PPF or Sukanya Samriddhi Yojana: ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಗೆ ಯಾವುದು ಉತ್ತಮ?

ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಇವೆರಡರಲ್ಲಿ ಯಾವುದರಲ್ಲಿ ಉಳಿತಾಯ ಮಾಡುವುದು ಉತ್ತಮ ಎಂಬುದರ ವಿಶ್ಲೇಷಣೆ ಇಲ್ಲಿದೆ.

PPF or Sukanya Samriddhi Yojana: ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಗೆ ಯಾವುದು ಉತ್ತಮ?
ಶೇ 16,000ದಷ್ಟು ಏರಿಕೆ
Follow us
TV9 Web
| Updated By: Srinivas Mata

Updated on:Jun 12, 2021 | 3:51 PM

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ, ತೆರಿಗೆ ವಿನಾಯಿತಿ ಇವುಗಳ ಬಗ್ಗೆ ಪ್ರಾಥಮಿಕವಾದ ಮಾಹಿತಿ ಇರುವವರು ಕೂಡ ಇರುವುದರಲ್ಲಿ ಯಾವುದು ಉತ್ತಮ ಯೋಜನೆ ಎಂಬ ಬಗ್ಗೆ ಪ್ರಶ್ನೆ ಇಟ್ಟುಕೊಂಡಿರುತ್ತಾರೆ. ಮುಖ್ಯವಾಗಿ ಇಂಥ ಉಳಿತಾಯ ಯೋಜನೆಗಳ ಉದ್ದೇಶ ಏನು, ಬಡ್ಡಿ ಎಷ್ಟು, ತೆರಿಗೆ ವಿನಾಯಿತಿ ಯಾವ್ಯಾವುದರ ಮೇಲೆ ದೊರೆಯುತ್ತದೆ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಈಗಿನ ಲೇಖನದಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉತ್ತಮವೋ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಆದರೆ ನೆನಪಿರಲಿ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯುವುದಕ್ಕೆ ಸಾಧ್ಯ ಇರುವುದು ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ. ಆದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹಾಗಲ್ಲ. ಯಾರ ಹೆಸರಲ್ಲಿ ಬೇಕಾದರೂ ಆರಂಭಿಸಬಹುದು.

* ಪಿಪಿಎಫ್ ಖಾತೆ 15 ವರ್ಷಗಳ ಅವಧಿಯದು. ಅದನ್ನು ಐದೈದು ವರ್ಷಗಳಂತೆ ಮೂರು ಸಲಕ್ಕಿಂತ ಹೆಚ್ಚು ಬಾರಿ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಭಾವನೆ ಮುಂಚೆ ಇತ್ತು. ಆದರೆ ಈಗ ಎಲ್ಲಿಯ ತನಕ ಭಾರತೀಯ ನಾಗರಿಕರಾಗಿರುತ್ತಾರೋ ಅಲ್ಲಿಯ ತನಕ ಐದು ವರ್ಷಗಳಂತೆ ಎಷ್ಟು ಬಾರಿ ಬೇಕಾದರೂ ವಿಸ್ತರಿಸಬಹುದು. ಇನ್ನು ಒಂದು ಸಲ ಮೆಚ್ಯೂರ್ಡ್ (ಪಕ್ವತೆ) ಆದ ಮೇಲೆ ಮತ್ತೆ ಇನ್ನೊಂದು ಖಾತೆ ತೆರೆಯಬಹುದು.

* ಬಡ್ಡಿ ದರದ ವಿಚಾರಕ್ಕೆ ಬಂದರೆ ಪಿಪಿಎಫ್​ಗೆ ಶೇ 7.1 ಇದ್ದರೆ, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ 7.6 ಇದೆ. ಇನ್ನು ಹೆಣ್ಣುಮಗಳಿನ ವಯಸ್ಸು 21 ವರ್ಷ ಪೂರ್ತಿ ಆಗುತ್ತಿದ್ದಂತೆಯೇ ಕ್ಲೋಸ್ ಮಾಡಬೇಕು. ಆದರೆ ಪಿಪಿಎಫ್ ಖಾತೆಯನ್ನು ಐದು ವರ್ಷಗಳಂತೆ ಎಷ್ಟು ಬಾರಿ ಬೇಕಾದರೂ ವಿಸ್ತರಣೆ ಮಾಡಬಹುದು.

* ಪ್ರತಿ ವರ್ಷ ಪಿಪಿಎಫ್​ನಲ್ಲಿ 1.50 ಲಕ್ಷ ರೂಪಾಯಿ ತನಕ ಡೆಪಾಸಿಟ್ ಮಾಡುವುದಕ್ಕೆ ಅವಕಾಶ ಇದೆ. ಸುಕನ್ಯಾ ಸಮೃದ್ಧಿ ಯೋಜನೆಯಿಂದ ಬರುವ ಮೆಚ್ಯೂರಿಟಿ ಮೊತ್ತವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಆದ್ದರಿಂದ ಸುಕನ್ಯಾ ಸಮೃದ್ಧಿ ಯೋಜನೆ ಹಣವನ್ನು ಮಗಳ ಮದುವೆ ಅಥವಾ ಶಿಕ್ಷಣಕ್ಕೆ ಬಳಸುತ್ತೀರೋ ಅಥವಾ ಆಕೆಯ ಇತರ ವೆಚ್ಚಕ್ಕಾಗಿ ದೀರ್ಘಾವಧಿ ಉಳಿಸುತ್ತೀರೋ ಖಾತ್ರಿ ಮಾಡಿಕೊಳ್ಳಬೇಕು.

* ಗಮನಿಸಬೇಕಾದದ್ದು ಏನೆಂದರೆ, ಪಿಪಿಎಫ್ – ಸುಕನ್ಯಾ ಸಮೃದ್ಧಿ ಎರಡೂ ಖಾತೆಯನ್ನು ತೆರೆಯಿರಿ. ಎಲ್ಲಿಯ ತನಕ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ನೀಡುತ್ತಾರೋ ಅದರಲ್ಲಿ ತೊಡಗಿಸಿ. ಆ ಹಣವನ್ನು ಮಗಳ ಮದುವೆ ಮತ್ತು ಶಿಕ್ಷಣಕ್ಕೆ ಬಳಸಿಕೊಳ್ಳಿ. ಪಿಪಿಎಫ್​ಗಾದರೆ ಪ್ರತಿ ವರ್ಷ ಜಮೆ ಮಾಡುವ ಮೊತ್ತ, ಅದರ ಮೇಲೆ ಬರುವ ಬಡ್ಡಿ ಹಾಗೂ ಮೆಚ್ಯೂರಿಟಿ ನಂತರ ಬರುವ ಮೊತ್ತ ಮೂರಕ್ಕೂ ತೆರಿಗೆ ವಿನಾಯಿತಿ ಇದೆ.

ಇದನ್ನೂ ಓದಿ: ದಿನಕ್ಕೆ 411 ರೂ. ಉಳಿಸಿದರೆ 15 ವರ್ಷಕ್ಕೆ ಬರೋಬ್ಬರಿ 40.68 ಲಕ್ಷ: ಹಣಕಾಸಿನ ಆಸರೆಗೆ ಪಿಪಿಎಫ್​ ಉತ್ತಮ ಆಯ್ಕೆ

(PPF or Sukanya Samriddhi Yojana which one is the best for savings? Here is an explainer)

Published On - 3:48 pm, Sat, 12 June 21