ಜನರ ಆರೋಗ್ಯ ಆರೈಕೆಗೆ ಸರ್ಕಾರದ ವೆಚ್ಚ ಒಂದು ದಶಕದಲ್ಲಿ ಮೂರು ಪಟ್ಟು ಏರಿಕೆ; ಜನರ ಜೇಬಿಗಿಂತ ಸರ್ಕಾರದ ವೆಚ್ಚ ಹೆಚ್ಚು

ಆರೋಗ್ಯ ಆರೈಕೆಗಾಗಿ ಜನರು ಮಾಡುವ ವೆಚ್ಚ ಗಣನೀಯವಾಗಿ ತಗ್ಗಿದೆ. ಒಟ್ಟಾರೆ ಆರೋಗ್ಯ ವೆಚ್ಚದಲ್ಲಿ ಜನರ ಪಾಲು 2013-14ರಲ್ಲಿ ಶೇ. 64.2ರಷ್ಟು ಇದ್ದದ್ದು 2023-24ರಲ್ಲಿ ಶೇ. 42.7ಕ್ಕೆ ಇಳಿದಿದೆ. ಇದೇ ವೇಳೆ, ದೇಶದ ಆರೋಗ್ಯ ವೆಚ್ಚದಲ್ಲಿ ಸರ್ಕಾರದ ಪಾಲು ಗಣನೀಯವಾಗಿ ಹೆಚ್ಚಿದೆ. 2013-14 ಮತ್ತು 2023-24ರ ನಡುವೆ ಸರ್ಕಾರದ ಆರೋಗ್ಯ ವೆಚ್ಚ ಮೂರು ಪಟ್ಟು ಹೆಚ್ಚಿದೆ.

ಜನರ ಆರೋಗ್ಯ ಆರೈಕೆಗೆ ಸರ್ಕಾರದ ವೆಚ್ಚ ಒಂದು ದಶಕದಲ್ಲಿ ಮೂರು ಪಟ್ಟು ಏರಿಕೆ; ಜನರ ಜೇಬಿಗಿಂತ ಸರ್ಕಾರದ ವೆಚ್ಚ ಹೆಚ್ಚು
ಆರೋಗ್ಯ ವೆಚ್ಚ
Image Credit source: PTI

Updated on: Nov 16, 2026 | 1:36 PM

ನವದೆಹಲಿ, ನವೆಂಬರ್ 16: ಜನರಿಗಾಗಿ ಸರ್ಕಾರ ಮಾಡುತ್ತಿರುವ ವೆಚ್ಚ ಬಹಳ ವೇಗವಾಗಿ ಹೆಚ್ಚುತ್ತಿದೆ. ಒಂದು ದಶಕದಲ್ಲಿ ಇದು ಮೂರು ಪಟ್​ಟು ಹೆಚ್ಚುತ್ತಿದೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಇದೇ ವೇಳೆ, ಭಾರತೀಯ ಕುಟುಂಬಗಳು ಆರೋಗ್ಯ ಆರೈಕೆಗಾಗಿ ಮಾಡುತ್ತಿರುವ ವೆಚ್ಚ ಕಡಿಮೆ ಆಗಿದೆ. ಈಗ ಜನರ ಆರೋಗ್ಯಕ್ಕಾಗಿ ಜನರಿಗಿಂತ ಹೆಚ್ಚು ವೆಚ್ಚವನ್ನು ಸರ್ಕಾರ ಮಾಡುತ್ತಿದೆ. ಅಂದರೆ, ಸರ್ಕಾರದ ಆರೋಗ್ಯ ವಿಮಾ ಸುರಕ್ಷತೆ ಮತ್ತು ಆರೋಗ್ಯ ಯೋಜನೆಗಳು ಜನಸಾಮಾನ್ಯರನ್ನು ತಲುಪುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಸರ್ಕಾರದ ಆರೋಗ್ಯ ವೆಚ್ಚ 2013-14ರಲ್ಲಿ 1.30 ಟ್ರಿಲಿಯನ್ ಡಾಲರ್ ಇತ್ತು. 2023-24ರಲ್ಲಿ ಇದು 4.14 ಟ್ರಿಲಿಯನ್ ಡಾಲರ್​ಗೆ ಏರಿದೆ. ದೇಶದಲ್ಲಿ ಒಟ್ಟಾರೆ ಆರೋಗ್ಯಕ್ಕಾಗಿ ಆಗುತ್ತಿರುವ ವೆಚ್ಚದಲ್ಲಿ ಸರ್ಕಾರದ ಪಾಲು 14.9 ಪ್ರತಿಶತದಷ್ಟು ಹೆಚ್ಚಿದೆ. ಇದೇ ವೇಳೆ, ಆರೋಗ್ಯ ಆರೈಕೆ ವೆಚ್ಚದಲ್ಲಿ ಜನರ ಪಾಲು 2013-14ರಲ್ಲಿ ಶೇ. 64.2ರಷ್ಟು ಇತ್ತು. 2023-24ರಲ್ಲಿ ಇದು ಶೇ. 42.7ಕ್ಕೆ ಇಳಿದಿದೆ. ಅಂದರೆ, ಜನರ ಜೇಬಿನಿಂದ ಆರೋಗ್ಯ ಆರೈಕೆಗಾಗಿ ಆಗುತ್ತಿರುವ ವೆಚ್ಚ ಗಣನೀಯವಾಗಿ ಇಳಿಕೆ ಆಗಿದೆ. ನ್ಯಾಷನಲ್ ಹೆಲ್ತ್ ಅಕೌಂಟ್ಸ್​ನ ವರದಿಯಲ್ಲಿ ಈ ಅಂಕಿ ಅಂಶಗಳು ಇವೆ.

Loading...

ಇದನ್ನೂ ಓದಿ: ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 2.8, ಭಾರತದ್ದು ಶೇ. 7.2; ಗೋಲ್ಡ್​ಮನ್ ಸ್ಯಾಕ್ಸ್ ಭವಿಷ್ಯ

ಆರೋಗ್ಯ ಕ್ಷೇತ್ರದಲ್ಲಿ ವಿಮಾ ಸೇವೆಯ ಪಾತ್ರ…

ಕೇಂದ್ರ ಸರ್ಕಾರ ಪ್ರಾಯೋಜಿತ ಜನ್ ಆರೋಗ್ಯ ಯೋಜನೆ, ರಾಜ್ಯ ಆರೋಗ್ಯ ವಿಮಾ ಯೋಜನೆಗಳು, ಸಾಮಾಜಿಕ ಆರೋಗ್ಯ ವಿಮೆ, ಸರ್ಕಾರಿ ನೌಕರರಿಗೆ ಮೆಡಿಕಲ್ ರೀಇಂಬರ್ಸ್ಮೆಂಟ್ ಇತ್ಯಾದಿ ಯೋಜನೆಗಳು ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಿರುವುದು ಸ್ಪಷ್ಟವಾಗಿದೆ.

ಒಟ್ಟಾರೆ ಅರೋಗ್ಯ ವೆಚ್ಚದಲ್ಲಿ ಸರ್ಕಾರಿ ಪ್ರಾಯೋಜಿತ ವಿಮಾ ಯೋಜನೆಗಳ ಪಾಲು ಶೇ. 6ರಿಂದ 11ಕ್ಕೆ ಏರಿದೆ. ಖಾಸಗಿ ಹೆಲ್ತ್ ಇನ್ಷೂರೆನ್ಸ್ ವೆಚ್ವವೂ ಶೇ. 3.4ರಿಂದ ಶೇ. 10.2ಕ್ಕೆ ಏರಿದೆ. ಇದು ಆರೋಗ್ಯ ವಿಮಾ ಕ್ಷೇತ್ರ ದೇಶಾದ್ಯಂತ ಹೆಚ್ಚು ವ್ಯಾಪಕವಾಗುತ್ತಿರುವುದರ ದ್ಯೋತಕವೆಂದು ಪರಿಗಣಿಸಬಹುದು.

ಇದನ್ನೂ ಓದಿ: ವ್ಯಾಪಾರಿಗಳಿಗೆ ‘ಯುಪಿಐ ವ್ಯಾಪಾರ ಸಕ್ಷಮ್’ ಸ್ಕೀಮ್​ಗೆ ಚಾಲನೆ ನೀಡಿದ ಎನ್​ಪಿಸಿಐ; ಬ್ಯಾಂಕುಗಳಿಗೆ ಸಿಗಲಿದೆ ಪ್ರೋತ್ಸಾಹಧನ

ಖಾಸಗಿ ಆರೋಗ್ಯ ವಿಮಾ ವೆಚ್ಚ 2023-2ರಲ್ಲಿ 97,167 ಕೋಟಿ ರೂ ಮುಟ್ಟಿದೆ. ಇದರಲ್ಲಿ ಉದ್ಯೋಗಿಗಳ ಗ್ರೂಪ್ ಪಾಲಿಸಿಗಳಿಂದ 55,666 ಕೋಟಿ ರೂ ಹಾಗು ವೈಯಕ್ತಿಕ ಪಾಲಿಸಿಗಳಿಂದ 41,501 ಕೋಟಿ ರೂ ವೆಚ್ಚವಾಗಿದೆ.

ಪಿಎಂ ರಾಷ್ಟ್ರೀಯ ಡಯಾಲಿಸಿಸ್ ಪ್ರೋಗ್ರಾಮ್, ಪಿಎಂ ಜನೌಷಧಿ ಪರಿಯೋಜನೆ ಇತ್ಯಾದಿ ಹಲವು ಯೋಜನೆಗಳ ಮೂಲಕ ಸರ್ಕಾರವು ವೈದ್ಯಕೀಯ ವೆಚ್ಚವನ್ನು ಕಡಿಮೆಗೊಳಿಸಿದೆ. ಜನರು ತಮ್ಮ ಜೇಬಿನಿಂದ ಮಾಡುವ ವೆಚ್ಚ ಕಡಿಮೆಗೊಳ್ಳಲು ಇದು ಸಹಕಾರಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us