ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಒಂದು ಸುತ್ತೋಲೆಯನ್ನು ಹೊರಡಿಸಿದ್ದು ಅದರಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಲ್ಲಿ ವ್ಯಾಪಾರಿ ವಹಿವಾಟುಗಳ ಮೇಲೆ “ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ (PPI)” ಶುಲ್ಕವನ್ನು ಸೂಚಿಸಿದೆ. “ಎಲ್ಲಾ ಆನ್‌ಲೈನ್ ವ್ಯಾಪಾರಿಗಳು, ದೊಡ್ಡ ವ್ಯಾಪಾರಿಗಳು ಮತ್ತು ಸಣ್ಣ ಆಫ್‌ಲೈನ್ ವ್ಯಾಪಾರಿಗಳು ಪ್ರಿಪೇಯ್ಡ್ ಪಾವತಿ ಉಪಕರಣಗಳು ಅಥವಾ ಪಿಪಿಐ ಬಳಸಿ ಮಾಡುವ ರೂ.2,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿರುವ ಪಾವತಿಗಳಿಗೆ ವ್ಯವಹಾರ ಮೌಲ್ಯ/ಮೊತ್ತದ ಶೇ.1.1 ರ ದರದಲ್ಲಿ ವಿನಿಮಯವು ಅನ್ವಯಿಸುತ್ತದೆ. ” ಎಂದು ಎನ್‌ಪಿಸಿಐ ಇತ್ತೀಚಿನ ಸುತ್ತೋಲೆಯಲ್ಲಿ ತಿಳಿಸಿದೆ.
UPI ಬಳಸಿ ಮಾಡುವ ವ್ಯಾಪಾರಿ ವಹಿವಾಟುಗಳಿಗೆ ಏಪ್ರಿಲ್ 1 ರಿಂದ ಪಿಪಿಐ ಶುಲ್ಕವನ್ನು ಅನ್ವಯಿಸುವಂತೆ ಎನ್‌ಪಿಸಿಐ ಸುತ್ತೋಲೆ ಸೂಚಿಸಿದೆ. ಬ್ಯಾಂಕ್ ಖಾತೆ ಮತ್ತುಬ್ಯಾಂಕ್ ಮತ್ತು ಪ್ರಿಪೇಯ್ಡ್ ವ್ಯಾಲೆಟ್ ನಡುವಿನ ವ್ಯಕ್ತಿಯಿಂದ ವ್ಯಕ್ತಿಯ ವಹಿವಾಟು ಅಥವಾ ವ್ಯಕ್ತಿಯಿಂದ ವ್ಯಾಪಾರಿ ವಹಿವಾಟುಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.
NPCI Press Release: UPI is free, fast, secure and seamless
Every month, over 8 billion transactions are processed free for customers and merchants using bank-accounts@EconomicTimes @FinancialXpress @businessline @bsindia @livemint @moneycontrolcom @timesofindia @dilipasbe pic.twitter.com/VpsdUt5u7U— NPCI (@NPCI_NPCI) March 29, 2023
ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ (PPI) ಸರಕು ಮತ್ತು ಸೇವೆಗಳ ಖರೀದಿಗೆ ಅನುಕೂಲವಾಗುವ ಸಾಧನಗಳಾಗಿವೆ. ಇದು ಹಣಕಾಸು ಸೇವೆ, ಹಣ ರವಾನೆ ಸೌಲಭ್ಯಗಳನ್ನು ಸಕ್ರಿಯಗೊಳಿಸುತ್ತದೆ. PPI ಅಂದರೆ BHIM, Google Pay ಮುಂತಾದ ಆನ್‌ಲೈನ್ ವ್ಯಾಲೆಟ್‌ಗಳಾಗಿವೆ.
ಪಿಪಿಐಗಳನ್ನು ಬ್ಯಾಂಕ್‌ಗಳು ಮತ್ತು ಬ್ಯಾಂಕೇತರರು ನೀಡಬಹುದು. ಆರ್‌ಬಿಐನಿಂದ ಅನುಮೋದನೆ ಪಡೆದ ನಂತರ ಬ್ಯಾಂಕ್‌ಗಳು ಪಿಪಿಐಗಳನ್ನು ನೀಡಬಹುದು. ಬ್ಯಾಂಕೇತರ PPI ವಿತರಕರು ಭಾರತದಲ್ಲಿ ಸಂಘಟಿತವಾದ ಕಂಪನಿಗಳು ಮತ್ತು ಕಂಪನಿಗಳ ಕಾಯಿದೆ, 1956 / 2013 ಅಡಿಯಲ್ಲಿ ನೋಂದಾಯಿಸಲಾಗಿದೆ. ಅವರು RBI ನಿಂದ ಅಧಿಕಾರವನ್ನು ಪಡೆದ ನಂತರ ವ್ಯಕ್ತಿಗಳು / ಸಂಸ್ಥೆಗಳಿಗೆ PPI ಗಳನ್ನು ವಿತರಿಸಲು ಪಾವತಿ ವ್ಯವಸ್ಥೆಯನ್ನು ನಿರ್ವಹಿಸಬಹುದು.
ಇದಲ್ಲದೆ, NPCI ಸೆಪ್ಟೆಂಬರ್ 30, 2023 ರಂದು ಅಥವಾ ಅದಕ್ಕೂ ಮೊದಲು ಹೇಳಲಾದ ಬೆಲೆಯನ್ನು ಪರಿಶೀಲಿಸುತ್ತದೆ.
ಒಮ್ಮೆ ಹೆಚ್ಚುವರಿ ಶುಲ್ಕಗಳು ಜಾರಿಗೆ ಬಂದರೆ, PPI ವಿತರಕರು ಸುಮಾರು 15 ಬೇಸಿಸ್ ಪಾಯಿಂಟ್‌ಗಳನ್ನು ವಾಲೆಟ್-ಲೋಡಿಂಗ್ ಸೇವಾ ಶುಲ್ಕವಾಗಿ ರಿಮಿಟರ್ ಬ್ಯಾಂಕ್ ಅಥವಾ ಹಣವನ್ನು ಠೇವಣಿ ಮಾಡಲಿರುವ ಬ್ಯಾಂಕ್ಗಳಿಗೆ ಪಾವತಿಸುತ್ತಾರೆ ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ನಿಂದ ಮತ್ತೆ 559 ಉದ್ಯೋಗಿಗಳು ವಜಾ
ವಹಿವಾಟುಗಳನ್ನು ಸ್ವೀಕರಿಸುವ, ಪ್ರಕ್ರಿಯೆಗೊಳಿಸುವ ಮತ್ತು ಅಧಿಕೃತಗೊಳಿಸುವ ವೆಚ್ಚಗಳನ್ನು ಸರಿದೂಗಿಸಲು ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದರಿಂದ ವಹಿವಾಟು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ. NPCI ಟ್ವಿಟ್ಟರ್ ಸಂದೇಶದ ಪ್ರಕಾರ, “Paytm UPI ಉಚಿತ, ವೇಗ, ಸುರಕ್ಷಿತ ಮತ್ತು ತಡೆರಹಿತವಾಗಿದೆ. ಯಾವುದೇ ಗ್ರಾಹಕರು ಬ್ಯಾಂಕ್ ಖಾತೆಯಿಂದ, PPI/Paytm ವಾಲೆಟ್‌ನಿಂದ ಅಥವಾ UPI ನಿಂದ ಪಾವತಿ ಮಾಡಲು ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ.
Published On - 3:39 pm, Wed, 29 March 23