ವಿಜಯ್ ಮಲ್ಯ ಆಸ್ತಿ, ಸೆಕ್ಯೂರಿಟೀಸ್ ಹರಾಜಿಗೆ ಬ್ಯಾಂಕ್ಗಳಿಗೆ ಅನುಮತಿ ನೀಡಿದ ಪಿಎಂಎಲ್ಎ ಕೋರ್ಟ್
ವಿಜಯ್ ಮಲ್ಯರಿಂದ ಬರಬೇಕಾದ ಸಾಲವನ್ನು ವಸೂಲಿ ಮಾಡುವುದಕ್ಕೆ 5600 ಕೋಟಿ ರೂಪಾಯಿಯ ಸೆಕ್ಯೂರಿಟೀಸ್, ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಬ್ಯಾಂಕ್ಗಳಿಗೆ ಪಿಎಂಎಲ್ಎ ಕೋರ್ಟ್ ಅನುಮತಿ ನೀಡಿದೆ.
ದೇಶದಿಂದ ಓಡಿಹೋಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟೀಸ್ಗಳನ್ನು ಮಾರಾಟ ಮಾಡುವುದಕ್ಕೆ ಪಿಎಂಎಲ್ಎ ಕೋರ್ಟ್ನಿಂದ ಬ್ಯಾಂಕ್ಗಳಿಗೆ ಅನುಮತಿ ನೀಡಲಾಗಿದೆ. ವಿಜಯ್ ಮಲ್ಯರಿಂದ ಬರಬೇಕಾದ 5600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ವಸೂಲಿ ಮಾಡಬೇಕಿರುವುದರಿಂದ ಈ ಅನುಮತಿ ನೀಡಲಾಗಿದೆ. ಈ ಹಿಂದೆ ಇದು ಜಾರಿ ನಿರ್ದೇಶನಾಲಯ (Enforcement Directorate) ಅಡಿಯಲ್ಲಿ ಇತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ.
ಇದೀಗ ಪ್ರಮುಖ ಬ್ಯಾಂಕ್ ಆಸ್ತಿ ಮಾರಾಟಕ್ಕೆ ಮುಂದಾಗಲಿದೆ. ಕಿಂಗ್ಫಿಷರ್ಗೆ ನೀಡಿದ ಸಾಲದಲ್ಲಿ ಪಿಎನ್ಬಿ ಹೆಚ್ಚಿನ ಮೊತ್ತವನ್ನು ನೀಡಿಲ್ಲ. ಪ್ರಮುಖ ಬ್ಯಾಂಕ್ನಿಂದ ಆಸ್ತಿ ಮಾರಾಟ ಮಾಡಿದಲ್ಲಿ ನಮ್ಮ ಪಾಲನ್ನು ಪಡೆಯುತ್ತೇವೆ ಎಂದು ರಾವ್ ಹೇಳಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು ಈಗ ದೇಶಭ್ರಷ್ಟ ವಿಜಯ್ ಮಲ್ಯ ಆಸ್ತಿಯನ್ನು ಮಾರಾಟ ಮಾಡಬಹುದು. ಕಿಂಗ್ಫಿಷರ್ಗಾಗಿ ಬ್ಯಾಂಕ್ಗಳ ಒಕ್ಕೂಟದಿಂದ ಸಾಲ ನೀಡಲಾಗಿತ್ತು. ಒಟ್ಟು 11 ಬ್ಯಾಂಕ್ಗಳ ಒಕ್ಕೂಟವು ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಕೋರ್ಟ್ ಬಳೆ ತೆರಳಿದ್ದವು. ಜಾರಿ ನಿರ್ದೇಶನಾಲಯದಿಂದ ವಶಪಡಿಸಿಕೊಂಡ ಆಸ್ತಿಯನ್ನು ಮರಳಿಸಬೇಕು ಎಂದು ಕೇಳಲಾಗಿತ್ತು.
ಈ ಹನ್ನೊಂದು ಬ್ಯಾಂಕ್ಗಳ ಒಕ್ಕೂಟದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಒಂದು. “ವಿಜಯಲ್ ಮಲ್ಯಗೆ ಸೇರಿದ 5600 ಕೋಟಿ ರೂಪಾಯಿ ಮೌಲ್ಯದ ಸೆಕ್ಯೂರಿಟೀಸ್, ರಿಯಲ್ ಎಸ್ಟೇಟ್ ಆಸ್ತಿ ಮಾರಾಟಕ್ಕೆ ಪಿಎಂಎಲ್ಎ ಕೋರ್ಟ್ ಅನುಮತಿ ನೀಡಿದೆ. ಈ ಹಿಂದೆ ಅದು ಜಾರಿ ನಿರ್ದೇಶನಾಲಯದ ಬಳಿ ಇತ್ತು,” ಎಂದು ಪಿಎನ್ಬಿ ಮ್ಯಾನೇಜಿಂಗ್ ಡೈರೆಕ್ಟರ್ ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ. ಈಗ ನೇತೃತ್ವ ವಹಿಸಿರುವ ಪ್ರಮುಖ ಬ್ಯಾಂಕ್ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಲಿದೆ. ಪಿಎನ್ಬಿಯಿಂದ ಹೆಚ್ಚಿನ ಸಾಲವನ್ನು ಕಿಂಗ್ಫಿಷರ್ಗೆ ನೀಡಿಲ್ಲ. ಒಂದು ಸಲ ಆಸ್ತಿ ಮಾರಾಟ ಮಾಡಿದ ಮೇಲೆ ಬರುವ ಹಣದಲ್ಲಿ ನಾವು ಸಹ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿರುವ ಪಿಎಂಎಲ್ಎ ಕೋರ್ಟ್ ಹೇಳಿರುವ ಪ್ರಕಾರ, ವಿಜಯ್ ಮಲ್ಯಗೆ ಸೇರಿದ 5646.54 ಕೋಟಿ ಮೌಲ್ಯದ ಆಸ್ತಿಯನ್ನು ಮತ್ತೆ ಬ್ಯಾಂಕ್ಗಳಿಗೆ ವಹಿಸಿಕೊಡುವಂತೆ ತಿಳಿಸಲಾಗಿದೆ. ವರದಿಗಳ ಪ್ರಕಾರ, ಬ್ಯಾಂಕ್ಗಳು ಸಾಂಕೇತಿಕವಾಗಿ ಆಸ್ತಿಗಳ ಸ್ವಾಧೀನ ಪಡೆಯುತ್ತವೆ. ಅದಕ್ಕೂ ಮುನ್ನ ಕಾನೂನು ನಿಯಮಾವಳಿಗಳು ಪಾಲನೆ ಆಗಬೇಕು.
(PMLA court allowed banks to auction Vijay Mallya’s property in India to recover loan)
Published On - 3:19 pm, Sat, 5 June 21