DHFL trading suspend: ಡಿಎಚ್​ಎಫ್ಎಲ್ ಷೇರು ವಹಿವಾಟು ಅಮಾನತು ಮಾಡಿದ ಬಿಎಸ್​ಇ, ಎನ್​ಎಸ್​ಇ

ಜೂನ್ 14, 2021ರಿಂದ ಅನ್ವಯ ಆಗುವಂತೆ ಡಿಎಚ್​ಎಫ್ಎಲ್ ಷೇರು ವಹಿವಾಟನ್ನು ಎನ್​ಎಸ್​ಇ ಮತ್ತು ಬಿಎಸ್​ಇಯಲ್ಲಿ ಅಮಾನತು ಮಾಡಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣ ಇಲ್ಲಿದೆ.

DHFL trading suspend: ಡಿಎಚ್​ಎಫ್ಎಲ್ ಷೇರು ವಹಿವಾಟು ಅಮಾನತು ಮಾಡಿದ ಬಿಎಸ್​ಇ, ಎನ್​ಎಸ್​ಇ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 13, 2021 | 12:32 AM

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಇಂಡಿಯಾ (ಎನ್​ಎಸ್​ಇ)ನಿಂದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್​ಎಫ್​ಎಲ್​) ಈಕ್ವಿಟಿ ಷೇರು ವಹಿವಾಟನ್ನು ಅಮಾನತು ಮಾಡಲಾಗಿದೆ. ಈ ನಿಷೇಧವು ಜೂನ್ 14, 2021ರಿಂದ ಜಾರಿಗೆ ಬರಲಿದೆ ಎಂದು ಎರಡು ಎಕ್ಸ್​ಚೇಂಜ್​ನ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಿರುವಂತೆ, ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣ (NCLT), ಮುಂಬೈ ಪೀಠವು ಒಪ್ಪಿಕೊಂಡಿರುವಂಥ ತೀರುವಳಿ ಯೋಜನೆ ಬಗ್ಗೆ ಜೂನ್ 8ನೇ ತಾರೀಕಿನಂದು ಡಿಎಚ್​ಎಫ್​ಎಲ್​ನಿಂದ ಎಕ್ಸ್​ಚೇಂಜ್​ಗಳಿಗೆ ಮಾಹಿತಿ ನೀಡಲಾಗಿದೆ ಎಂದು ಬಿಎಸ್​ಇ ಮತ್ತು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರಿಂದ ಕಂಪೆನಿಯ ಈಕ್ವಿಟಿ ಷೇರುಗಳು ಡಿಲಿಸ್ಟ್ ಆಗುತ್ತವೆ ಎನ್ನಲಾಗಿದೆ.

ಡಿಎಚ್​ಎಫ್​ಎಲ್​ಗೆ ಪಿರಾಮಲ್ ಸಮೂಹ ಯಶಸ್ವಿ ಬಿಡ್​ ಮಾಡಿದ್ದು, ತೀರುವಳಿ ಯೋಜನೆಗೆ ಎನ್​ಸಿಎಲ್​ಟಿ ಒಪ್ಪಿಗೆ ನೀಡಿದೆ. ಡಿಎಚ್​ಎಫ್​ಎಲ್​ ಷೇರಿನ ವಹಿವಾಟು ನಡೆಸಲು ಒಪ್ಪಿಗೆ ನೀಡಿದ್ದಾಗಿಯೂ ಷೇರಿಗೆ ಶೂನ್ಯ ಮೌಲ್ಯ ಎಂದು ಕಟ್ಟಲಾಗಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಿರುವಂತೆ, ಡಿಎಚ್​ಎಫ್​ಎಲ್ ಜೂನ್ 9ರಂದು ಹೇಳಿರುವ ಪ್ರಕಾರ, ಈಕ್ವಿಟಿ ಷೇರಿಗೆ ಯಾವುದೇ ಮೌಲ್ಯವಿಲ್ಲ. ಇದು ಕಂಪೆನಿಯ ಲಿಕ್ವಿಡೇಷನ್ ಮೌಲ್ಯದ ಪ್ರಕಾರ ಆಗಿರುವಂಥದ್ದು. ಇದನ್ನು ಅಂದಾಜು ಮಾಡಿರುವವರು ನೋಂದಾಯಿತ ಮೌಲ್ಯಮಾಪಕರು. ಅವರನ್ನು ನೇಮಕ ಮಾಡಿರುವುದು Insolvency and Bankruptcy Board of India (Insolvency Resolution Process for Corporate Persons) ನಿಯಮಾವಳಿ, 2016 ಅಡಿಯಲ್ಲಿ.

ಇನ್ನೂ ಮುಂದುವರಿದು, ಕಂಪೆನಿ ಹೇಳಿರುವಂತೆ ತೀರುವಳಿ ಯೋಜನೆಗೆ ಒಪ್ಪಿರುವಂಥ ಎನ್​ಸಿಎಲ್​ಟಿ ಲಿಖಿತ ಆದೇಶಕ್ಕಾಗಿ ಕಾಯಲಾಗುತ್ತಿದೆ. ಉಳಿದ ಮಾಹಿತಿಗಳು ಉಳಿದಂತೆ ಹಾಗೇ ಇವೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಡಿಎಚ್​ಎಫ್​ಎಲ್​ ಷೇರನ್ನು ಈ ವಾರದ ಆರಂಭದಲ್ಲಿ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಜತೆಗೆ ಗರಿಷ್ಠ ಮಟ್ಟ ಶೇ 10ರಷ್ಟು ಏರಿಕೆಗೂ ಅನುಮತಿಸಿತ್ತು. ಎನ್​ಎಸ್​ಇಯಲ್ಲಿ 14 ಕೋಟಿ ಷೇರು ವಹಿವಾಟಾಗಿತ್ತು. ಜೂನ್​ 8ನೇ ತಾರೀಕಿನಂದು 200 ಕೊಟಿ ಮೌಲ್ಯದ 9 ಕೋಟಿ ಷೇರುಗಳನ್ನು ಹೂಡಿಕೆದಾರರು ಡೆಲಿವರಿ ತೆಗೆದುಕೊಂಡಿದ್ದರು.

ಈಕ್ವಿಟಿ ಷೇರುಗಳ ಬೆಲೆ ಸೊನ್ನೆ ಎಂದು ತಿಳಿಸಿದ ಮೇಲೆ ಡಿಎಚ್​ಎಫ್​ಎಲ್ ಷೇರುಗಳನ್ನು ವಹಿವಾಟು ನಡೆಸುವುದಕ್ಕೆ ಎರಡೂ ಎಕ್ಸ್​ಚೇಂಜ್​ನಲ್ಲಿ ಅವಕಾಶ ನೀಡಲಾಗಿತ್ತು. ಜೂನ್ 9ನೇ ತಾರೀಕಿನಂದು ಡಿಎಚ್​ಎಫ್​ಎಲ್​ನ 50 ಲಕ್ಷ ಷೇರು ವಹಿವಾಟಾಗಿತ್ತು. ಈ ಬೆಳವಣಿಗೆಗೆ ತಜ್ಞರು ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಹೂಡಿಕೆದಾರರ ಹಿತ ಕಾಯುವ ಕಾರಣಕ್ಕೆ ಆದಷ್ಟು ಬೇಗ ಡಿಎಚ್​ಎಫ್​ಎಲ್​ ಷೇರಿನ ವಹಿವಾಟು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಡಿಎಚ್​ಎಫ್​ಎಲ್ ಎಂಬುದು ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿ. ಮುಖ್ಯವಾಗಿ ಹೌಸಿಂಗ್ ಫೈನಾನ್ಸ್ ಮೇಲೆ ಗಮನ ಹರಿಸುತ್ತಿತ್ತು/ 2019ರ ಮಧ್ಯಭಾಗದಲ್ಲಿ ಕಂಪೆನಿಯಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿತು. ಕಂಪೆನಿಯ ಕಮರ್ಷಿಯಲ್ ಪೇಪರ್, ಅಲ್ಪಾವಧಿಯ ಸಾಲಪತ್ರಗಳನ್ನು ಕಳೆದ ವರ್ಷದ ಜೂನ್​ನಲ್ಲಿ ಡಿಗೆ, ಅಂದರೆ ಡಿಫಾಲ್ಟ್​ಗೆ (ಮರುಪಾವತಿಸದಿರುವುದು) ಇಳಿಸಲಾಯಿತು. ಕಂಪೆನಿಯಿಂದ ಹಲವು ಪಾವತಿ ಮಾಡಲು ಆಗಲಿಲ್ಲ. ಕಂಪೆನಿಯು ದಿವಾಳಿ ಆದ ಮೇಲೆ ಅಂದಾಜು 90,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಾಲಗಾರರಿಗೆ ಬಾಕಿ ಇತ್ತು. 2019ರ ನವೆಂಬರ್​ನಲ್ಲಿ ಆರ್​ಬಿಐನಿಂದ ಡಿಎಚ್​ಎಫ್​ಎಲ್ ತೀರುವಳಿಗೆ ಐಬಿಸಿ (ಇನ್​ಸಾಲ್ವೆನ್ಸಿ ಅಂಡ್ ಬ್ಯಾಂಕ್​ರಪ್ಸಿ ಕೋಡ್)ಗೆ ಸೂಚಿಸಲಾಯಿತು. ಅಡಮಾನದ ಮೇಲೆ ಸಾಲ ನೀಡುವ ವ್ಯವಹಾರ ಮಾಡುವ ಸಂಸ್ಥೆಯನ್ನು ಐಬಿಸಿಗೆ ಸೂಚಿಸಿದ ಮೂರನೇ ಸಂಸ್ಥೆ ಡಿಎಚ್​ಎಫ್​ಎಲ್. ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದಿಂದಲೇ ಎನ್​ಸಿಎಲ್​ಟಿಗೆ ರೆಫರ್​ ಮಾಡಿದ ಮೊದಲ ಕಂಪೆನಿ ಕೂಡ ಡಿಎಚ್​ಎಫ್​ಎಲ್.

ಇದನ್ನೂ ಓದಿ: ಡಿಎಚ್​ಎಫ್​ಎಲ್​ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು

(DHFL trading in shares suspend by BSE and NSE from June 14, 2021. Here is the reasons behind explained)

Published On - 12:27 am, Sun, 13 June 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್