HDFC Bank: 2013ರಿಂದ 2020ರ ಮಧ್ಯೆ ಎಚ್​ಡಿಎಫ್​ಸಿ ಬ್ಯಾಂಕ್ ವಾಹನ ಸಾಲ ಪಡೆದವರಿಗೆ ಒಂದಿಷ್ಟು ಹಣ ರೀಫಂಡ್; ಯಾರಿಗೆ?

| Updated By: Srinivas Mata

Updated on: Jun 18, 2021 | 2:32 PM

2013ರಿಂದ 2020ರ ಮಧ್ಯೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ವಾಹನ ಸಾಲ ಪಡೆದಿದ್ದೀರಾ? ಆಗ ಅದರ ಜತೆಗೆ ಜಿಪಿಎಸ್​ ಸಾಧನವನ್ನು ಅಲ್ಲಿನ ಅಧಿಕಾರಿಗಳು ನಿಮಗೆ ಮಾರಿದ್ದರಾ? ಹಾಗಿದ್ದಲ್ಲಿ ಈಗ ಆ ಕಮಿಷನ್ ಹಣದ ರೀಫಂಡ್ ಮಾಡಲಾಗುತ್ತದೆ.

HDFC Bank: 2013ರಿಂದ 2020ರ ಮಧ್ಯೆ ಎಚ್​ಡಿಎಫ್​ಸಿ ಬ್ಯಾಂಕ್ ವಾಹನ ಸಾಲ ಪಡೆದವರಿಗೆ ಒಂದಿಷ್ಟು ಹಣ ರೀಫಂಡ್; ಯಾರಿಗೆ?
HDFC ಬ್ಯಾಂಕ್ 18 ವರ್ಷದೊಳಗಿನ ಯಾವುದೇ ಮಕ್ಕಳಿಗಾಗಿ ಕಿಡ್ಸ್ ಅಡ್ವಾಂಟೇಜ್ ಅಕೌಂಟ್ ತೆರೆಯಬಹುದು. ಆದರೆ ಪಾಲಕರು ಅಥವಾ ಪೋಷಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಈ ಉಳಿತಾಯ ಖಾತೆಯು ರೂ. 5,000 ಕನಿಷ್ಠ ಬ್ಯಾಲೆನ್ಸ್ ಮಾನದಂಡದೊಂದಿಗೆ ಬರುತ್ತದೆ ಮತ್ತು ಅದನ್ನು ನಿರ್ವಹಿಸಬೇಕು. ಪಾಲಕರು ಅಥವಾ ಪೋಷಕರ ಸಾವಿನ ಸಂದರ್ಭದಲ್ಲಿ ಈ ಖಾತೆ ಮೂಲಕವಾಗಿ ಮಗುವಿಗೆ 1 ಲಕ್ಷ ರೂಪಾಯಿಗಳ ಉಚಿತ ಶಿಕ್ಷಣ ವಿಮಾ ರಕ್ಷಣೆ ಇದೆ. ಮನಿಮ್ಯಾಕ್ಸಿಮೈಸರ್ ಸೌಲಭ್ಯವೂ ಇದೆ. ಇದರಲ್ಲಿ ಮಗುವಿನ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ರೂ. 35,000 ಮೀರಿದರೆ ರೂ. 25,000 ಮೀರಿದ ಮೊತ್ತವು ಮಗುವಿನ ಹೆಸರಿನಲ್ಲಿ 1 ವರ್ಷ 1 ದಿನದ ಫಿಕ್ಸೆಡ್​ ಡೆಪಾಸಿಟ್​ ಆಗಿ ತಾನೇ ತಾನಾಗಿ ವರ್ಗಾವಣೆಯಾಗುತ್ತದೆ. 7 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಬ್ಯಾಂಕಿನಿಂದ ಎಟಿಎಂ, ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಗುವು ಎಟಿಎಮ್‌ಗಳಲ್ಲಿ ರೂ. 2,500ವರೆಗೂ ಹಣವನ್ನು ಹಿಂಪಡೆಯಬಹುದು ಮತ್ತು ದಿನಕ್ಕೆ ರೂ. 10,000 ವ್ಯಾಪಾರ- ವಹಿವಾಟಿನ ಸ್ಥಳಗಳಲ್ಲಿ ಖರ್ಚು ಮಾಡಬಹುದು. ಆದರೆ ಇದಕ್ಕೆ ಪೋಷಕರ ಅನುಮತಿಯು ಬ್ಯಾಂಕ್‌ಗೆ ಬೇಕಾಗುತ್ತದೆ.
Follow us on

ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್​ ಆದ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ FY14ರಿಂದ FY20ರ ಮಧ್ಯೆ ವಾಹನ ಸಾಲದ ಭಾಗವಾಗಿ ಪಡೆದಿದ್ದ ಜಿಪಿಎಸ್​ ಸಾಧನದ ಕಮಿಷನ್ ಹಣವನ್ನು ಹಿಂತಿರುಗಿಸಲಿದೆ. ಗುರುವಾರದಂದು ಈ ಬಗ್ಗೆ ಮಾಧ್ಯಮದಲ್ಲಿ ನೋಟಿಸ್ ಬಂದಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ಹಣವನ್ನು ಮರುಪಾವತಿಸಲಾಗುವುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶನದ ಅನುಸಾರವಾಗಿ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಹಣವನ್ನು ಹಿಂತಿರುಗಿಸಲಾಗುತ್ತಿದೆ. ಜಿಪಿಎಸ್​ ಕಮಿಷನ್ ಮೊತ್ತವು ಒಟ್ಟಾರೆಯಾಗಿ ರೂ. 40 ಕೋಟಿಯಾಗುತ್ತದೆ ಎಂದು ಮೂಲಗಳು ತಿಳಿಸಿವೆ. “ಈ ನೋಟಿಸ್ ಮೂಲಕ ತಿಳಿಸುವುದೇನೆಂದರೆ, ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್ (ಬ್ಯಾಂಕ್)ನಿಂದ ವಾಹನ ಸಾಲ ಪಡೆದವರ ಜಿಪಿಎಸ್​ ಸಾಧನದ ಕಮಿಷನ್ ಹಣವನ್ನು ಹಿಂತಿರುಗಿಸಲಾಗುವುದು. ಯಾರು ಅಂಥ ವಾಹನ ಸಾಲವನ್ನು 2013-14 ಹಣಕಾಸು ವರ್ಷದಿಂದ 2019-20 ಹಣಕಾಸು ವರ್ಷದ ಮಧ್ಯೆ ಪಡೆದಿದ್ದು, ಅದರ ಭಾಗವಾಗಿ ಈ ಸಾಧನವನ್ನು ಪಡೆದಿರುತ್ತಾರೋ ಅವರಿಗೆ ಹಿಂತಿರುಗಿಸಲಾಗುವುದು,” ಎಂದು ಸಾರ್ವಜನಿಕ ನೋಟಿಸ್​ನಲ್ಲಿ ಬ್ಯಾಂಕ್​ನಿಂದ ತಿಳಿಸಲಾಗಿದೆ.

ಈ ರೀಫಂಡ್​ ಮೊತ್ತವು ಗ್ರಾಹಕರ ಮರುಪಾವತಿ ಬ್ಯಾಂಕ್​ ಖಾತೆಗೆ ಜಮೆ ಮಾಡಲಾಗುವುದು. ಒಂದು ವೇಳೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಅಥವಾ ಬ್ಯಾಂಕ್ ಖಾತೆ ಕ್ಲೋಸ್ ಆಗಿದ್ದಲ್ಲಿ ಅಂಥ ಗ್ರಾಹಕರು ತಮ್ಮ ನೋಂದಾಯಿತ ಮೇಲ್ ಐಡಿ ಮೂಲಕ ಸಂಪರ್ಕಿಸಬಹುದು. ಅಥವಾ ವಾಹನ ಸಾಲದ ಖಾತೆಯ ಮಾಹಿತಿಯೊಂದಿಗೆ ಮುಂದಿನ 30 ದಿನದೊಳಗಾಗಿ ಟೋಲ್ ಫ್ರೀ ನಂಬರ್ ಸಂಪರ್ಕಿಸುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ. ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ನಿಯಮಾವಳಿಗಳ ಪಾಲನೆಯಲ್ಲಿ ಉಲ್ಲಂಘನೆ ಆಗಿದೆ ಎಂಬ ಕಾರಣ ನೀಡಿ, ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 10 ಕೋಟಿ ರೂಪಾಯಿ ದಂಡ ಹಾಕಲಾಗಿತ್ತು. ಈ ದಂಡವು ನಿಯಮಾವಳಿಗಳ ಅನುಸಾರದಲ್ಲಿ ಕೊರತೆ ಕಾರಣಕ್ಕೆ ಹಾಕಲಾಗಿತ್ತೇ ವಿನಾ ಬೇರೆ ಯಾವುದಕ್ಕೂ ಅಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿತ್ತು. ಮೊದಲಿಗೆ ಆರ್​ಬಿಐನಿಂದ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಶೋಕಾಸ್ ನೋಟಿಸ್ ನೀಡಲಾಯಿತು. ಅದಕ್ಕೆ ಬಂದ ಉತ್ತರವನ್ನು ಆಧರಿಸಿ ಕ್ರಮ ಕೈಗೊಳ್ಳಲಾಯಿತು.

ವಾಹನ ಸಾಲಗಳ ವಿತರಣೆಯಲ್ಲಿ ಆದ ಅಸಮರ್ಪಕತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಗ್ರಾಹಕರು ವಾಹನ ಸಾಲ ಪಡೆಯುವ ವೇಳೆಯಲ್ಲಿ ಬ್ಯಾಂಕ್​ನ ಕೆಲವು ಅಧಿಕಾರಿಗಳು ಅವರನ್ನು ಜಿಪಿಎಸ್​ ಸಾಧನ ಖರೀದಿಸುವಂತೆ ಒತ್ತಾಯಿಸಿದ್ದಾರೆ. ಈ ದುರ್ವರ್ತನೆಯನ್ನು ಎಚ್​ಡಿಎಫ್​ಸಿ ಬ್ಯಾಂಕ್​ನ ಮಾಜಿ ಎಂ.ಡಿ. ಹಾಗೂ ಸಿಇಒ ಆದಿತ್ಯ ಪುರಿ ಸಹ ಒಪ್ಪಿಕೊಂಡಿದ್ದಾರೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಅವರು, ಆಂತರಿಕ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದರು. ನಮಗೆ ಕೆಲವು ವಿಷಲ್ ಬ್ಲೋವರ್ಸ್​ರಿಂದ ದೂರುಗಳು ಬಂದಿವೆ. ಆಂತರಿಕ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ಆಗಿಲ್ಲ. ಜತೆಗೆ ನಮ್ಮ ಸಾಲದ ಪೋರ್ಟ್​ಫೋಲಿಯೋದ ಮೇಲೂ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದರು. ಆ ಸಭೆ 2020ರ ಜುಲೈ 18ನೇ ತಾರೀಕು ನಡೆದಿತ್ತು. ​

ಇದನ್ನೂ ಓದಿ: Penalty to HDFC Bank: ಎಚ್​ಡಿಎಫ್​ಸಿ ಬ್ಯಾಂಕ್​ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್​ನ ಹೊಸ ಡಿಜಿಟಲ್ ಕೊಡುಗೆಗಳು, ಕ್ರೆಡಿಟ್​ ಕಾರ್ಡ್​ ಗ್ರಾಹಕರ ನೋಂದಣಿಗೆ ಆರ್​ಬಿಐ ನಿರ್ಬಂಧ

(HDFC Bank will refund GPS device commission money to auto loan borrowers who bought loan bundle with device between FY14 to FY20. Amount will be credited within 30 days)

Published On - 2:31 pm, Fri, 18 June 21