ತೊಗರಿ, ಉದ್ದಿನ ಬೇಳೆ ಸಂಗ್ರಹ ಮಿತಿ; ನಿರ್ಬಂಧ ನಿಯಮದ ಅವಧಿ ಇನ್ನಷ್ಟು ವಿಸ್ತರಿಸಿದ ಸರ್ಕಾರ

|

Updated on: Sep 26, 2023 | 11:22 AM

Tur and Urad Dal stock limits: ತೊಗರಿ ಬೇಳೆ ಮತ್ತು ಉದ್ದಿನ ಬೇಳೆಗಳ ಸಂಗ್ರಹಕ್ಕೆ ಮಿತಿ ಹಾಕಿರುವ ನಿಯಮವನ್ನು ಡಿಸೆಂಬರ್ 31ರವರೆಗೂ ಮುಂದುವರಿಸಲಾಗಿದೆ. ಅಕ್ಟೋಬರ್ 30ರವರೆಗೆ ವಿವಿಧ ಬೇಳೆ ಕಾಳುಗಳ ಸಂಗ್ರಹಕ್ಕೆ ಮಿತಿ ಹಾಕಲಾಗಿದೆ. ತೊಗರಿ ಮತ್ತು ಉದ್ದಿನಬೇಳೆ ಸಂಗ್ರಹಮಿತಿ ನಿಯಮವನ್ನು ಈ ವರ್ಷದ ಕೊನೆಯವರೆಗೂ ವಿಸ್ತರಿಸಲಾಗಿದೆ. ಅಂದರೆ ಸಗಟು ವ್ಯಾಪಾರಿಗಳು, ದೊಡ್ಡ ರೀಟೇಲ್ ಮಾರಾಟಗಾರರು, ಮಿಲ್ ಮಾಲೀಕರು ಈ ಎರಡು ಧಾನ್ಯಗಳನ್ನು ಡಿಸೆಂಬರ್ 31ರವರೆಗೂ ಹೆಚ್ಚು ಸಂಗ್ರಹ ಮಾಡಿಟ್ಟುಕೊಳ್ಳುವಂತಿಲ್ಲ.

ತೊಗರಿ, ಉದ್ದಿನ ಬೇಳೆ ಸಂಗ್ರಹ ಮಿತಿ; ನಿರ್ಬಂಧ ನಿಯಮದ ಅವಧಿ ಇನ್ನಷ್ಟು ವಿಸ್ತರಿಸಿದ ಸರ್ಕಾರ
ಸಂಗ್ರಹಾಗಾರ
Follow us on

ನವದೆಹಲಿ, ಸೆಪ್ಟೆಂಬರ್ 26: ತೊಗರಿ ಬೇಳೆ ಮತ್ತು ಉದ್ದಿನ ಬೇಳೆಗಳ ಸಂಗ್ರಹಕ್ಕೆ ಮಿತಿ ಹಾಕಿರುವ ನಿಯಮವನ್ನು (stock limit) ಡಿಸೆಂಬರ್ 31ರವರೆಗೂ ಮುಂದುವರಿಸಲಾಗಿದೆ. ಅಕ್ಟೋಬರ್ 30ರವರೆಗೆ ವಿವಿಧ ಬೇಳೆ ಕಾಳುಗಳ ಸಂಗ್ರಹಕ್ಕೆ ಮಿತಿ ಹಾಕಲಾಗಿದೆ. ತೊಗರಿ ಮತ್ತು ಉದ್ದಿನಬೇಳೆ ಸಂಗ್ರಹಮಿತಿ ನಿಯಮವನ್ನು ಈ ವರ್ಷದ ಕೊನೆಯವರೆಗೂ ವಿಸ್ತರಿಸಲಾಗಿದೆ. ಅಂದರೆ ಸಗಟು ವ್ಯಾಪಾರಿಗಳು, ದೊಡ್ಡ ರೀಟೇಲ್ ಮಾರಾಟಗಾರರು, ಮಿಲ್ ಮಾಲೀಕರು ಈ ಎರಡು ಧಾನ್ಯಗಳನ್ನು ಡಿಸೆಂಬರ್ 31ರವರೆಗೂ ಹೆಚ್ಚು ಸಂಗ್ರಹ (Hoarding of stocks) ಮಾಡಿಟ್ಟುಕೊಳ್ಳುವಂತಿಲ್ಲ. ಆಧಾರ ಧಾನ್ಯಗಳನ್ನು ಸಂಗ್ರಹ ಮಾಡಿಕೊಟ್ಟುಕೊಂಡು ಕೃತಕವಾಗಿ ಬೆಲೆ ಹೆಚ್ಚಳ ಮಾಡುವ ಪ್ರಯತ್ನವನ್ನು ತಡೆಯಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಆಹಾರ ಧಾನ್ಯಗಳ ಸಂಗ್ರಹ ಮಿತಿ ನಿಯಮಗಳೇನು?

1955ರ ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ, ಬೆಲೆ ಏರಿಕೆಗೆ ಎಡೆ ಮಾಡುವಂತೆ ಆಹಾರ ವಸ್ತುಗಳನ್ನು ಸಂಗ್ರಹ ಮಾಡಬಾರದು. ಸರ್ಕಾರ ಈ ಕಾಯ್ದೆ ಅಡಿಯಲ್ಲಿ ಬೇಳೆಕಾಳುಗಳು ಸೇರಿದಂತೆ ವಿವಿಧ ಆಹಾರವಸ್ತುಗಳ ಸಂಗ್ರಹ ಮಾಡದಂತೆ ನಿಯಮಗಳನ್ನು ರೂಪಿಸಿದೆ.

ಇದನ್ನೂ ಓದಿ: ನೂರು ಕೋಟಿ ಜನರ ವಿಶ್ವಾಸ ಗಳಿಸಿರುವ ಆಧಾರ್ ಬಗ್ಗೆ… ಮೂಡೀಸ್ ಆರೋಪಗಳನ್ನು ತಳ್ಳಿಹಾಕಿದ ಸರ್ಕಾರ

ಸಗಟು ಮಾರಾಟಗಾರರು ಮತ್ತು ದೊಡ್ಡ ರೀಟೇಲ್ ಮಾರಾಟಗಾರರು ಸಂಗ್ರಹ ಮಾಡಬಹುದಾದ ಬೇಳೆಕಾಳುಗಳ ಮೊತ್ತವನ್ನು 200 ಮೆಟ್ರಿಕ್ ಟನ್​ನಿಂದ 50 ಮೆಟ್ರಿಕ್ ಟನ್​ಗೆ ಇಳಿಸಲಾಗಿದೆ. ಇನ್ನು, ಮಿಲ್​ಗಳು ತಮ್ಮ ಕಳೆದ ಮೂರು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಶೇ. 25ರಷ್ಟು ಭಾಗದ ಆಧಾರಧಾನ್ಯಗಳನ್ನು ಇಟ್ಟುಕೊಳ್ಳಬಹುದಿತ್ತು. ಹೊಸ ಆದೇಶದ ಪ್ರಕಾರ ಮಿಲ್​ಗಳು ಕಳೆದ ಒಂದು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಶೇ. 10ರಷ್ಟು ಭಾಗವನ್ನು ಮಾತ್ರ ಆಹಾರಧಾನ್ಯ ಸಂಗ್ರಹಿಸಬಹುದು.

ಇನ್ನು, ಆಹಾರವಸ್ತುಗಳನ್ನು ಆಮದು ಮಾಡುವವರು ಅವುಗಳನ್ನು 30 ದಿನಗಳಿಗೂ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ ಎಂದೂ ಸರ್ಕಾರ ಇತ್ತೀಚಿನ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಗೃಹಸಾಲಗಳ ಬಡ್ಡಿಗೆ ಸಬ್ಸಿಡಿ; ಕೇಂದ್ರದಿಂದ 60,000 ಕೋಟಿ ರೂ ಮೊತ್ತದ ಯೋಜನೆ ಶೀಘ್ರದಲ್ಲೇ?

ಈ ಆದೇಶ ಅಕ್ಟೋಬರ್ 30ರವರೆಗೂ ಇದೆ. ಇದೀಗ ಉದ್ದಿನಬೇಳೆ, ತೊಗರಿಬೇಳೆಗಳ ವಿಚಾರದಲ್ಲಿ ಈ ಮಿತಿ ಡಿಸೆಂಬರ್ 31ರವರೆಗೂ ಮುಂದುವರಿಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ