ನವದೆಹಲಿ, ನವೆಂಬರ್ 26: ಫಿನ್ಲ್ಯಾಂಡ್ ಮೂಲದ ನೊಕಿಯಾ ಬ್ರ್ಯಾಂಡ್ನ ಫೋನ್ಗಳನ್ನು ತಯಾರಿಸುವ ಎಚ್ಎಂಡಿ ಗ್ಲೋಬಲ್ ಸಂಸ್ಥೆ ತನ್ನ ಕಾರ್ಯಸ್ಥಳವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುವ ಪ್ರಯತ್ನದಲ್ಲಿದೆ. ತನ್ನ ಹೆಚ್ಚಿನ ಪ್ರೊಡಕ್ಷನ್ ಅನ್ನು ಚೀನಾದಿಂದ ಹೊರಗೆ ತರುತ್ತಿದೆ. ಭಾರತವನ್ನು ತನ್ನ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಮಾಡಿಕೊಳ್ಳಲು ಎಚ್ಎಂಡಿ ಹೊರಟಿದೆ. ತನಗೆ ಬಿಡಿಭಾಗಗಳನ್ನು ಪೂರೈಸುವ ಸರಬರಾಜುದಾರ ಕಂಪನಿಗಳನ್ನೂ ಕೂಡ ಭಾರತದಲ್ಲಿ ಪ್ರೊಡಕ್ಷನ್ ಆರಂಭಿಸುವಂತೆ ಎಚ್ಎಂಡಿ ಕರೆ ನೀಡಿದೆ. ಈ ಸಂಬಂಧ ಸಪ್ಲೈಯರ್ ಸಂಸ್ಥೆಗಳ ಜೊತೆ ಅದು ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಚೀನಾದಿಂದ ಆಮದಾಗುವ ಸರಕುಗಳಿಗೆ ಹೆಚ್ಚು ತೆರಿಗೆ ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕೆ ಎಚ್ಎಂಡಿ ಸಂಸ್ಥೆ ಚೀನಾದ ಹೊರಗೆ ಹೆಚ್ಚಿನ ಆಪರೇಶನ್ಸ್ ಅನ್ನು ಶಿಫ್ಟ್ ಮಾಡಬಹುದು ಎನ್ನಲಾಗಿದೆ.
ಇದನ್ನೂ ಓದಿ: ರೂಯಾ ಫ್ಯಾಮಿಲಿ ಬಾಂಡಿಂಗ್… ಕಷ್ಟನಷ್ಟದಲ್ಲೂ ಬೇರ್ಪಡದ ಕುಟುಂಬ
ಭಾರತದಲ್ಲಿ ಡಿಕ್ಸಾನ್ ಟೆಕ್ನಾಲಜೀಸ್ ಸಂಸ್ಥೆ ಎಚ್ಎಂಡಿಯ ನೊಕಿಯಾ ಫೋನ್ಗಳನ್ನು ತಯಾರಿಸುವ ಗುತ್ತಿಗೆ ಪಡೆದಿದೆ. ಸದ್ಯ ಭಾರತದಲ್ಲಿ ತಯಾರಾಗುವ ನೊಕಿಯಾ ಬ್ರ್ಯಾಂಡ್ನ ಫೋನ್ಗಳು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದೆ. ಈಗ ಅಮೆರಿಕ ಮತ್ತು ಯೂರೋಪ್ನ ಮಾರುಕಟ್ಟೆಗಳಿಗೂ ಭಾರತದಿಂದಲೇ ಸರಬರಾಜು ಮಾಡುವ ಉದ್ದೇಶ ಎಚ್ಎಂಡಿಯದ್ದು.
ಫಿನ್ಲೆಂಡ್ ಮೂಲದ ಎಚ್ಎಂಡಿ ಸಂಸ್ಥೆ ತನ್ನ ಮ್ಯಾನುಫ್ಯಾಕ್ಚರಿಂಗ್ ಆಪರೇಶನ್ಸ್ ಅನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಉದ್ದೇಶಿಸಿದೆಯಾದರೂ ತರಾತುರಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ‘ಫೋನ್ಗಳನ್ನು ರಫ್ತು ಮಾಡಬೇಕಾದರೆ, ಉತ್ಪಾದನಾ ವೆಚ್ಚ, ಗುಣಮಟ್ಟ, ಡೆಡ್ಲೈನ್ನಲ್ಲಿ ಪೂರೈಕೆ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಈ ವಿಚಾರದಲ್ಲಿ ಭಾರತ ಎಷ್ಟು ಭರವಸೆ ಉಳಿಸಿಕೊಳ್ಳುತ್ತದೆ ಎಂಬುದರ ಮೇಲೆ ಚೀನಾದಿಂದ ಇಲ್ಲಿಗೆ ಉತ್ಪಾದನಾ ಕಾರ್ಯವನ್ನು ವರ್ಗಾಯಿಸುವುದು ಅವಲಂಬಿತವಾಗಿರುತ್ತದೆ,’ ಎಂದು ಎಚ್ಎಂಡಿಯ ಎಕ್ಸಿಕ್ಯೂಟಿವ್ವೊಬ್ಬರು ಹೇಳಿದ್ದಾಗಿ ಮನಿಕಂಟ್ರೋಲ್ನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಪ್ಯಾನ್ 2.0 ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತಾ? ಕ್ಯೂಆರ್ ಕೋಡ್ ಇರುವ ಪ್ಯಾನ್ ಪಡೆಯುವುದು ಹೇಗೆ?
ಎಚ್ಎಂಡಿ ಸಂಸ್ಥೆ ಭಾರತ ಸರ್ಕಾರದಿಂದ ಇನ್ನಷ್ಟು ಪೂರಕ ನೀತಿಯನ್ನು ಎದುರುನೋಡುತ್ತಿದೆ. ಸ್ಥಳೀಯವಾಗಿ ಬಿಡಿಭಾಗಗಳು ಸಿಗುವ ಇಕೋಸಿಸ್ಟಂ ಬೆಳೆಯಲು ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಈ ಸಂಬಂಧ ಸರ್ಕಾರದ ನೀತಿ ಏನು ಎಂಬುದು ಸ್ಪಷ್ಟವಾಗಿ ಗೊತ್ತಾದರೆ ಭಾರತಕ್ಕೆ ಪೂರ್ಣಪ್ರಮಾಣದಲ್ಲಿ ಬರಲು ಸಾಧ್ಯವಾಗಬಹುದು ಎಂಬುದು ಅದರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ