ನವದೆಹಲಿ, ಅಕ್ಟೋಬರ್ 13: ಒಂದು ಸಮಯದಲ್ಲಿ ಮುಚ್ಚೇ ಹೋಗಬಹುದೇನೋ ಎನ್ನುವಂತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ ಇವತ್ತು ಭಾರತದ ವೈಭವದ ಕಥೆ ಹೇಳಲು ಮುಂಚೂಣಿಯಲ್ಲಿದೆ. ಭಾರತದ ಮಿಲಿಟರಿಗೆ ಎಚ್ಎಎಲ್ ಹಲವು ಶಸ್ತ್ರಾಸ್ತ್ರಗಳನ್ನು ನಿರ್ಮಿಸಿಕೊಡುತ್ತಿದೆ. ಭಾರತದ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಅದು ಒಂದಾಗಿದೆ. ಅಂತೆಯೇ, ಇದೀಗ ಎಚ್ಎಎಲ್ಗೆ ‘ಮಹಾರತ್ನ’ ಸ್ಥಾನಮಾನ ನೀಡಲಾಗಿದೆ. ಇದರೊಂದಿಗೆ ಎಚ್ಎಎಲ್ ಭಾರತದ 14ನೇ ಮಹಾರತ್ನ ಸಂಸ್ಥೆಯಾಗಿದೆ. ಕೇಂದ್ರದ ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ ನಿನ್ನೆ (ಅ. 12) ಈ ವಿಚಾರವನ್ನು ಬಹಿರಂಗಪಡಿಸಿದೆ.
‘ನವರತ್ನ’ ಸ್ಥಾನ ಹೊಂದಿದ್ದ ಎಚ್ಎಎಲ್ ಅನ್ನು ‘ಮಹಾರತ್ನ’ ಸ್ಥಾನಕ್ಕೇರಿಸಲು ಎರಡು ಉನ್ನತ ಮಟ್ಟದ ಸಮಿತಿಗಳು ಶಿಫಾರಸು ಮಾಡಿದ್ದವು. ಕೇಂದ್ರ ಹಣಕಾಸು ಕಾರ್ಯದರ್ಶಿ ನೇತೃತ್ವದ ಅಂತರ ಸಚಿವೀಯ ಸಮಿತಿ (ಐಎಂಸಿ), ಹಾಗೂ ಸಂಪುಟ ಕಾರ್ಯದರ್ಶಿ ನೇತೃತ್ವದ ಏಪೆಕ್ಸ್ ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು.
ಮಹಾರತ್ನ ಸ್ಥಾನಮಾನ ಪಡೆದ ಸರ್ಕಾರಿ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಕಡಿಮೆ ಇರುತ್ತದೆ. ಅದರ ಕಾರ್ಯಾಚರಣೆಯ ಸ್ವಾಯತ್ತತೆ ಹೆಚ್ಚಿರುತ್ತದೆ. ಅಂದರೆ, ಹೆಚ್ಚಿನ ಮೊತ್ತದ ವ್ಯವಹಾರಗಳನ್ನು ಸರ್ಕಾರದ ಅನುಮತಿ ಇಲ್ಲದೇ ಸ್ವತಂತ್ರವಾಗಿ ತೆಗೆದುಕೊಳ್ಳಬಹುದು. ಈಗ ಮಹಾರತ್ನ ಸ್ಥಾನ ಪಡೆದಿರುವ ಎಚ್ಎಎಲ್ ಸಂಸ್ಥೆ ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.
ಇದನ್ನೂ ಓದಿ: ಶ್ರೀಮಂತ ದೇಶಗಳಲ್ಲಿ ಹೆಲ್ತ್ಕೇರ್ ಸಿಸ್ಟಂ ಹೇಗಿದೆ ಅಂತ ನೋಡಿದ್ದೇನೆ: ಭಾರತದ ವೈದ್ಯಕೀಯ ವ್ಯವಸ್ಥೆ ಪ್ರಶಂಸಿಸಿದ ರಾಧಿಕಾ ಗುಪ್ತಾ
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಅವುಗಳ ಕ್ಷಮತೆ ಮತ್ತು ವಿಶಾಲತೆಯ ಆಧಾರದ ಮೇಲೆ ಮಹಾರತ್ನ, ನವರತ್ನ, ಮಿನಿರತ್ನ 1, ಮಿನಿರತ್ನ 2 ಎಂದು ವರ್ಗೀಕರಿಸಲಾಗಿದೆ. ಮಹಾರತ್ನ ಎಂಬುದು ಅತ್ಯುಚ್ಚ ಮಟ್ಟದ್ದಾಗಿರುತ್ತದೆ. ಮಹಾರತ್ನ ಪಟ್ಟಿಯಲ್ಲಿ ಎಚ್ಎಲ್ ಸೇರ್ಪಡೆ ಬಳಿಕ 14 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿವೆ. ನವರತ್ನ ವಿಭಾಗದಲ್ಲಿ 24 ಸಂಸ್ಥೆಗಳಿವೆ. ಮಿನಿರತ್ನ-1 ಕೆಟಗರಿಯಲ್ಲಿ 51 ಕಂಪನಿಗಳಿದ್ದರೆ, ಮಿನಿರತ್ನ-2 ವಿಭಾಗದಲ್ಲಿ 11 ಸಂಸ್ಥೆಗಳಿವೆ. ಮಹಾರತ್ನ ಸ್ಥಾನ ಪಡೆಯಲು ಇರುವ ಮಾನದಂಡಗಳೇನು ಎಂಬ ವಿವರ ಇಲ್ಲಿದೆ:
ಎಚ್ಎಎಲ್ ಸಂಸ್ಥೆ 2023-24ರ ಹಣಕಾಸು ವರ್ಷದಲ್ಲಿ 28,162 ಕೋಟಿ ರೂ ಬಿಸಿನೆಸ್ ಪಡೆದಿದೆ. ನಿವ್ವಳ ಲಾಭ 7,595 ಕೋಟಿ ರೂ ಇದೆ.
ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಇನ್ಕಮ್ ಟ್ಯಾಕ್ಸ್ ಸೇರಿದಂತೆ ಆದಾಯ ತೆರಿಗೆ ಸಂಗ್ರಹ 13 ಲಕ್ಷ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ