Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Card: ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ

How to Update Photo on Aadhaar Card: ಆಧಾರ್ ಕಾರ್ಡ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಾವಳಿಗಳೇನು? ಹಂತಹಂತವಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

Aadhaar Card: ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jun 07, 2021 | 8:35 AM

ಬ್ಯಾಂಕ್​ನಲ್ಲಿ ಖಾತೆ ತೆರೆಯುವುದರಿಂದ ಆರಂಭಗೊಂಡು, ಹೊಸ ಫೋನ್ ಸಂಪರ್ಕದ ತನಕ ಎಲ್ಲಕ್ಕೂ ಆಧಾರ್ ಕಾರ್ಡ್ ಕಡ್ಡಾಯ. ಈ 12 ಅಂಕಿಯ ಗುರುತಿನ ಚೀಟಿಯಲ್ಲಿ ಫೋಟೋ ಅಪ್​ಡೇಟ್ ಮಾಡುವುದು ಹೇಗೆ ಎಂಬುದು ಹಲವರ ಪ್ರಶ್ನೆ. ಅದೇ ಪ್ರಶ್ನೆ ನಿಮಗೂ ಇದ್ದಲ್ಲಿ ಅದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ. ಕೆಲವೇ ಹಂತಗಳನ್ನು ಅನುಸರಿಸಿ, ಆಧಾರ್ ಕಾರ್ಡ್​ನಲ್ಲಿ ಫೋಟೋ ಬದಲಿಸುವುದಕ್ಕೆ ಮಾಹಿತಿ ಇಲ್ಲಿದೆ. ಆಧಾರ್​ನಲ್ಲಿ ಫೋಟೋ ಅಪ್​ಡೇಟ್ ಅಥವಾ ಬದಲಾವಣೆ ಮಾಡುವುದರ ಹಂತ ಹಂತವಾದ ವಿವರಣೆ ಹೀಗಿದೆ:

ಹಂತ 1: ಸಮೀಪದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಹಂತ 2: UIDAI ವೆಬ್​ಸೈಟ್​ನಿಂದ ಆಧಾರ್​ ನೋಂದಣಿ/ತಿದ್ದುಪಡಿ/ಅಪ್​ಡೇಟ್ ಅರ್ಜಿಯನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಅದಕ್ಕೆ ಪೋರ್ಟಲ್ ಲಿಂಕ್: https://ssup.uidai.gov.in/ssup/ ಹಂತ 3: ಅಪ್​ಡೇಟ್ ಮಾಡಬೇಕಾದ ಫೀಲ್ಡ್​ಗಳನ್ನು ಆಯ್ಕೆ ಮಾಡಿರಿ. ಫೋಟೋಗ್ರಾಫ್ ಜತೆಗೆ ತಮ್ಮ ಹೆಸರು, ವಿಳಾಸ ಅಥವಾ ಬೇರೆ ಯಾವುದಾದರೂ ಮಾಹಿತಿ ಅಪ್​ಡೇಟ್ ಮಾಡಿ. ಹಂತ 4: ಆಯ್ದ ಫೀಲ್ಡ್​ಗಳಲ್ಲಿ ಡೇಟಾ ಭರ್ತಿ ಮಾಡಿ ಮತ್ತು ಕೇಂದ್ರದಲ್ಲಿ ಇರುವ ಅಧಿಕಾರಿಗೆ ಸಲ್ಲಿಸಿ. ಹಂತ 5: ಬಯೋಮೆಟ್ರಿಕ್ ಮಾಹಿತಿಗಳಾದ ಐರಿಸ್, ಬೆರಳಚ್ಚು, ಫೇಷಿಯಲ್ ಫೋಟೋಗ್ರಾಫ್ ಇಂಥದ್ದನ್ನು ಕೇಳಲಾಗುತ್ತದೆ. ಹಂತ 6: ಮಾಹಿತಿಯನ್ನು ಅಪ್​ಡೇಟ್ ಮಾಡಿ, ಕೇಂದ್ರದಲ್ಲಿ 100 ರೂಪಾಯಿ ಶುಲ್ಕ ಪಾವತಿಸಿ ಹಂತ 7: ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಅಕ್​ನಾಲೆಡ್ಜ್​ಮೆಂಟ್ ಸ್ಲಿಪ್ ನೀಡಲಾಗುತ್ತದೆ. ಅದರಲ್ಲಿ ಅಪ್​ಡೇಟ್ ರಿಕ್ವೆಸ್ಟ್ ನಂಬರ್ (URN) ಇರುತ್ತದೆ. ಹಂತ 8: ಆ ನಂತರ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಆ URN ಬಳಸಬಹುದು. ಒಂದು ವಾರದೊಳಗೆ ಹೊಸ ಆಧಾರ್ ಕಾರ್ಡ್ ಮನೆಗೆ ಬರುತ್ತದೆ. ಹಂತ 9: UIDAI ಪೋರ್ಟಲ್ ಮೂಲಕ ಕೂಡ ಡೌನ್​ಲೋಡ್ ಮಾಡಬಹುದು. ಲಿಂಕ್: https://uidai.gov.in/my-aadhaar/get-aadhaar.html

ಆಧಾರ್​ ಕಾರ್ಡ್​ನಲ್ಲಿ ಫೋಟೋಗ್ರಾಫ್ ಅಪ್​ಡೇಟ್ ಮಾಡಬೇಕಾದ ಗಮನಿಸಬೇಕಾದ ಅಂಶಗಳಿವು: 1) ಆಧಾರ್ ಕಾರ್ಡ್​ನಲ್ಲಿ ಫೋಟೋ ಬದಲಿಸುವುದಕ್ಕೆ ಯಾವುದೇ ದಾಖಲಾತಿ ಬೇಡ 2) ನೀವು ಯಾವುದೇ ಫೋಟೋಗ್ರಾಫ್ ಸಲ್ಲಿಸುವ ಅಗತ್ಯ ಇಲ್ಲ. ಸ್ಥಳದಲ್ಲೇ ಅಧಿಕಾರಿಗಳು ವೆಬ್​ಕ್ಯಾಮ್ ಬಳಸಿ ಫೋಟೋ ತೆಗೆಯುತ್ತಾರೆ. 3) ಆಧಾರ್​ನಲ್ಲಿ ಮಾಹಿತಿ ಅಪ್​ಡೇಟ್ ಆಗುವುದಕ್ಕೆ 90 ದಿನದ ತನಕ ಸಮಯ ಬೇಕಾಗುತ್ತದೆ. 4) ಅರ್ಜಿ ಸಲ್ಲಿಸಿದ ಮೇಲೆ ನೀಡುವ URN ಮೂಲಕ ಆಧಾರ್ ಅಪ್​ಡೇಟ್​ ಸ್ಥಿತಿ ತಿಳಿಯಬಹುದು.

ಇದನ್ನೂ ಓದಿ: How to check PAN- Aadhaar linking: ಆಧಾರ್- ಪ್ಯಾನ್ ಜೋಡಣೆಗೆ ಜೂನ್ 30 ಕೊನೆ ದಿನ; ಇಲ್ಲಿದೆ ಹಂತಹಂತ ವಿವರಣೆ

(How to update photo on Aadhaar card here is the step by step details to follow)

Published On - 1:15 pm, Sat, 5 June 21

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ