ಅಕ್ಟೋಬರ್​ನಲ್ಲಿ ಎರಡನೇ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್; ಈ ವರ್ಷ ಯಾವ ರಾಜ್ಯಗಳಿಗೆ ಎಷ್ಟು ತೆರಿಗೆ ಪಾಲು ಕೊಟ್ಟಿದೆ ಕೇಂದ್ರ?

|

Updated on: Nov 01, 2023 | 4:07 PM

GST Collection In 2023 October: ಈ ಅಕ್ಟೋಬರ್ ತಿಂಗಳಲ್ಲಿ 1,72,003 ಕೋಟಿ ರೂನಷ್ಟು ಜಿಎಸ್​ಟಿ ಕಲೆಕ್ಷನ್ ಆಗಿದೆ. ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ,ಏಪ್ರಿಲ್ ತಿಂಗಳು ಬಿಟ್ಟರೆ ಅಕ್ಟೋಬರ್​ನಲ್ಲೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗಿರುವುದು. 2023ರ ಏಪ್ರಿಲ್​ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಸಿಕ್ಕಿತ್ತು. ಇದರೊಂದಿಗೆ 2023-24ರ ಹಣಕಾಸು ವರ್ಷದಲ್ಲಿ ಸರಾಸರಿ ಜಿಎಸ್​ಟಿ ಸಂಗ್ರಹ ಒಂದು ತಿಂಗಳಿಗೆ 1.66 ಲಕ್ಷಕೋಟಿ ರೂ ಆದಂತಾಗಿದೆ.

ಅಕ್ಟೋಬರ್​ನಲ್ಲಿ ಎರಡನೇ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್; ಈ ವರ್ಷ ಯಾವ ರಾಜ್ಯಗಳಿಗೆ ಎಷ್ಟು ತೆರಿಗೆ ಪಾಲು ಕೊಟ್ಟಿದೆ ಕೇಂದ್ರ?
ಜಿಎಸ್​ಟಿ
Follow us on

ನವೆಂಬರ್ 1: ಈ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಜಿಎಸ್​ಟಿ ಸಂಗ್ರಹ (GST collection) ಗಣನೀಯವಾಗಿ ಹೆಚ್ಚಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್​ನಲ್ಲಿ 1,72,003 ಕೋಟಿ ರೂನಷ್ಟು ಜಿಎಸ್​ಟಿ ಕಲೆಕ್ಷನ್ ಆಗಿದೆ. ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ,ಏಪ್ರಿಲ್ ತಿಂಗಳು ಬಿಟ್ಟರೆ ಅಕ್ಟೋಬರ್​ನಲ್ಲೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗಿರುವುದು. 2023ರ ಏಪ್ರಿಲ್​ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಸಿಕ್ಕಿತ್ತು. ಇದರೊಂದಿಗೆ 2023-24ರ ಹಣಕಾಸು ವರ್ಷದಲ್ಲಿ ಸರಾಸರಿ ಜಿಎಸ್​ಟಿ ಸಂಗ್ರಹ ಒಂದು ತಿಂಗಳಿಗೆ 1.66 ಲಕ್ಷಕೋಟಿ ರೂ ಆದಂತಾಗಿದೆ. ಹಿಂದಿನ ವರ್ಷದ ಸರಾಸರಿಗೆ ಹೋಲಿಸಿದರೆ ಶೇ. 11ರಷ್ಟು ಹೆಚ್ಚಾಗಿದೆ. ಹಾಗೆಯೇ, ಈ ವರ್ಷ ಐಜಿಎಸ್​ಟಿಯನ್ನು ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಿದ್ದು, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಿಗೆ ಹೆಚ್ಚಿನ ಪಾಲು ಸಿಕ್ಕಿದೆ.

2023-24ರಲ್ಲಿ ಸಂಗ್ರಹವಾದ ಜಿಎಸ್​ಟಿ ತೆರಿಗೆ

  • ಏಪ್ರಿಲ್: 1.87 ಲಕ್ಷ ಕೋಟಿ ರೂ
  • ಮೇ: 1.57 ಲಕ್ಷ ಕೋಟಿ ರೂ
  • ಜೂನ್: 1.61 ಲಕ್ಷ ಕೋಟಿ ರೂ
  • ಜುಲೈ: 1.65 ಲಕ್ಷ ಕೋಟಿ ರೂ
  • ಆಗಸ್ಟ್: 1.59 ಲಕ್ಷ ಕೋಟಿ ರೂ
  • ಸೆಪ್ಟೆಂಬರ್: 1.63 ಲಕ್ಷ ಕೋಟಿ ರೂ
  • ಅಕ್ಟೋಬರ್: 1.72 ಲಕ್ಷ ಕೋಟಿ ರೂ

ಒಟ್ಟು ಏಳು ತಿಂಗಳಲ್ಲಿ 11.65 ಲಕ್ಷಕೋಟಿ ರೂನಷ್ಟು ಜಿಎಸ್​ಟಿ ಬಂದಿದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಅಕ್ಟೋಬರ್​ನಲ್ಲಿ ಬಂದಿರುವ 1.72 ಲಕ್ಷ ಕೋಟಿ ರೂ ಜಿಎಸ್​ಟಿಯಲ್ಲಿ ಸೆಂಟ್ರಲ್ ಜಿಎಸ್​ಟಿ 30,062 ಕೋಟಿ ರೂ, ಸ್ಟೇಟ್ ಜಿಎಸ್​ಟಿ 38,171 ಕೋಟಿ ರೂ, ಐಜಿಎಸ್​ಟಿ 91,315 ಕೋಟಿ ರೂ, ಹಾಗೂ ಸೆಸ್ 12,456 ಕೋಟಿ ರೂನಷ್ಟಿದೆ.

ಐಜಿಎಸ್​ಟಿಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗಿದೆ. ಕೇಂದ್ರಕ್ಕೆ 42,873 ಕೋಟಿ ರೂ ಸಿಕ್ಕಿದೆ. ರಾಜ್ಯಕ್ಕೆ 36,614 ಕೋಟಿ ರೂ ಪಾಲು ಬಂದಿದೆ. ಇದರೊಂದಿಗೆ ಅಕ್ಟೋಬರ್ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರಕ್ಕೆ 72,934 ಕೋಟಿ ರೂ, ರಾಜ್ಯ ಸರ್ಕಾರಗಳಿಗೆ 74,785 ಕೋಟಿ ರೂ ಸಿಕ್ಕಂತಾಗಿದೆ.

ಇದನ್ನೂ ಓದಿ: LPG Cylinder Price: ದೀಪಾವಳಿ ಹೊಸ್ತಿಲಲ್ಲಿ ಗ್ರಾಹಕರಿಗೆ ಶಾಕ್, ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಕಳೆದ ಏಳು ತಿಂಗಳಲ್ಲಿ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲು

ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ (2023ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ) ಐಜಿಎಸ್​ಟಿಯಲ್ಲಿ ರಾಜ್ಯಗಳಿಗೆ ಅವುಗಳ ಪಾಲನ್ನು ಹಂಚಲಾಗಿದೆ. ಎಸ್​ಜಿಎಸ್​ಟಿ ಮತ್ತು ಐಜಿಎಸ್​ಟಿ ಪಾಲು ಎರಡೂ ಸೇರಿ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಸಿಕ್ಕಿದೆ ಎಂಬ ವಿವರ ಈ ಟಾಪ್ 10 ಪಟ್ಟಿಯಲ್ಲಿದೆ…

  1. ಮಹಾರಾಷ್ಟ್ರ: 84,712 ಕೋಟಿ ರೂ
  2. ಉತ್ತರಪ್ರದೇಶ: 42,482 ಕೋಟಿ ರೂ
  3. ಕರ್ನಾಟಕ: 42,657 ಕೋಟಿ ರು
  4. ತಮಿಳುನಾಡು: 37,476 ಕೋಟಿ ರೂ
  5. ಗುಜರಾತ್: 36,322 ಕೋಟಿ ರೂ
  6. ಪಶ್ಚಿಮ ಬಂಗಾಳ: 24,607 ಕೋಟಿ ರೂ
  7. ತೆಲಂಗಾಣ: 23,478 ಕೋಟಿ ರೂ
  8. ರಾಜಸ್ಥಾನ: 22,571 ಕೋಟಿ ರೂ
  9. ಹರ್ಯಾಣ: 20,358 ಕೋಟಿ ರೂ
  10. ದೆಹಲಿ: 18,598 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ