Sign In

By signing in or creating an account, you agree with Associated Broadcasting Company's Terms & Conditions and Privacy Policy.

Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?

ಒಬ್ಬ ವ್ಯಕ್ತಿಯು ಮೃತಪಟ್ಟಲ್ಲಿ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇವೆಲ್ಲವನ್ನೂ ಏನು ಮಾಡಬೇಕು ಎಂಬುದರ ವಿವರ ಇಲ್ಲಿದೆ.

Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 12, 2021 | 6:33 PM

ಕೊವಿಡ್ 19 ಬಿಕ್ಕಟ್ಟು ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲಿ ತೀವ್ರವಾಗಿದೆ. ಲಕ್ಷಾಂತರ ಮಂದಿ ಇದರಿಂದ ಸಾವನ್ನಪ್ಪಿದ್ದಾರೆ. ಜನರು ತಮ್ಮ ಸಂಬಂಧಿಕರು, ಸ್ನೇಹಿತರು, ಆಪ್ತರು, ನೆರೆ- ಹೊರೆಯವರನ್ನು ಕಳೆದುಕೊಂಡಿದ್ದಾರೆ. ಹೀಗೆ ಸಾವನ್ನಪ್ಪಿದವರ ಅಧಿಕೃತ ದಾಖಲಾತಿಗಳು ಮತ್ತು ಸರ್ಕಾರಿ ಐ.ಡಿ.ಗಳು ಅಂದರೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ಪಾಸ್​ಪೋರ್ಟ್ ಇತ್ಯಾದಿಗಳು ಏನಾಗುತ್ತವೆ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಒಂದು ವೇಳೆ ಮೃತರು ನಿಮಗೆ ಪರಿಚಿತರೋ ಅಥವಾ ಸಂಬಂಧಿಕರೋ ಆದಲ್ಲಿ ಅಂಥ ದಾಖಲಾತಿಗಳು ಅಥವಾ ಐ.ಡಿ.ಗಳನ್ನು ಎಷ್ಟು ದಿನಗಳ ಕಾಲ ಇಟ್ಟುಕೊಂಡಿರಬಹುದು ಅಥವಾ ಈ ದಾಖಲಾತಿಗಳನ್ನು ಸರೆಂಡರ್ ಮಾಡವುದಕ್ಕೆ ನಿಯಮಾವಳಿಗಳು ಏನಾದರೂ ಇವೆಯೇ? ಈ ಕುರಿತು ಉತ್ತರಗಳು ನಿಮ್ಮೆದುರು ಇವೆ.

ಆಧಾರ್ ಆಧಾರ್ ಎಂಬುದು ಈ ದೇಶದಲ್ಲಿ ಬಹಳ ಮುಖ್ಯವಾದ ದಾಖಲೆ. ವಿಳಾಸ ಮತ್ತು ಗುರುತು ದೃಢೀಕರಣ ಆಗಿ ಇದನ್ನು ಬಳಸಬಹುದು. ಎಲ್​ಪಿಜಿ ಸಬ್ಸಿಡಿ, ಸರ್ಕಾರದಿಂದ ವಿದ್ಯಾರ್ಥಿ ವೇತನ ಅನುಕೂಲ, ಇಪಿಎಫ್ ಖಾತೆ, ಐಟಿಆರ್ ಫೈಲಿಂಗ್ ಮುಂತಾದವಕ್ಕೆ ಆಧಾರ್ ಕಡ್ಡಾಯ. ಆಧಾರ್ ಎಂಬುದು ವಿಶಿಷ್ಟವಾದ ಗುರುತಿನ ಸಂಖ್ಯೆ. ವ್ಯಕ್ತಿ ಮೃತಪಟ್ಟ ನಂತರವೂ ಆ ಸಂಖ್ಯೆ ಮುಂದುವರಿಯಯುತ್ತದೆ. ಆಧಾರ್ ನಿರ್ವಹಣೆ ಮಾಡುವಂಥ ಯುನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಅನ್ನು ಸಾವಿನ ನೋಂದಣಿ ದಾಖಲೆಯೊಂದಿಗೆ ಜೋಡಣೆ ಮಾಡಿಲ್ಲ.

ಆ ಕಾರಣಕ್ಕೆ ಆಧಾರನ್​ನಿಂದ ಮೃತರ ಮಾಹಿತಿ ಅಪ್​ಡೇಟ್ ಆಗಲ್ಲ. ಮರಣದ ಮಾಹಿತಿ ನೋಂದಣಿಗೋ ಅಥವಾ ಮರಣ ಪ್ರಮಾಣ ಪತ್ರಕ್ಕೋ ಆಧಾರ್ ಕಡ್ಡಾಯವೂ ಅಲ್ಲ. ಮೃತರ ಕುಟುಂಬಸ್ಥರು ಆ ಆಧಾರ್ ಕಾರ್ಡ್ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. UIDAIನಿಂದ ಆಧಾರ್​ ಕಾರ್ಡ್ ರದ್ದು ಮಾಡುವುದಕ್ಕೋ ಅಥವಾ ಚಾಲ್ತಿಯಿಂದ ಹಿಂಪಡೆಯುವುದಕ್ಕೋ ಆಯ್ಕೆ ಇಲ್ಲ. ಆದರೆ ಆ ಬಯೋಮೆಟ್ರಿಕ್ ಕ್ರೆಡೆನ್ಷಿಯಲ್ಸ್ ಅನ್ನು ಎಂಆಧಾರ್ ಆ್ಯಪ್ ಅಥವಾ UIDAI ವೆಬ್​ಸೈಟ್​ ಮೂಲಕ ಲಾಕ್ ಮಾಡಿಸಬಹುದು. ಆ ಮೂಲಕ ಬಯೋಮೆಟ್ರಿಕ್ ದುರ್ಬಳಕೆ ಆಗದಂತೆ ತಡೆಯಬಹುದು.

ಪ್ಯಾನ್ (PAN) ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ಹಣಕಾಸು ದಾಖಲೆ. ಮೃತರ ಬ್ಯಾಂಕ್ ಅಕೌಂಟ್, ಡಿಮ್ಯಾಟ್ ಅಕೌಂಟ್, ಐಟಿಆರ್ ಫೈಲಿಂಗ್ ಮುಂತಾದವಕ್ಕೆ ಇದು ಕಡ್ಡಾಯವಾದ ದಾಖಲೆ. ವ್ಯಕ್ತಿಯೊಬ್ಬರು ಮೃತಪಟ್ಟ ಮೇಲೂ ಪ್ಯಾನ್ ಅಗತ್ಯ ಇರುತ್ತದೆ. ಎಲ್ಲೆಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ ಎಂದಿರುತ್ತದೋ ಆ ಎಲ್ಲ ವಹಿವಾಟು ಮುಗಿಯುವ ತನಕ ಪ್ಯಾನ್ ಕಾರ್ಡ್ ಇಟ್ಟುಕೊಂಡಿರಬೇಕು. ಆದಾಯ ತೆರಿಗೆ ಇಲಾಖೆಯಿಂದ ಐಟಿಆರ್​ ಫೈಲಿಂಗ್​ ಮತ್ತು ಪ್ರೊಸೆಸ್ ಆಗುವ ತನಕ ಪ್ಯಾನ್​ ಕಡ್ಡಾಯವಾಗಿ ಇಟ್ಟಕೊಳ್ಳಬೇಕು..

ತೆರಿಗೆ ಇಲಾಖೆಯು ಪ್ರಸ್ತುತ ಅಸೆಸ್​ಮೆಂಟ್ ವರ್ಷವೂ ಸೇರಿ ನಾಲ್ಕು ವರ್ಷದ ತನಕ ರೀ- ಅಸೆಸ್​ಮೆಂಟ್ ತೆರೆಯಬಹುದು. ಬ್ಯಾಂಕ್ ಅಕೌಂಟ್ಸ್, ಡಿಮ್ಯಾಟ್ ಅಕೌಂಟ್ಸ್, ಆದಾಯ ತೆರಿಗೆ ರಿಟರ್ನ್ಸ್ ಮುಂತಾದವು ಮುಗಿದ ಮೇಲೆ ಮೃತರ ಪ್ರತಿನಿಧಿಗಳು ಅಥವಾ ಉತ್ತರಾಧಿಕಾರಿಗಳು ಪ್ಯಾನ್​ ಕಾರ್ಡ್​ ಅನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸರೆಂಡರ್ ಮಾಡಬಹುದು. ಹೀಗೆ ಮಾಡುವುದಕ್ಕೆ ಅಸೆಸಿಂಗ್ ಅಧಿಕಾರಿಗೆ (ಎಒ) ಅರ್ಜಿ ಬರೆಯಬೇಕು. ಯಾರ ಕಾರ್ಯವ್ಯಾಪ್ತಿಯಲ್ಲಿ ಪ್ಯಾನ್ ನೋಂದಣಿ ಆಗಿರುತ್ತದೋ, ಸರೆಂಡ್​ಗೆ ಮನವಿ ಸಲ್ಲಿಸಲಾಗಿರುತ್ತದೋ ಅವರಿಗೆ ಅರ್ಜಿ ಸಲ್ಲಿಸಬೇಕು.

ಆ ಪತ್ರದಲ್ಲಿ ಸರೆಂಡರ್ ಕಾರಣವನ್ನು ತಿಳಿಸಬೇಕು. ಹೆಸರು, ಪ್ಯಾನ್, ಮೃತರ ಸಾವಿನ ದಿನಾಂಕ, ಡೆತ್ ಸರ್ಟಿಫಿಕೇಟ್ ನಕಲು ಇವೆಲ್ಲವನ್ನೂ ಒಳಗೊಂಡಿರಬೇಕು. ಮೃತರ ಪ್ಯಾನ್ ಕಾರ್ಡ್ ಸರೆಂಡರ್ ಮಾಡಲೇಬೇಕು ಎಂಬ ಕಡ್ಡಾಯ ಏನಿಲ್ಲ. ಮುಂದೆ ಯಾವುದಾದರೂ ಉದ್ದೇಶಕ್ಕೆ ಪ್ಯಾನ್ ಬೇಕು ಎಂದಾದಲ್ಲಿ ಹಾಗೇ ಇರಿಸಿಕೊಳ್ಳಬಹುದು. ಒಂದು ವೇಳೆ ಭವಿಷ್ಯದಲ್ಲಿ ಅದರ ಅಗತ್ಯ ಇಲ್ಲ, ದುರುಪಯೋಗ ಆಗಬಹುದು ಎನಿಸಿದಲ್ಲಿ ತೆರಿಗೆ ಇಲಾಖೆಗೆ ಸರೆಂಡರ್ ಮಾಡಬಹುದು.

ಮತದಾರ ಗುರುತಿನ ಚೀಟಿ (ವೋಟರ್ ಐಡಿ ಕಾರ್ಡ್) ಆಧಾರ್, ಪ್ಯಾನ್​ ಕಾರ್ಡ್​ನಂತೆ ಅಲ್ಲದೆ ಕಾನೂನಿನ ಪ್ರಕಾರ, ವ್ಯಕ್ತಿಯ ಮರಣದ ನಂತರ ಮತದಾರ ಗುರುತಿನ ಚೀಟಿಯನ್ನು ರದ್ದು ಮಾಡುವುದಕ್ಕೆ ಅವಕಾಶ ಇದೆ. ಮೃತರ ಉತ್ತರಾಧಿಕಾರಿಗಳು ಅಥವಾ ಪ್ರತಿನಿಧಿಗಳು ಸ್ಥಳೀಯ ಚುನಾವಣೆ ಕಚೇರಿಗೆ ತೆರಳಬೇಕಾಗುತ್ತದೆ. ಎಲೆಕ್ಟೋರಲ್ ಕಾನೂನು ಅಡಿಯಲ್ಲಿ ಫಾರ್ಮ್ ನಂಬರ್ 7ರ ಜತೆಗೆ ಡೆತ್ ಸರ್ಟಿಫಿಕೇಟ್ ಸಲ್ಲಿಸಬೇಕು.

ಪಾಸ್​ಪೋರ್ಟ್ ಆಧಾರ್ ಮತ್ತು ಪ್ಯಾನ್ ಕಾರ್ಡ್​ನಂತೆಯೇ ಪಾಸ್​ಪೋರ್ಟ್ ಕೂಡ ಸರೆಂಡರ್​ ಮಾಡುವುದಕ್ಕೋ ಅಥವಾ ರದ್ದು ಮಾಡವುದಕ್ಕೋ ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದಕ್ಕೆ ಯಾವುದೇ ಕ್ರಮಗಳಿಲ್ಲ. ಒಂದು ಸಲ ಪಾಸ್​ಪೋರ್ಟ್ ಅವಧಿ ಮುಕ್ತಾಯ ಆದ ಮೇಲೆ ತಾನಾಗಿಯೇ ಎಕ್ಸ್​ಪೈರ್ ಆಗುತ್ತದೆ. ತಜ್ಞರ ಪ್ರಕಾರ, ಎಲ್ಲಿಯ ತನಕ ಪಾಸ್​ಪೋರ್ಟ್ ಅವಧಿ ಇರುತ್ತದೋ ಅಲ್ಲಿಯ ತನಕ ಇಟ್ಟುಕೊಂಡಿರಬೇಕು.

ಡ್ರೈವಿಂಗ್ ಲೈಸೆನ್ಸ್ ಮೃತರ ಡ್ರೈವಿಂಗ್ ಲೈಸೆನ್ಸ್ ರದ್ದು ಅಥವಾ ಸರೆಂಡರ್​ಗೆ ಯಾವುದೇ ಅವಕಾಶ ಇಲ್ಲ. ಒಂದೊಂದು ರಾಜ್ಯ ಒಂದೊಂದು ರೀತಿಯಲ್ಲಿ ವಿತರಣೆ, ಅಮಾನತು ಹಾಗೂ ರದ್ದನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತವೆ. ಆದ್ದರಿಂದ ಆಯಾ ನಿರ್ದಿಷ್ಟ ರಾಜ್ಯದಲ್ಲಿನ ನಿಯಮಾವಳಿಗಳನ್ನು ವಿಚಾರಿಸಬೇಕು. ಆರ್​ಟಿಒಗೆ ಭೇಟಿ ನೀಡಿ, ರದ್ದಿನ ಬಗ್ಗೆ ವಿಚಾರಿಸಬೇಕು. ಇಲ್ಲಿ ತಿಳಿಸಬೇಕಾದ ಅಂಶ ಏನೆಂದರೆ, ಎಲ್ಲ ದಾಖಲಾತಿಗಳನ್ನು ಸುರಕ್ಷಿತವಾಗಿ ಇಡಬೇಕು. ದುಷ್ಕರ್ಮಿಗಳ ಕೈಗೆ ಸಿಕ್ಕಲ್ಲಿ ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Aadhaar Card: ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ

ಇದನ್ನೂ ಓದಿ: How to check PAN- Aadhaar linking: ಆಧಾರ್- ಪ್ಯಾನ್ ಜೋಡಣೆಗೆ ಜೂನ್ 30 ಕೊನೆ ದಿನ; ಇಲ್ಲಿದೆ ಹಂತಹಂತ ವಿವರಣೆ

(What legal heirs and representatives should do to government documents after demise of an individual)

Published On - 6:31 pm, Sat, 12 June 21

ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್