ಉಳಿತಾಯ ಖಾತೆಗಳು (Savings Account), ಲಿಕ್ವಿಡ್ ಫಂಡ್ಗಳು, ಅಲ್ಪಾವಧಿ ನಿಧಿಗಳು (Short Term Funds), ನಿಶ್ಚಿತ ಠೇವಣಿಗಳು (Fixed Deposits), ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್ಗಳು, ಟ್ರೆಷರಿ ಬಿಲ್‌ಗಳು, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್, ರೆಕರಿಂಗ್ ಡೆಪಾಸಿಟ್ಸ್ (RD) ಇವೇ ಮೊದಲಾದವು ಜನಸಾಮಾನ್ಯರಿಗೆ 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯಕ್ಕೆ (ಅಲ್ಪಾವಧಿಯ ಹಣಕಾಸಿನ ಉದ್ದೇಶಗಳಿಗಾಗಿ) ಸೂಕ್ತ ಆಗಬಹುದಾದ ಜನಪ್ರಿಯ ಆಯ್ಕೆಗಳು. ಅತ್ಯುನ್ನತ ರಿಸಲ್ಟ್ಗೆ ಹೂಡಿಕೆದಾರರು 3 ರಿಂದ 5 ವರ್ಷಗಳವರೆಗೆ ಅಲ್ಪಾವಧಿಯ ಇನ್ಸ್ಟ್ರುಮೆಂಟ್ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗುವುದು; ಆದ್ದರಿಂದ ಇಲ್ಲಿ ಲಿಕ್ವಿಡಿಟಿ ಎಂಬ ಅಂಶವನ್ನು ಪರಿಗಣಿಸಿಲ್ಲ. ಆದರೂ ಈ ಲೇಖನದಲ್ಲಿ ಖಚಿತವಾದ ಆದಾಯ ಎಂಬ ಸಂಗತಿಯನ್ನು ಪರಿಗಣಿಸಲಾಗಿದೆ. ಡಿಐಸಿಜಿಸಿ ನೀಡುವ 5 ಲಕ್ಷದವರೆಗೆ ಠೇವಣಿ ಸುರಕ್ಷತೆ (ಡೆಪಾಸಿಟ್ ಮೇಲಿನ ಇನ್ಷೂರೆನ್ಸ್), ಹಿರಿಯ ನಾಗರಿಕರಿಗೆ ಹೆಚ್ಚುವರಿ ಆದಾಯ ಮತ್ತು ಹೂಡಿಕೆದಾರರಿಗೆ ಅಪಾಯವಿಲ್ಲದ ಫಿಕ್ಸೆಡ್ ಡೆಪಾಸಿಟ್ಗಳನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ 3 ರಿಂದ 5 ವರ್ಷಗಳ ನಿಶ್ಚಿತ ಠೇವಣಿಗಳ (2 ಕೋಟಿಗಿಂತ ಕಡಿಮೆ) ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತಿರುವ ಟಾಪ್ 10 ಬ್ಯಾಂಕ್ಗಳ ಬಗೆಗಿನ ಮಾಹಿತಿ ಇಲ್ಲಿದೆ.
ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಎಫ್ಡಿಗಳ ಮೇಲೆ ಉತ್ತಮ ಬಡ್ಡಿ ನೀಡುವಂಥವು:
1. ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 7.25 ಹಾಗೂ ಹಿರಿಯ ನಾಗರಿಕರಿಗೆ- ಶೇ 7.75
2. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ 7.25
3. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ 7.25
4. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ 6.75
5. ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6.75
6. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6.75
7. ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50
8. ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50 (1 ವರ್ಷದಿಂದ 5 ವರ್ಷದೊಳಗೆ)
9. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50
10. ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.75 ಹಾಗೂ ಹಿರಿಯ ನಾಗರಿಕರಿಗೆ- ಶೇ 6.25
(ಮೂಲ: ಬ್ಯಾಂಕ್ ವೆಬ್ಸೈಟ್ಗಳು)
ಖಾಸಗಿ ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಉತ್ತಮ ಬಡ್ಡಿ ನೀಡುವಂಥವು:
1. ಡಿಸಿಬಿ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.50 ಹಾಗೂ ಹಿರಿಯ ನಾಗರಿಕರಿಗೆ- ಶೇ 7
2. ಆರ್ಬಿಎಲ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.30 ಹಾಗೂ ಹಿರಿಯ ನಾಗರಿಕರಿಗೆ- ಶೇ 6.80
3. ಯೆಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 7
4. ಇಂಡಸ್ಇಂಡ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50
5. ಐಡಿಎಫ್ಸಿ ಫಸ್ಟ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50
6. ಆಕ್ಸಿಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.40 ಹಾಗೂ ಹಿರಿಯ ನಾಗರಿಕರಿಗೆ- ಶೇ 5.90
7. ಐಸಿಐಸಿಐ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.35 ಹಾಗೂ ಹಿರಿಯ ನಾಗರಿಕರಿಗೆ- ಶೇ 5.85
8. ಎಚ್ಡಿಎಫ್ಸಿ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80
9. ಬಂಧನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6
10. ಕೊಟಕ್ ಮಹೀಂದ್ರಾ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ 5.70
(ಮೂಲ: ಬ್ಯಾಂಕ್ ವೆಬ್ಸೈಟ್ಗಳು)
ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ 3ರಿಂದ 5 ವರ್ಷದ ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಉತ್ತಮ ಬಡ್ಡಿ ನೀಡುವಂಥವು:
1. ಯೂನಿಯನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.50 ಹಾಗೂ ಹಿರಿಯ ನಾಗರಿಕರಿಗೆ- ಶೇ 6
2. ಕೆನರಾ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.50 ಹಾಗೂ ಹಿರಿಯ ನಾಗರಿಕರಿಗೆ- ಶೇ 6
3. ಎಸ್ಬಿಐ: ಸಾಮಾನ್ಯ ಎಫ್ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80
4. ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80
5. ಐಡಿಬಿಐ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80
6. ಬ್ಯಾಂಕ್ ಆಫ್ ಬರೋಡ: ಸಾಮಾನ್ಯ ಎಫ್ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 5.75
7. ಪಂಜಾಬ್ ನ್ಯಾಷನಲ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 5.75
8. ಇಂಡಿಯನ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 5.75
9. ಇಂಡಿಯನ್ ಓವರ್ಸೀಸ್ ಬ್ಯಾಂಕ್: ಸಾಮಾನ್ಯ ಎಫ್ಡಿ ದರ- ಶೇ 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ 5.70
10. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್ಡಿ ದರ- ಶೇ 5 ಹಾಗೂ ಹಿರಿಯ ನಾಗರಿಕರಿಗೆ- ಶೇ 5.50
(ಮೂಲ: ಬ್ಯಾಂಕ್ ವೆಬ್ಸೈಟ್ಗಳು)
Published On - 4:36 pm, Thu, 5 August 21