How to check PAN- Aadhaar linking: ಆಧಾರ್- ಪ್ಯಾನ್ ಜೋಡಣೆಗೆ ಜೂನ್ 30 ಕೊನೆ ದಿನ; ಇಲ್ಲಿದೆ ಹಂತಹಂತ ವಿವರಣೆ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆಗೆ ಜೂನ್ 30, 2021 ಗಡುವು ಇದೆ. ಅಷ್ಟರೊಳಗೆ ಮಾಡದಿದ್ದಲ್ಲಿ ರೂ. 1000 ದಂಡ ಪಾವತಿಸಬೇಕಾಗುತ್ತದೆ. ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ.

How to check PAN- Aadhaar linking: ಆಧಾರ್- ಪ್ಯಾನ್ ಜೋಡಣೆಗೆ ಜೂನ್ 30 ಕೊನೆ ದಿನ; ಇಲ್ಲಿದೆ ಹಂತಹಂತ ವಿವರಣೆ
ಆಧಾರ್ ಕಾರ್ಡ್
Follow us
TV9 Web
| Updated By: Srinivas Mata

Updated on: Jun 05, 2021 | 11:57 AM

ಕೊರೊನಾ ಸೋಂಕು ಪ್ರಕರಣಗಳು ದೇಶದಲ್ಲಿ ವ್ಯಾಪಕವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಗಡುವನ್ನು ವಿಸ್ತರಿಸಲಾಯಿತು. ಇದಕ್ಕೂ ಮುಂಚೆ ಮಾರ್ಚ್ 31ನೇ ತಾರೀಕು ಎಂದಿದ್ದದ್ದು ಆ ನಂತರ ಜೂನ್ 30ನೇ ತಾರೀಕಿಗೆ ಮುಂದಕ್ಕೆ ಹೋಯಿತು. ಈ ನಿರ್ಧಾರದಿಂದ ಜನರು ಸಹ ನಿರಾಳವಾದರು. ಇದೀಗ ಆ ಸಮಯ ಕೂಡ ಹತ್ತಿರ ಬರುತ್ತಿದೆ. ಆಧಾರ್- ಪ್ಯಾನ್ ಜೋಡಣೆಯನ್ನು ಮಾಡುವುದಕ್ಕೆ ಪೂರ್ತಿಯಾಗಿ ಒಂದು ತಿಂಗಳು ಸಹ ಸಮಯ ಇಲ್ಲ. ಒಂದು ವೇಳೆ ಈ ಜವಾಬ್ದಾರಿಯನ್ನು ಪೂರ್ತಿ ಮಾಡದಿದ್ದಲ್ಲಿ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಅಂಥವರ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಣೆಯನ್ನೂ ನಿಲ್ಲಿಸುತ್ತದೆ. ಈ ಹೊಸ ಮಾರ್ಗದರ್ಶಿ ಸೂತ್ರವನ್ನು ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 234H ಅಡಿಯಲ್ಲಿ ತರಲಾಗಿದೆ. ಅದನ್ನು ಈಚೆಗೆ ಆರ್ಥಿಕ ಮಸೂದೆ 2021ಯನ್ನು ಅನುಮೋದಿಸುವ ವೇಳೆಯಲ್ಲಿ ಸೇರ್ಪಡೆ ಮಾಡಲಾಗಿದೆ.

ಒಂದು ಸಲ ಪ್ಯಾನ್ ಕಾರ್ಡ್​ ಕಾರ್ಯ ನಿರ್ವಹಿಸುವುದಿಲ್ಲ ಅಂತಾದರೆ ಆ ವ್ಯಕ್ತಿಗೆ ಹಣಕಾಸು ವ್ಯವಹಾರಗಳನ್ನು ನಡೆಸುವುದಕ್ಕೆ ಆಗಲ್ಲ. ಆಧಾರ್ ಕಾರ್ಡ್ ಮತ್ತು ಪ್ಯಾನ್​ ಕಾರ್ಡ್ ಸಂಖ್ಯೆಗಳು ಎರಡೂ ಬಹಳ ಮುಖ್ಯವಾದ ಕೆಲಸಗಳಿಗೆ ಅಂತಲೇ ಬಳಸಲಾಗುತ್ತದೆ. ಆಧಾರ್ ಅನ್ನು ಐಟಿಆರ್ ಫೈಲಿಂಗ್​ಗೆ, ಇನ್ನು ಸರ್ಕಾರದಿಂದ ಬರಬೇಕಾದ ಎಲ್​ಪಿಜಿ ಸಬ್ಸಿಡಿ, ಸ್ಕಾಲರ್​ಷಿಪ್ ಮತ್ತು ಪೆನ್ಷನ್​ನಂಥ ಅನುಕೂಲಗಳನ್ನು ಪಡೆಯಲು ಪ್ಯಾನ್​ ಕಾರ್ಡ್​ ಅವಶ್ಯ. ಆದಾಯ ತೆರಿಗೆ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆಧಾರ್- ಪ್ಯಾನ್ ಜೋಡಣೆಗೆ ಜೂನ್ 30ನೇ ತಾರೀಕಿನ ತನಕ ಅವಧಿ ವಿಸ್ತರಣೆ ಮಾಡಿದ ಬಗ್ಗೆ ಮಾಹಿತಿ ಇದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡುವುದು ಹೇಗೆ? ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಹಲವು ವಿಧಾನ ಇದೆ. ಅದರಲ್ಲಿ ಒಂದು, 567678 ಅಥವಾ 56161ಗೆ ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಲಿಂಕ್ ಮಾಡುವುದು. ಇ-ಫೈಲಿಂಗ್ ವೆಬ್​ಸೈಟ್ ಮೂಲಕವೂ ಇದನ್ನು ಮಾಡಬಹುದು. ಪ್ಯಾನ್ ಸರ್ವೀಸ್​ ಸೆಂಟರ್​ನಲ್ಲಿ ಮ್ಯಾನ್ಯುಯೆಲ್ ಆಗಿಯೇ ನಿರ್ದಿಷ್ಟ ಅರ್ಜಿ ತುಂಬುವ ಮೂಲಕ ಜೋಡಣೆ ಮಾಡಬಹುದು.

ಪ್ಯಾನ್- ಆಧಾರ್ ಜೋಡಣೆ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ? ಹಂತ 1: ಯಾವುದಾದರೂ ಇಂಟರ್​ನೆಟ್ ಬ್ರೌಸರ್ ತೆರೆಯಿರಿ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕೃತ ಸೈಟ್​ಗೆ ತೆರಳಿರಿ. ಹಂತ 2: ವೆಬ್​ಸೈಟ್ ಹೋಮ್​ಪೇಜ್​ನಲ್ಲಿ Quick Links ವಿಭಾಗದ ಅಡಿಯಲ್ಲಿ “Link Aadhaar” ಎಂಬುದು ಇರುತ್ತದೆ. ಹಂತ 3: ಇದು ಹೊಸ ವಿಂಡೋಗೆ ಒಯ್ಯುತ್ತದೆ. ಒಂದು ಬಟನ್ “Click here to view the status if you have already submitted link Aadhaar request” ಎಂಬುದು ಕಾಣಿಸುತ್ತದೆ. ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ವೆಬ್​ಸೈಟ್​ನಲ್ಲಿ ನಿಮ್ಮ ಆಧಾರ್- ಪ್ಯಾನ್ ಜೋಡಣೆ ಆಗಿದೆಯಾ ಎಂಬ ಸ್ಥಿತಿ (Status) ಕಾಣುತ್ತದೆ.

ಒಂದು ವೇಳೆ ಅಂದುಕೊಂಡಂತೆ ಆಗದಿದ್ದಲ್ಲಿ ಪ್ಯಾನ್- ಆಧಾರ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಅದೇ ಪುಟದಲ್ಲಿ ಇರುವ ಫಾರ್ಮ್ ಅನ್ನು ಭರ್ತಿ ಮಾಡಬಹುದು.

ಎಸ್ಸೆಮ್ಮೆಸ್ ಮೂಲಕ ಕೂಡ ಸ್ಥಿತಿ ಪರಿಶೀಲಿಸುವುದು ಹೀಗೆ: ಹಂತ 1: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ, ಸ್ಪೇಸ್ ನೀಡಿದ ಮೇಲೆ ಪ್ಯಾನ್​ ನಂಬರ್ ಟೈಪ್ ಮಾಡಬೇಕು. ಹಂತ 2: 567678 ಅಥವಾ 56161ಗೆ ಈ ಸಂದೇಶ ಕಳುಹಿಸಿ ಹಂತ 3: ರಿಪ್ಲೈಯಾಗಿ ಸ್ಟೇಟಸ್ ಬರಲಿದೆ

ಇದನ್ನೂ ಓದಿ: How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್​ ಖಾತೆ ಜೋಡಣೆ ಮಾಡುವುದು ಹೇಗೆ?

(PAN and Aadhaar linking mandatory before June 30, 2021. Here is the step by step details to linking)