AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 2.8, ಭಾರತದ್ದು ಶೇ. 7.2; ಗೋಲ್ಡ್​ಮನ್ ಸ್ಯಾಕ್ಸ್ ಭವಿಷ್ಯ

ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಅತಿ ವೇಗದ ಬೆಳವಣಿಗೆ ಸಾಧಿಸಲಿದೆ ಎಂದು ಗೋಲ್ಡ್​ಮನ್ ಸ್ಯಾಕ್ಸ್ ರಿಸರ್ಚ್ ಮುಖ್ಯಸ್ಥ ಜ್ಯಾನ್ ಹಾಝಿಯಸ್ ಅವರು ಹೇಳಿದ್ದಾರೆ. ಇನ್ವೆಸ್ಟ್​ಮೆಂಟ್ ಬ್ಯಾಂಕ್​ನ ರಿಸರ್ಚ್ ವಿಭಾಗದ ಅಧ್ಯಯನದ ಪ್ರಕಾರ 2026-27ರಲ್ಲಿ ಭಾರತದ ಜಿಡಿಪಿ ಶೇ. 7.2 ಹೆಚ್ಚಬಹುದ. ಚೀನಾದ ಜಿಡಿಪಿ ಶೇ. 4.6ರಷ್ಟು ವೃದ್ಧಿಸಬಹುದು. ಉಳಿದ ಪ್ರಮುಖ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಬಹಳ ಮಂದಗತಿಯಲ್ಲಿರುತ್ತದೆ ಎಂದು ಈ ವರದಿ ಹೇಳುತ್ತದೆ.

ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 2.8, ಭಾರತದ್ದು ಶೇ. 7.2; ಗೋಲ್ಡ್​ಮನ್ ಸ್ಯಾಕ್ಸ್ ಭವಿಷ್ಯ
ಭಾರತದ ಆರ್ಥಿಕತೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2026 | 11:45 AM

Share

ನವದೆಹಲಿ, ನವೆಂಬರ್ 16: ಜಾಗತಿಕವಾಗಿ ಅನೇಕ ಅಡ್ಡಿ ಆತಂಕಗಳು, ತೊಡರುಗಳು ಎದುರಾಗುತ್ತಿರುವ ನಡುವೆಯೂ ಭಾರತದ ಆರ್ಥಿಕತೆ ಅದೆಷ್ಟು ಕ್ಷಮತೆ ಹೊಂದಿದೆ ಎಂಬುದು ಕಳೆದ ಕೆಲ ವರ್ಷಗಳಿಂದ ರುಜುವಾತಾಗಿರುವ ಸಂಗತಿ. ಭಾರತದ ಈ ಬೆಳವಣಿಗೆಯ ಓಟ ಮುಂದೆಯೂ ನಿರಾತಂಕವಾಗಿ ನಡೆಯಲಿದೆ ಎಂದು ಬಹಳಷ್ಟು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಈ ನಡುವೆ ಗೋಲ್ಡ್​ಮನ್ ಸ್ಯಾಕ್ಸ್ ರಿಸರ್ಚ್ (Goldman Sachs Research) ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞರ ಪ್ರಕಾರ ಭಾರತದ ಜಿಡಿಪಿ ಈ ಹಣಕಾಸು ವರ್ಷದಲ್ಲಿ (2026-27) ಶೇ. 7.2ರಷ್ಟು ಹೆಚ್ಚಲಿದೆ. ಇದೇ ಅವಧಿಯಲ್ಲಿ ಜಾಗತಿಕ ಬೆಳವಣಿಗೆ ಸರಾಸರಿಯಾಗಿ ಶೇ. 2.8ರಷ್ಟು ಮಾತ್ರ ಇರಬಹುದು ಎಂದು ಈ ವರದಿ ಹೇಳುತ್ತಿದೆ.

ಇನ್ವೆಸ್ಟ್​ಮೆಂಟ್ ಬ್ಯಾಂಕ್ ಆಗಿರುವ ಗೋಲ್ಡ್​ಮನ್ ಸ್ಯಾಕ್ಸ್​ನ ರಿಸರ್ಚ್ ವಿಭಾಗವು ಹಿಂದೆ ಮಾಡಿದ ಅಂದಾಜಿಗಿಂತ ಈ ಬಾರಿ ಹೆಚ್ಚು ಬೆಳವಣಿಗೆಯನ್ನು ಭಾರತ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಜಾಗತಿಕ ಬೆಳವಣಿಗೆಯ ನಿರೀಕ್ಷೆಯನ್ನೂ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಟ್ಟದಷ್ಟು ಸಾಲ; ಬೆಟ್ಟದಷ್ಟು ಕನಸು; ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ

ಕಚ್ಚಾ ತೈಲ ಬೆಲೆ ಕಡಿಮೆ ಆಗಿರುವುದರಿಂದ ಇಂಧನ ದರಗಳು ಕಡಿಮೆಗೊಳ್ಳಲಿವೆ. ಹಾಗೆಯೇ, ಎಐ ಕ್ಷೇತ್ರದ ಅಭಿವೃದ್ಧಿಯಿಂದ ಆರ್ಥಿಕವಾಗಿ ಸಹಾಯವಾಗಬಹುದು ಎಂಬುದು ಗೋಲ್ಡ್​ಮನ್ ಸ್ಯಾಕ್ಸ್ ರಿಸರ್ಚ್​ನ ಮುಖ್ಯಸ್ಥರಾದ ಜ್ಯಾನ್ ಹಾಝಿಯಸ್ (Jan Hatzius) ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯ ಮೇಲೆ ಈ ವರದಿಯು ಆಶಾಭಾವನೆ ಇರಿಸಿದೆ. ಒಂದು ವೇಳೆ ಪಶ್ಚಿಮ ಏಷ್ಯಾದಲ್ಲಿ ಕಲಹ ಮತ್ತೆ ಮುಂದುವರಿದರೆ ಬೆಳವಣಿಗೆ ದರ ಕಡಿಮೆಗೊಳ್ಳಬಹುದು.

ಗೋಲ್ಡ್​ಮನ್ ಸ್ಯಾಕ್ಸ್ ರಿಸರ್ಚ್ ವರದಿ ಪ್ರಕಾರ 2026-27ರಲ್ಲಿ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆ:

ಜಾಗತಿಕ ಸರಾಸರಿ: ಶೇ. 2.8

  1. ಭಾರತ: ಶೇ. 7.2
  2. ಚೀನಾ: ಶೇ. 4.5
  3. ಸ್ಪೇನ್: ಶೇ. 1.9
  4. ಅಮೆರಿಕ: ಶೇ. 2.4
  5. ಬ್ರಿಟನ್: ಶೇ. 1.4
  6. ಬ್ರೆಜಿಲ್: ಶೇ. 0.6
  7. ಯೂರೋಪ್: ಶೇ. 0.9
  8. ಜರ್ಮನಿ: ಶೇ. 1
  9. ಜಪಾನ್: ಶೇ. 1
  10. ಕೆನಡಾ: ಶೇ. 1.7

ಇದನ್ನೂ ಓದಿ: ರೋಗಿ ಬಯಸಿದ್ದೂ ಅದೇ, ವೈದ್ಯ ಕೊಟ್ಟಿದ್ದೂ ಅದೇ… ಜೊತೆಗೆ ಬಂತು ದೊಡ್ಡ ಗಿಫ್ಟ್; ಇದು ಕೆಲಸ ಕಳೆದುಕೊಂಡವನ ಖುಷಿ ಕಥೆ

ಮೇಲಿನ ಪಟ್ಟಿ ಗಮನಿಸಿದರೆ, ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗದ ಆರ್ಥಿಕ ಬೆಳವಣಿಗೆ ಹೊಂದಲಿರುವುದು. ಅದು ಬಿಟ್ಟರೆ ಚೀನಾದ ಜಿಡಿಪಿ ದರ ಹೆಚ್ಚು ಇದೆ. ಹೆಚ್ಚಿನ ಐರೋಪ್ಯ ದೇಶಗಳು ಶೇ. 2ಕ್ಕಿಂತಲೂ ಕಡಿಮೆ ಬೆಳವಣಿಗೆ ಹೊಂದಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More