AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ಆಸ್ತಿ ಮುಟ್ಟುಗೋಲು ಹಾಕಿರುವುದನ್ನು ಖಚಿತಪಡಿಸಿದ ಟ್ರಿಬ್ಯುನಲ್

Former ICICI bank CEO Chanda Kochhar in loan scam: ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂಡಿಯಾದ ಚಂದಾ ಕೋಚರ್ ಅವರ ಆಸ್ತಿ ಜಫ್ತಿ ಮಾಡುವ ಇಡಿ ನಿರ್ಧಾರಕ್ಕೆ ಅಪೆಲೈಟ್ ಟ್ರಿಬ್ಯುನಲ್ ಗ್ರೀನ್ ಸಿಗ್ನಲ್ ನೀಡಿದೆ. ಮುಂಬೈನ ಚರ್ಚ್ ಗೇಟ್​ನಲ್ಲಿರುವ ಒಂದು ಫ್ಲ್ಯಾಟ್ ಸೇರಿದಂತೆ ವಿವಿಧ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅನುಮತಿ ಸಿಕ್ಕಂತಾಗಿದೆ. 2009ರಲ್ಲಿ ಹಿತಾಸಕ್ತಿ ಘರ್ಷಣೆ ಇದ್ದರೂ ವಿಡಿಯೋಕಾನ್ ಗ್ರೂಪ್​ಗೆ ನೂರಾರು ಕೋಟಿ ರೂ ಮೊತ್ತದ ಸಾಲವನ್ನು ಅಕ್ರಮವಾಗಿ ನೀಡಿದ ಆರೋಪ ಚಂದಾ ಕೋಚರ್ ಮೇಲಿದೆ.

ಮಾಜಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೋಚರ್ ಆಸ್ತಿ ಮುಟ್ಟುಗೋಲು ಹಾಕಿರುವುದನ್ನು ಖಚಿತಪಡಿಸಿದ ಟ್ರಿಬ್ಯುನಲ್
ಚಂದಾ ಕೋಚರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2025 | 5:19 PM

Share

ನವದೆಹಲಿ, ಜುಲೈ 20: ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೋಚರ್ (Chanda Kochhar) ಅವರ ಆಸ್ತಿಯನ್ನು ಜಫ್ತಿ ಮಾಡುವ ಜಾರಿ ನಿರ್ದೇಶನಾಲಯದ (ED) ನಿರ್ಧಾರಕ್ಕೆ ಮೇಲ್ಮನವಿ ನ್ಯಾಯಮಂಡಳಿ (Appellate Tribunal) ಸಮ್ಮತಿಸಿದೆ. ವಿಡಿಯೋಕಾನ್​ಗೆ ನೀಡಲಾದ 300 ಕೋಟಿ ರೂ ಸಾಲಕ್ಕೆ ಸಂಬಂಧಿಸಿದ 64 ಕೋಟಿ ರೂ ಪಾವತಿಯನ್ನು ಅಕ್ರಮ ಎಂದೂ ಟ್ರಿಬ್ಯುನಲ್ ತೀರ್ಮಾನಿಸಿದೆ. ಈ ಬೆಳವಣಿಗೆಯು ಕೋಚರ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಇದ್ದ ಅಡಚಣೆ ನಿವಾರಣೆ ಆದಂತಾಗಿದೆ.

ಮುಂಬೈನ ಚರ್ಚ್​ಗೇಟ್​ನಲ್ಲಿರುವ ಒಂದು ಐಷಾರಾಮಿ ಫ್ಲ್ಯಾಟ್ ಸೇರಿದಂತೆ ಚಂದಾ ಕೋಚರ್ ಅವರ ವಿವಿಧ ಆಸ್ತಿಗಳನ್ನು ಜಫ್ತಿ ಮಾಡಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ಈ ಆಸ್ತಿಗಳು ಅಕ್ರಮ ವ್ಯವಹಾರದ ಫಲ ಎಂದು ಇಡಿ ವರ್ಗೀಕರಿಸಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಸರ್ಕಾರಿ ಸಂಸ್ಥೆಗಳಿಂದ 10,000 ಕೋಟಿ ರೂ ಹೂಡಿಕೆ: ಕಿಶನ್ ರೆಡ್ಡಿ

ಏನಿದು ಚಂದಾ ಕೋಚರ್ ವಂಚನೆ ಪ್ರಕರಣ?

ಐಸಿಐಸಿಐ ಬ್ಯಾಂಕ್​ನಿಂದ ವಿಡಿಯೋಕಾನ್ ಗ್ರೂಪ್​ನ ವಿವಿಧ ಕಂಪನಿಗಳಿಗೆ ಸಾಲಗಳನ್ನು ನೀಡಲಾಗಿತ್ತು. ಆಗ ಐಸಿಐಸಿಐ ಬ್ಯಾಂಕ್​ನ ಸಿಇಒ ಆಗಿದ್ದವರು ಚಂದಾ ಕೋಚರ್. ವಿಡಿಯೋಕಾನ್ ಇಂಟರ್​ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಗೆ 300 ಕೋಟಿ ರೂ ಸಾಲವನ್ನು 2009ರ ಆಗಸ್ಟ್​ನಲ್ಲಿ ಮಂಜೂರು ಮಾಡಲಾಗಿತ್ತು. ಚಂದಾ ಕೋಚರ್ ನೇತೃತ್ವದ ಸಮಿತಿಯಿಂದ ಸಾಲಕ್ಕೆ ಅನುಮೋದನೆ ಸಿಕ್ಕಿತ್ತು.

ವಿವಿಧ ವಿಡಿಯೋಕಾನ್ ಕಂಪನಿಗಳ ಸಂಕೀರ್ಣ ಜಾಲದ ಮೂಲಕ ಸಾಲದ ಹಂಚಿಕೆ ಆಗಿತ್ತು. ಇದರಲ್ಲಿ 64 ಕೋಟಿ ರೂ ಹಣವು ಚಂದಾ ಕೋಚರ್ ಅವರ ಪತಿ ದೀಪಕ್ ಕೋಚರ್ ಮಾಲತ್ವದ ನುಪವರ್ ರಿನಿವಬಲ್ ಲಿಮಿಟೆಡ್ ಕಂಪನಿಗೆ ಹೂಡಿಕೆಯಾಗಿ ರವಾನೆ ಆಗಿತ್ತು.

ಇದನ್ನೂ ಓದಿ: ಐಐಟಿ ವಿದ್ಯಾರ್ಥಿಗಳು ವಿನ್ಯಾಸಪಡಿಸಿದ 8 ಚಿಪ್​ಸೆಟ್​ಗಳು ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಿಗೆ ರವಾನೆ; ಈ ಚಿಪ್​ಸೆಟ್​ಗಳು ಯಾಕೆ ಮುಖ್ಯ?

2019ರಲ್ಲಿ ಸಿಬಿಐ ಈ ಸಂಬಂಧ ಪ್ರಕರಣ ದಾಖಲಿಸಿತು. ಚಂದಾ ಕೋಚರ್, ಆಕೆಯ ಪತಿ ದೀಪಕ್ ಕೋಚರ್ ಹಾಗೂ ವಿಡಿಯೋಕಾನ್ ಗ್ರೂಪ್ ಮಾಲೀಕ ವಿ ಎನ್ ಧೂತ್ ಸೇರಿದಂತೆ ಹಲವರ ವಿರುದ್ಧ ಆರೋಪಗಳಿವೆ. ಸಿಬಿಐ ಈ ಪ್ರಕರಣದಲ್ಲಿ ಬರೋಬ್ಬರಿ 11,000 ಪುಟುಗಳ ಚಾರ್ಜ್​ಶೀಟ್ ಫೈಲ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ