮಂಡಳಿ ಈ ಇಡಿ ವಾದವನ್ನು ಪುರಸ್ಕರಿಸಿದೆ.

ಇದನ್ನೂ ಓದಿ: ಟಿಡಿಎಸ್-ಟಿಸಿಎಸ್ ಪಾವತಿದಾರರಿಗೆ ರಿಲೀಫ್; ಡೆಡ್​ಲೈನ್​ನೊಳಗೆ ಈ ಕೆಲಸ ಮಾಡಿದರೆ ರದ್ದಾಗಲಿದೆ ಟ್ಯಾಕ್ಸ್ ನೋಟೀಸ್

2009ರ ಆಗಸ್ಟ್​ನಲ್ಲಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ನೇತೃತ್ವದ ಸಮಿತಿಯು ವಿಡಿಯೋಕಾನ್ ಗ್ರೂಪ್​ಗೆ 300 ಕೋಟಿ ರೂ ಸಾಲ ಮಂಜೂರಾತಿಗೆ ಅನುಮೋದನೆ ಕೊಟ್ಟಿತ್ತು. ಆ ಸಂದರ್ಭದಲ್ಲಿ ಕೋಚರ್ ಅವರು ಹಿತಾಸಕ್ತಿ ಸಂಘರ್ಷದ ಬಗ್ಗೆ ಸಮಿತಿಗೆ ಮಾಹಿತಿ ನೀಡಿರಲಿಲ್ಲ.

ಸಿಬಿಐ, ಇಡಿ ಸಂಸ್ಥೆಗಳು ಈ ಪ್ರಕರಣದ ತನಿಖೆ ನಡೆಸಿವೆ. 2019ರಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. 11,000 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದೆ. ಚಂದಾ ಕೋಚರ್, ದೀಪಕ್ ಕೋಚರ್, ವಿಡಿಯೋಕಾನ್ ಗ್ರೂಪ್ ಮಾಲೀಕ ವಿಎಸ್ ಧೂತ್ ಸೇರಿದಂತೆ ಹಲವರ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ